ಕಲಬುರಗಿ –
ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ರಾಜ್ಯದಲ್ಲಿ ಆನ್‌ಲೈನ್ ಮೂಲಕ ಪ್ರತಿಭಟನೆ ಮಾಡಿದರು

ಹೌದು ಕಲಬುರಗಿ ಜಿಲ್ಲೆ ಖಾಸಗಿ ಶಾಲಾ ಅತಿಥಿ ಉಪನ್ಯಾಸಕರಿಂದ ಪೋಸ್ಟರ್ ಹಿಡಿದು ಪ್ರತಿಭಟನೆ ಮಾಡಿದರು

ಕೊವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿರೋ ಅತಿಥಿ ಉಪನ್ಯಾಸಕರಿಗೆ ಸೂಕ್ತವಾದ ಪರಿಹಾರವನ್ನು ನೀಡುವಂತೆ ಆಗ್ರಹವನ್ನು ಮಾಡಿದರು.ಇನ್ನೂ ಈ ಒಂದು ಕೊವಿಡ್ ಪರಿಹಾರದಲ್ಲಿ ಅತಿಥಿ ಉಪನ್ಯಾಸ ಕರನ್ನ ಮರೆತಿರೊದಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪ ಡಿಸಿದರು

ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ ನೂರಾರು ಅತಿಥಿ ಉಪನ್ಯಾಸಕರು.

ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜ್, ಉದ್ಯೋಗ ಭದ್ರತೆ, 14 ತಿಂಗಳ ವೇತನ ಬಿಡುಗಡೆ, PF ಮತ್ತು ESI ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹವನ್ನು ಮಾಡಿದರು

ಕೊರೊನಾದಿಂದ ಈಗಾಗಲೇ ಬಾಗಿಲು ಮುಚ್ಚಿವೆ ನೂರಾರು ಖಾಸಗಿ ಶಾಲೆಗಳು.ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕಿಡಾದ ನೂರಾರು ಅತಿಥಿ ಉಪ ನ್ಯಾಸಕರ ಕುಟುಂಬಗಳು ಆನ್ ಲೈನ್ ನಲ್ಲಿ ಪ್ರತಿಭಟನೆ ಮಾಡತಾ ಇದ್ದಾರೆ