ರಾಮನಗರ –
ಇನ್ನೇನು ವೃತ್ತಿಯ ಕೊನೆ ದಿನ ಕೆಲಸ ಮುಗಿಸಿ ನಿವೃತ್ತಿ ಜೀವನ ಕಳೆಯಬೇಕಿದ್ದ ರಾಮನಗರ ಆರ್ಟಿಓ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತಿ ದಿನ ಆರ್ಟಿಓ ಶಿವಕುಮಾರ್ನನ್ನು ಲೋಕಾಯುಕ್ತರು ಬಂಧಿಸಿದ್ದಾರೆ
ರಾಮನಗರ ಆರ್ ಟಿಓ ಆಗಿರುವ ಶಿವಕುಮಾರ್ ಅವರದ್ದು (ಜೂನ್ 28) ಕೆಲಸದ ಕೊನೆ ದಿನ ನಿವೃತ್ತಿಯಾಗುವವರು ಇದ್ದರು ಆದ್ರೆ, ಕೊನೆಯ ದಿನವೇ ಆರ್ ಟಿಓ ಶಿವಕುಮಾರ್ ಅವರಿಗೆ ಲೋಕಾಯುಕ್ತ ಬಿಗ್ ಶಾಕ್ ಕೊಟ್ಟಿದೆರಾಮನಗರ ಆರ್ ಟಿಓ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವ ದೂರುಗಳ ಮೇರೆಗೆ ಲೋಕಾ ಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ
ಇನ್ನೇನು ಕೊನೆ ದಿನ ಕೆಲಸ ಮುಗಿಸಿ ಮನೆಗೆ ಹೊರಡಬೇಕೆಂದಿದ್ದ ಶಿವಕುಮಾರ್ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.ಸರ್ಕಾರಕ್ಕೆ ಕೋಟ್ಯಾಂ ತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು, ರಾಮ ನಗರ RTO ಅಧಿಕಾರಿ ಶಿವಕುಮಾರ್, ಎಸ್ಡಿಎ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ಅವರನ್ನು ಬಂಧಿಸಿದ್ದಾರೆ.
ಅಲ್ಲದೇ ರಾಮನಗರ ಆರ್ಟಿಓ ಕಚೇರಿ, ಎಸ್ಡಿಎ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿಸುತ್ತಿದ್ದಾರೆ.ಸೀಜ್ ಮಾಡಿರುವ ವಾಹನಗಳ ದಾಖಲೆಯನ್ನು ನೀಡಿ ಮಾರಾಟ, ಹಳೇ ಟ್ರ್ಯಾಕ್ಟರ್ಗಳಿಗೆ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ.
ಒಟ್ಟು 2 ಸಾವಿರ ಟ್ರ್ಯಾಕ್ಟರ್ಗಳಿಗೆ ಹೊಸ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ. ತಪ್ಪು ಮಾಡಿದ ವರನ್ನು ಕಾಲ ಯಾರನ್ನು ಬಿಡುವುದಿಲ್ಲ ಅಂತಾರೆ ಅದರಂತೆ ಇನ್ನೇನು ಇಂದು ಕೊನೆ ದಿನ ಕೆಲಸ ಮುಗಿಸಿ ನಿವೃತ್ತಿ ಜೀವನ ಕಳೆಯಬೇಕಿದ್ದ ಆರ್ಟಿಓ ಇದೀಗ ಲೋಕಾಯುಕ್ತ ಬಲೆಗೆ ಬದ್ದು ಜೈಲು ಸೇರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಮನಗರ…..