ಚಿಕ್ಕಮಗಳೂರು –
ಗೌರಿ ಹಬ್ಬದಂದು ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಕಾರ್ಯಕ್ರಮ – ಠಾಣೆಯಲ್ಲಿಯೇ ಮಡಿಲಿಗೆ ಅಕ್ಕಿ ತುಂಬಿ, ತಲೆಗೆ ಹೂ ಮುಡಿಸಿ, ಬಳೆ ತೊಡಿಸಿ ಶಾಸ್ತ್ರೋತ್ರವಾಗಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಸಾಮಾನ್ಯವಾಗಿ ಪೊಲೀಸರು ಅಂದರೆ ಆ ಕೆಲಸ ಈ ಕೆಲಸ ಎನ್ನುತ್ತಾ ಸದಾ ಒಂದಿಲ್ಲೊಂದು ಒಂದು ಕೆಲಸ ಕಾರ್ಯಗಳ ನಡುವೆ ಬ್ಯೂಜಿಯಾಗಿರುವ ಪೊಲೀಸರು ವಿಶೇಷ ಕಾರ್ಯವನ್ನು ಮಾಡಿದ್ದಾರೆ. ಹೌದು ಕಚೇರಿಯಲ್ಲಿನ ಮಹಿಳಾ ಸಿಬ್ಬಂದಿಯೊ ಬ್ಬರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡುವ ಮೂಲಕ ಕರ್ತವ್ಯದ ನಡುವೆ ಹೊಸತನಕ್ಕೆ ನಾಂದಿ ಯನ್ನು ಹಾಡಿದ್ದಾರೆ
ಚಿಕ್ಕಮಗಳೂರು ಪೊಲೀಸರು.ಹೌದು ಜಿಲ್ಲೆಯ ಬೀರೂರ ಪೊಲೀಸ್ ಠಾಣೆಯಲ್ಲಿನ ಮಹಿಳಾ ಪೇದೆ ಮಮತಾ ಗೆ ಸೀಮಂತವನ್ನು ಮಾಡಿದ್ದಾರೆ ಠಾಣೆಯ ಸಿಬ್ಬಂದಿಗಳು.ಗೌರಿ ಗಣೇಶದ ಹಬ್ಬದ ದಿನವೇ ಮಹಿಳಾ ಪೇದೆಗೆ ಸೀಮಂತವನ್ನು ಮಾಡಿ ದ್ದಾರೆ.ಪೊಲೀಸ್ ಠಾಣೆಯಲ್ಲೇ ಮಹಿಳಾಪೇದೆಗೆ ಸೀಮಂತವನ್ನು ಶಾಸ್ತ್ರೋತ್ರವಾಗಿ ಮಾಡಿದ್ದಾರೆ.
ಬೀರೂರು ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಈ ಒಂದು ಕಾರ್ಯವು ನಡೆಯಿತು ಠಾಣೆಯ ಮಹಿಳಾಪೇದೆ ಮಮತಾಗೆ ಸೀಮಂತವನ್ನು ಮಾಡಿದ ಸಹ ಸಿಬ್ಬಂದಿಗಳು ಶುಭ ಹಾರೈಸಿದ್ರು.ಮಡಿಲಿಗೆ ಅಕ್ಕಿ ತುಂಬಿ, ತಲೆಗೆ ಹೂ ಮುಡಿಸಿ, ಬಳೆ ತೊಡಿಸಿ ಸೀಮಂತನವನ್ನು ಮಾಡಿದರು.ಸಹ ಸಿಬ್ಬಂದಿಗಳ ಸೀಮಂತ ಕಾರ್ಯಕ್ಕೆ ಮಮತಾ ಸಂತಸವನ್ನು ವ್ಯಕ್ತಪಿಡಿ ಸಿದ್ದು ಕಂಡು ಬಂದಿತು.
ಕಳೆದ ಹಲವು ವರ್ಷಗಳಿಂದ ಬೀರೂರು ಠಾಣೆ ಯಲ್ಲಿ ಮಮತಾ ಸೇವೆಯನ್ನು ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಠಾಣೆಯಲ್ಲಿ ವಿಶೇಷವಾದ ಕಾರ್ಯ ಕ್ರಮವೊಂದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..