ಸರ್ಕಾರಿ ಶಾಲೆಯ ರಣಾಂಗಕ್ಕೆ ಕಾರಣವಾಯಿತಾ ಆ ಒಂದು ಕಾರಣ –ವಿದ್ಯಾರ್ಥಿ ಸಾವಿಗೆ ಮೂವರು ಶಿಕ್ಷಕರ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದ ರೌಡಿ ಅತಿಥಿ ಕೊನೆಗೂ ಶಿಕ್ಷಕ ಬಂಧನ

Suddi Sante Desk
ಸರ್ಕಾರಿ ಶಾಲೆಯ ರಣಾಂಗಕ್ಕೆ ಕಾರಣವಾಯಿತಾ ಆ ಒಂದು ಕಾರಣ –ವಿದ್ಯಾರ್ಥಿ ಸಾವಿಗೆ ಮೂವರು ಶಿಕ್ಷಕರ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದ ರೌಡಿ ಅತಿಥಿ ಕೊನೆಗೂ ಶಿಕ್ಷಕ ಬಂಧನ

ನರಗುಂದ

ಹೌದು ಗದಗ ಜಿಲ್ಲೆಯ ನರಗುಂದ ಸರ್ಕಾರಿ ಶಾಲೆಯಲ್ಲಿ ನಡೆದ ಒರ್ವ ವಿದ್ಯಾರ್ಥಿ ಹಾಗೂ ಮೂವರು ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ ಶಿಕ್ಷಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಯೇ ಗಲಾಟೆಗೆ ಕಾರಣ ಎಂಬ ವಿಚಾರವನ್ನು ಪೊಲೀಸರು ತನಿಖೆಯಿಂದ ಭೇಧಿಸಿದ್ದಾರೆ

 

ಇಬ್ಬಿಬ್ಬರೊಂದಿಗಿದ್ದ ಸಾವಿಗೀಡಾದ ಬಾಲಕನ ಅಮ್ಮನ ಸಲುಗೆ ಮಗನಿಗೇ ಮುಳುವಾಗಿದೆ ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದ್ದು ಅಮ್ಮನೊಂದಿಗೆ ಸಲುಗೆಯಿಂದಿದ್ದ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಆಕೆಯ ಮಗನನ್ನು ಭೀಕರ ವಾಗಿ ಕೊಲೆ ಮಾಡಿ ಕ್ರೌರ್ಯ ತೋರಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಿ ಎರಡು ದಿನಗಳ ಈ ಒಂದು ಈ ಘಟನೆ ನಡೆದಿತ್ತು. ಸಹಶಿಕ್ಷಕಿ ಗೀತಾ ಎಂಬಾಕೆಯ ಪುತ್ರ ಭರತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಭರತ್ಗೆ ಸಲಿಕೆಯಿಂದ ಹೊಡೆದು ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ಎಸೆದಿದ್ದ ರಕ್ಷಣೆಗೆ ಧಾವಿಸಿದ್ದ ಗೀತಾ ಹಾಗೂ ಇನ್ನೊಬ್ಬ ಶಿಕ್ಷಕ ಸಂಗನಗೌಡ ಪಾಟೀಲ್ ಮೇಲೂ ಹಲ್ಲೆ ಮಾಡಿದ್ದ

ಅತಿಥಿ ಶಿಕ್ಷಕಿ ಗೀತಾ,ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಜೊತೆ ಸಲುಗೆಯಿಂದ ಇದ್ದಳು ಮಾತ್ರ ವಲ್ಲ ಇನ್ನೊಬ್ಬ ಅತಿಥಿ ಶಿಕ್ಷಕ ಸಂಗನಗೌಡ ಪಾಟೀಲ್ ಜೊತೆಗೂ ಈಕೆ ಸಲುಗೆಯಿಂದಿದ್ದಳು ಮುತ್ತಪ್ಪನ ಜತೆ ಗೀತಾ ವಾಟ್ಸ್ಆಯಪ್ ಚಾಟ್ ಮಾಡುತ್ತಿದ್ದಳು ಆದರೆ ಈಕೆ ಸಂಗನಗೌಡ ಪಾಟೀಲ್ ಜೊತೆ ಸಲುಗೆಯಿಂದ ಇರುವುದು ಮುತ್ತಪ್ಪನಿಗೆ ಇಷ್ಟವಾಗುತ್ತಿರಲಿಲ್ಲ ಅದಾಗ್ಯೂ ಇತ್ತಿಚೆಗೆ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಸಂಗನಗೌಡ ಹಾಗೂ ಗೀತಾ ಸಲುಗೆಯನ್ನು ಗಮನಿಸಿದ್ದ ಮುತ್ತಪ್ಪ ಅವರಿಬ್ಬರನ್ನೂ ಕೊಲೆ ಮಾಡಲು ಸಂಚು ಹೂಡಿದ್ದ

ಇದೇ ಯೋಚನೆಯಲ್ಲಿ ಭರತ್ ಹಾಗೂ ಗೀತಾ ಮೇಲೆ ಹಲ್ಲೆ ಮಾಡಿದ್ದಾನೆ.ಇನ್ನೂ ಈ ಪ್ರಕರಣ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶಿಕ್ಷಕ ಮುತ್ತಪ್ಪ ಹಡಗಲಿ ಯನ್ನು ಪೊಲೀಸರ ವಿಶೇಷ ತಂಡ ಸವದತ್ತಿಯಲ್ಲಿ ಬಂಧಿಸಿದ್ದು ಬಾಲಕ ಭರತ್ ಸಾವಿಗೀಡಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ಗೀತಾ ಪರಿಸ್ಥಿತಿ ಚಿಂತಾಜನಕವಾಗಿದೆ

ಮುತ್ತಪ್ಪ ಹಡಗಲಿ ಗೀತಾ ಸಂಗನಗೌಡ ಪಾಟೀಲ್ ಮೂವರೂ ವಿವಾಹಿತರು ಎಂದು ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದು ಸಧ್ಯ ಆರೋಪಿ ಶಿಕ್ಷಕನನ್ನು ವಶಕ್ಕೆ ತಗೆದುಕೊಂಡಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ಗದಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.