ಬಳ್ಳಾರಿ
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದೆ.ಈಗಿನಿಂದಲೇ ಕೆಲ ರಾಜಕಾರ ಣಿಗಳ ಬೆಂಬಲಿಗರು ತಮ್ಮ ಮುಖಂಡರೇ ಮುಂದಿನ ಭಾರಿ ಅಧಿಕಾರ ವಹಿಸಿಕೊಳ್ಳಲಿ ಎಂದು ಇಚ್ಚೆ ಪಡುವುದರ ಹೊರತಾಗಿ ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ವಿಶೇಷ ಹರಕೆಯೊಂದು ದೇವರಿಗೆ ತಿಳಿಸಿದ್ದಾನೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಅಂತಾ ರಥೋತ್ಸವದ ವೇಳೆ ಬಾಳೆಹಣ್ಣು ಎಸೆದು ಅವರ ಅಭಿಮಾನಿಗಳು ಹರಕೆ ತಿರಿಸಿದ್ದಾರೆ.

ಹೌದು ಬಳ್ಳಾರಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಗಾದಿಲಿಂಗೇಶ್ವರ ರಥೋತ್ಸವ ವೇಳೆ ಬಾಳೆ ಹಣ್ಣಿನ ಮೇಲೆ Next CM ಸಿದ್ದರಾಮಯ್ಯ ಎಂದು ಬರೆದು ಗಾಧಿಲಿಂಗೆಶ್ವರ ರಥೋತ್ಸವ ದಲ್ಲಿ ಬಾಳೆ ಹಣ್ಣನ್ನು ಸಿದ್ದು ಅಭಿಮಾನಿ ವೀರೇಶ ಎಂಬುವವರು ಎಸೆದಿದ್ದಾರೆ.ಈಗಿನಿಂದಲೇ ಅಭಿಮಾನಿಗಳಿಂದ ಸಿದ್ದು ಸಿಎಂ ಆಗುವಂತೆ ಹರಕೆ ತಿರಿಸಲಾಗುತ್ತಿದ್ದು, ಸಿದ್ದು ಬಾಳೆ ಹಣ್ಣಿನ ಮೂಲಕ ದೇವರಿಗೆ ಹರಕೆ ತೀರಿಸಿರುವ ಅಭಿಮಾನಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.