ಹುಮನಾಬಾದ್ –
ಸಧ್ಯ ಇನ್ನೂ ಮಹಾಮಾರಿ ಕರೋನಾ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಇನ್ನೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ ಹೀಗಿರುವಾಗ ಸಮಾಜಕ್ಕೆ ಮಾದರಿಯಾಬೇಕಾದ ಶಿಕ್ಷಕರು ಹೀಗೆ ಯಾಕೇ ಮಾಡಿದರು ಹೀಗೆ ಮಾಡಿದ್ದು ಸರಿನಾ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಕೇಳುತ್ತಾ ಪೊಟೊ ವನ್ನು ಶೇರ್ ಮಾಡ್ತಾ ಇದ್ದಾರೆ.ಹೌದು ಬೀದರ್ ಜಿಲ್ಲೆಯ ಹುಮನಾಬಾದ್ ಸರ್ಕಾರಿ ಪದವಿ ಪೂರ್ವ ಬಾಲಕರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೇ ಹಲವು ಸಂಘಟನೆಗಳ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಅನುಕೂಲವಾಗಲೆಂಬ ಉದ್ದೇಶಕ್ಕಾಗಿ ಶಾಲೆಯ ಸಮಸ್ತ ಶಿಕ್ಷಕ ಬಳಗದವರು ನೇರ ಪೋನ್ ಇನ್ ಕಾರ್ಯಕ್ರಮವನ್ನು ಮಾಡ್ತಾ ಇದ್ದಾರೆ. ನಿಜವಾಗಿಯೂ ಮಕ್ಕಳಿಗಾಗಿ ಮಾಡುತ್ತಿರುವ ಈ ಒಂದು ಕಾರ್ಯಕ್ರಮ ಉತ್ತಮವಾಗಿದ್ದು ಮೆಚ್ಚುವಂತಹದ್ದು ಆದರೆ ಈ ಒಂದು ಕಾರ್ಯಕ್ರಮದ ನೆನಪಿಗಾಗಿ ಶಾಲೆಯ ಸಮಸ್ತ ಶಿಕ್ಷಕ ಬಂಧುಗಳು ಶಾಲೆಯ ಮುಂದೆ ಪರೀಕ್ಷೆ ಒಂದೆಡೆ ಇರಲಿ ಎರಡನೇಯ ಅಲೆ ಇನ್ನೂ ಕೂಡಾ ಹೋಗಿಲ್ಲ ಇದರ ನಡುವೆ ಮೂರನೇಯ ಅಲೆ ಮುನ್ಸೂಚನೆ ಇರುವಾಗಲೇ ಶಿಕ್ಷಕರು ಸರಿಯಾಗಿ ಸಾಮಾಜಿಕ ಅಂತರವಿಲ್ಲದೇ ಮಾಸ್ಕ್ ಗಳನ್ನು ಹಾಕಿಕೊಳ್ಳದೇ ಎಲ್ಲಾ ನಿಮಯಗಳನ್ನು ಗಾಳಿಗೆ ತೂರಿ ಹೀಗೆ ಮಾಡಿದ್ದು ಸರಿನಾ.
ಇದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೇ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಕಳಕಳಿ ಯನ್ನು ವ್ಯಕ್ತಪಡಿಸಿದ್ದಾರೆ.ಪ್ರಮುಖವಾಗಿ ಒಂದನೇಯ ಅಲೆಗಿಂತ ಎರಡನೇಯ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಡಿನಲ್ಲಿ ಶಿಕ್ಷಕರು ಮೃತರಾಗಿದ್ದಾರೆ ಇನ್ನೂ ಕೂಡಾ ಈ ಒಂದು ದೊಡ್ಡ ನೋವಿನಿಂದ ನಾಡಿನ ಶಿಕ್ಷಕ ಬಂಧುಗಳು ಹೊರ ಬಂದಿಲ್ಲ ಹೀಗಿರುವಾಗ ಸಧ್ಯ ಎಲ್ಲವನ್ನು ಮರೆತು ಹೀಗೆ ಮಾಡಿದ್ದು ಇದೇನಾ ಜವಾಬ್ದಾರಿ ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಹೇಗೆ ಮಾಡ್ತಾರೆ ಎಂಬ ಪ್ರಶ್ನೆ ಕಾಡುತ್ತಿದ್ದು ಹೀಗ್ಯಾಕೆ ಮಾಡಿದರು ಎಂಬೊದಕ್ಕೆ ಈ ಶಿಕ್ಷಕ ಬಂಧುಗಳೇ ಉತ್ತರಿಸಬೇಕು.