ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ 60ನೇ ಹುಟ್ಟು ಹಬ್ಬಕ್ಕಾಗಿ 60 ಬಡ ಕುಟುಂಬಗಳಿಗೆ ವಿತರಣೆಯಾಗಲಿವೆ 60 ಗೋ ಸಮರ್ಪಣೆ – ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ದೊಂದು ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಸಿದ್ದಾರೂಢ ಮಠ ಹೊಸ ದೊಂದು ಮುನ್ನಡೆ ಬರೆದರು ಮಣಿಕಂಠ ಶ್ಯಾಗೋಟಿ,ಪ್ರೀತಮ್ ಅರಕೇರಿ,ಸಂತೋಷ ಜೀನಗೌಡರ,ಶರಣು ಅಂಗಡಿ….

Suddi Sante Desk
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ 60ನೇ ಹುಟ್ಟು ಹಬ್ಬಕ್ಕಾಗಿ 60 ಬಡ ಕುಟುಂಬಗಳಿಗೆ ವಿತರಣೆಯಾಗಲಿವೆ 60 ಗೋ ಸಮರ್ಪಣೆ – ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ದೊಂದು ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಸಿದ್ದಾರೂಢ ಮಠ ಹೊಸ ದೊಂದು ಮುನ್ನಡೆ ಬರೆದರು ಮಣಿಕಂಠ ಶ್ಯಾಗೋಟಿ,ಪ್ರೀತಮ್ ಅರಕೇರಿ,ಸಂತೋಷ ಜೀನಗೌಡರ,ಶರಣು ಅಂಗಡಿ….

ಹುಬ್ಬಳ್ಳಿ-

 

ಸಾಮಾನ್ಯವಾಗಿ ಯಾರಾದರೂ ರಾಜಕೀಯ ನಾಯಕರ ಹುಟ್ಟು ಹಬ್ಬ ಇದೆ ಅಂದರೆ ಸಾಕು ಆರೋಗ್ಯ ಶಿಬಿರ ಇಲ್ಲವೇ ವೇದಿಕೆಯ ಕಾರ್ಯ ಕ್ರಮ ಇಲ್ಲವೇ ಕೇಕ್ ಕತ್ತರಿಸಿ ಅಥವಾ ರೋಗಿಗ ಳಿಗೆ ಹಣ್ಣು ಹಂಪಲಗಳನ್ನು  ವಿತರಣೆ ಮಾಡಿ ನಾಯಕರ ಹುಟ್ಟು ಹಬ್ಬವನ್ನು ಅವರವರ ಅಭಿಮಾನಿಗಳು ಕಾರ್ಯಕರ್ತರು ಆಚರಣೆ ಮಾಡುತ್ತಾರೆ

ಹೀಗಿರುವಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಆಪ್ತರು ವಿಶೇಷವಾದ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದ್ದಾರೆ.ಹೌದು ಪ್ರತಿ ಯೊಬ್ಬರು 60 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ  ಒಂದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇವೇಲ್ಲದರ ನಡುವೆ ಯುವಕರ ಟೀಮ್ ವೊಂದು ಅರ್ಥಪೂರ್ಣ ವಾದ ಕಾರ್ಯಕ್ರಮವನನ್ನು ಹಮ್ಮಿಕೊಂಡಿದೆ

ಹೌದು 60 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ 60 ಬಡ ಕುಟುಂಬಗಳಿಗೆ ಗೋ ಸಮರ್ಪಣೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಹೌದು ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ದಾರೂಡ ಮಠದಲ್ಲಿ ದಿನಾಂಕ 28-11-2022 ಸೋಮವಾರ ಮಧ್ಯಾಹ್ನ 3 ಗಂಟೆಗೆ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಹ್ಲಾದ್ ಜೋಶಿ ಅವರ ಯುವ ಅಭಿಮಾನಿ ಬಳಗದ ಸದಸ್ಯರಾದ ಮಣಿಕಂಠ ಶ್ಯಾಗೋಟಿ, ಪ್ರೀತಮ್ ಅರಕೇರಿ,ಸಂತೋಷ ಜೀನಗೌಡರ ಶರಣು ಅಂಗಡಿ.ಸೇರಿದಂತೆ ಹಲವು ಜನ ಸೇರಿಕೊಂಜು ಈ ಒಂದು ಅರ್ಥಫೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು  ಭಾರತ ಸರ್ಕಾರದ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿಯ ವರ ಮಾರ್ಗದರ್ಶನದಲ್ಲಿ 60 ಬಡ ಕುಟುಂಬ ಗಳಿಗೆ ಗೋ ಸಮರ್ಪಣೆ   ಪುಣ್ಯದ ಕಾರ್ಯ ನಡೆಯಲಿದ್ದು ಯಾರು ಮಾಡಲಾರದ ಕಾರ್ಯ ವನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ.

 

 

ನೆಪ ಮಾತ್ರಕ್ಕೆ ಅವರಿವರನ್ನು ಗುರುತಿಸಿ ಸಿಕ್ಕ ಸಿಕ್ಕ ಆಕಳುಗಳನ್ನು ತಗೆದುಕೊಂಡು ಬಂದು ವಿತರಣೆ ಮಾಡದೇ ಜಿಲ್ಲೆಯ ಎಲ್ಲಾ ವಿಧಾನ ಸಬಾ ಕ್ಷೇತ್ರಗ ಳಲ್ಲಿನ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಈ ಒಂದು ಗೋವು ಗಳನ್ನು ನೀಡಲಾಗುತ್ತಿದೆ. ದೇಶಿ ತಳಿಯ ಒಳ್ಳೇಯ ಆಕಳುಗಳನ್ನು ಮಹಾ ರಾಷ್ಟ್ರ ಅಥಣಿ,ಕಾಗವಾಡ ಜಥ್ ಸೇರಿದಂತೆ ಹಲವು ಕಡೆಗಳಿಂದ ಈಗಾಗಲೇ ಈ ಒಂದು ಗೋವುಗಳನ್ನು ತರಿಸಲಾಗಿದ್ದು ಸಿದ್ದಾರೂಢ ಮಠದ ಆವರಣದಲ್ಲಿ ಈ ಒಂದು ವಿತರಣೆಯ ಕಾರ್ಯ ನಡೆಯಲಿದೆ.ನೀವು ಬನ್ನಿ… ನಿಮ್ಮವ ರನ್ನು ಕರೆತನ್ನಿ…ಗೋ ಒಂದು ಪ್ರಾಣಿಯಲ್ಲ… ನಮ್ಮ ಪ್ರಾಣವಾಗಲಿ ಸರ್ವರಿಗೂ ಆದರದ ಸುಸ್ವಾಗತ ಎಂದು ಮಣಿಕಂಠ ಶ್ಯಾಗೋಟಿ. ಪ್ರೀತಮ್ ಅರಕೇರಿ ಶರಣು ಅಂಗಡಿ ಸಂತೋಷ ಜೀನಗೌಡರ ಹಲವರು ಅಹ್ವಾನ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.