ಆನ್ ಲೈನ್ ನಲ್ಲಿ ಪರಿಚಯ – ಆನ್ ಲೈನ್ ನಲ್ಲಿ ಮದುವೆಯ ಬೇಡಿಕೆ – ಆನ್ ಲೈನ್ ನಲ್ಲಿ ಹಣ ಹಾಕಿಸಿಕೊಂಡು ಆಫ್ ಲೈನ್ ಆದ

Suddi Sante Desk

ಬೆಂಗಳೂರು –

ಮದುವೆಯ ಜಾಲ ತಾಣಗಳಲ್ಲಿ ಪರಿಚಯವಾಗಿ ಮದುವೆಯಾಗೊದಾಗಿ ನಂಬಿಸಿ ಯುವತಿಗೆ ನಾಲ್ಕು ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.ಶಶಿಧರ್ ಜೋಶಿ ಎಂಬುವರ ಹೆಸರಿನಲ್ಲಿ ಮ್ಯಾರೇಜ್ ಬ್ಯೂರೊ ಸಾಮಾಜಿಕ ಜಾಲ ತಾಣದಲ್ಲಿ ಖಾತೆಯೊಂದನ್ನು ತೆರೆದು ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾರೆ.ನಂತರ ಮದುವೆಯಾಗೊದಾಗಿ ಹೇಳಿದ್ದರು.ಇತ್ತ ಮದುವೆಯಾಗಲು ವರನನ್ನು ಹುಡುಕಾಡುತ್ತಿದ್ದ ಯುವತಿಯ ಕಡೆಯವರು ಆಯಿತು ಬಿಡಿ ನೋಡಿದರಾಯಿತು ಎಂದುಕೊಂಡು ಸುಮ್ಮನಿದ್ದರು. ವೈವಾಹಿಕ ಜಾಲತಾಣವೊಂದರಲ್ಲಿ ಶಶಿಧರ ಜೋಶಿ ಎಂಬುವರ ಹೆಸರಿನಲ್ಲಿ ಖಾತೆ ತೆರೆದು ಫೋಟೊ ಸಮೇತ ಸ್ವ–ವಿವರ ಹಾಕಿದ್ದರು ಇವರು.

ಶಶಿಧರ್ ಜೋಶಿ ಹೆಸರಿನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ ಮದುವೆಯಾಗುವುದಾಗಿ ಹೇಳಿದ್ದರು ಅಲ್ಲದೇ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಮದುವೆಯಾಗಲು ವರನನ್ನು ಇವರು ಹುಡುಕಾಡುತ್ತಿದ್ದರಂತೆ. ಹೀಗೆ ಎಲ್ಲವನ್ನೂ ಹೇಳಿ ಯುವತಿಯನ್ನು ನಂಬಿಸಿದ್ದರು. ವೈವಾಹಿಕ ಜಾಲತಾಣವೊಂದರಲ್ಲಿ ಬೇರೆಯವರ ಹೆಸರಿನಲ್ಲಿ ಖಾತೆ ತೆರೆದು ಫೋಟೊ ಸಮೇತ ಸ್ವ–ವಿವರ ಹಾಕಿ ಶಶಿಧರ್ ಜೋಶಿ ಹೆಸರಿನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದರು, ಯುವತಿಯನ್ನು ಸಂಪೂರ್ಣವಾಗಿ ಪರಿಚಯ ಮಾಡಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದ, ನಂತರ ಯುವತಿಯ ಮೊಬೈಲ್ ನಂಬರ್ ತಗೆದುಕೊಂಡು ಮಾತನಾಡಿದ್ದರಂತೆ ಶಶಿಧರ್.

ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಸಾಫ್ಟ್‌ ವೇರ್‌ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿರುವುದಾಗಿ ಹೇಳಿ ನಿಮ್ಮನ್ನೇ ಮದುವೆ ಮಾಡಿಕೊಳ್ಳುತ್ತೇನೆ ನಾನು ಹಲವೆಡೆ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದೇನೆ. ಬೆಂಗಳೂರಿನಲ್ಲೇ ಮನೆ ನಿರ್ಮಾಣ ಮಾಡಲು ಯೋಚಿಸಿದ್ದು, ಹಣದ ಅವಶ್ಯಕತೆ ಇದೆ. ನೀವು ಕೊಟ್ಟರೆ, ಹೂಡಿಕೆ ಹಣ ಬಂದ ನಂತರ ನಿಮಗೆ ನಿಮ್ಮ ಹಣವನ್ನು ಮರಳಿಸುತ್ತೇನೆ ಎಂದು ಆರೋಪಿ ಹೇಳಿದ್ದನಂತೆ. ಅದನ್ನು ನಂಬಿದ್ದ ಯುವತಿ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ₹ 4 ಲಕ್ಷ ಜಮೆ ಮಾಡಿದ್ದರು.ಅತ್ತ ಹಣ ಖಾತೆಗೆ ಬರುತ್ತಿದ್ದಂತೆ ಇತ್ತ ಮೊಬೈಲ್ ಆಫ್ ಆಗಿದೆ.ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆರೋಪಿ ಕೂಡಾ ನಾಪತ್ತೆಯಾಗಿದ್ದಾನೆ. ವರನೊಬ್ಬ, ಹೊಸ ಮನೆ ನಿರ್ಮಿಸುವ ನೆಪದಲ್ಲಿ ನಗರದ ಯುವತಿಯಿಂದ ₹ 4 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

‘ವೈಟ್‌ಫೀಲ್ಡ್ ನಿವಾಸಿಯಾಗಿರುವ 26 ವರ್ಷದ ಯುವತಿ ದೂರು ನೀಡಿದ್ದಾರೆ. ಉತ್ತರ ಪ್ರದೇಶದವರು ಎನ್ನಲಾದ ಆರೋಪಿ ಶಶಿಧರ್ ಜೋಶಿ ಎಂಬುವರ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ಆಗಿರುವ ಯುವತಿ, ಪೋಷಕರ ಜೊತೆ ವೈಟ್‌ಫೀಲ್ಡ್‌ನಲ್ಲಿ ವಾಸವಿದ್ದಾರೆ.

ಮದುವೆಯಾಗಲು ವರನನ್ನು ಹುಡುಕಾಡುತ್ತಿದ್ದ ಅವರು, ವೈವಾಹಿಕ ಜಾಲತಾಣವೊಂದರಲ್ಲಿ ಖಾತೆ ತೆರೆದು ಫೋಟೊ ಸಮೇತ ಸ್ವ–ವಿವರ ಹಾಕಿದ್ದರು. ಶಶಿಧರ್ ಜೋಶಿ ಹೆಸರಿನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ, ಮದುವೆಯಾಗುವುದಾಗಿ ಹೇಳಿದ ಮಾತನ್ನು ಕೇಳಿ ಹಣ ಕಳೆದುಕೊಂಡು ವಂಚನೆಗೊಳಗಾಗಿ ಪರದಾಡುತ್ತಿದ್ದಾರೆ.ಒಟ್ಟಾರೆ ಯಾರೇ ಆಗಲಿ ಮದುವೆಯಾಗೊದಾಗಿ ಹೇಳಿ ನಿಮಗೂ ಹೀಗೆ ಮೊಸ ಮಾಡಬಹುದು ಯಾರನ್ನೂ ನಂಬುವ ಮೊದಲು ದಯಮಾಡಿ ಒಮ್ಮೇ ಆಲೋಚಿಸಿ ವಿಚಾರಿಸಿ ಇಲ್ಲವಾದರೆ ನೀವು ಹೀಗೆ ಮೋಸ ಹೋಗಬಹುದು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.