ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ 25% ನಿಯಮದಿಂದ ಅನಗತ್ಯ ಆದ್ಯತೆಗಳಿಂದ ಬಳಲಿ ನಿತ್ಯ, ಅರಣ್ಯರೋಧನದಂತೆ ಚರ್ಚೆಗಳು ನಡಿತಾ ಕಣ್ಣಿರು ಹಾಕತಾ ಇದ್ದಾರೆ 10,15,20,25 ವರ್ಷಗಳಿಂದ ಒಮ್ಮೆಯೂ ವರ್ಗಾವಣೆ ದೊರೆಯದೆ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಶಿಕ್ಷಕ ಸ್ನೇಹಿ ವರ್ಗಾವಣೆಯಂತ ಹೇಳತಾ ನಿಜವಾಗಿ ಈ ಸಮಸ್ಯೆ ಅನುಭವಿಸುತ್ತಿರೊರಿಗೆ ಈ ಕಾಯ್ದೆ ಮಾರಕವಾಗಿ ಪರಿಣಮಿಸಿದೆ ನೈಜವಾಗಿ ವರ್ಗಾವಣೆ ಸಮಸ್ಯೆ ಇರುವ ಸಾವಿರಾರು ಶಿಕ್ಷಕರಿಗೆ ಅವರ ಸಮಸ್ಯೆಗೆ ದೊಡ್ಡ ಮಟ್ಟದ ರಾಜ್ಯದ ಯಾವುದೇ ಮಾದ್ಯಮದವರು ಬೆಂಬಲಿಸದೆ ಇರೊದು ದುರಾದೃಷ್ಟ 371(j) ಕಾಯ್ದೆ ಮಾಡಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಅವಕಾಶ ಕಲ್ಪಿಸಿ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸಿ 80% ಅವಕಾಶ ಬರಿ ನಿಯಮದಲ್ಲಿ ಮಾತ್ರ ಆಗಿದೆ ಹೊರ ಜಲ್ಲೆಯವರಿಗೆ 20% ಜನರಿಗೆ ಮಾತ್ರ ಅವಕಾಶ ಇದ್ದರು ಹೊರ ಹೋಗಬಯಸುವವರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಿ ಸ್ಥಳಿಯರಿಗೆ ಉದ್ಯೋಗ ಕಲ್ಪಿಸಿ ಎಂದು ಹಿರಿಯ ಶಿಕ್ಷಕ ಈರಪ್ಪ ಸೊರಟೂರ ಹೇಳಿದ್ದಾರೆ.

ನೊಂದವರು ಕುಟುಂಬ ವರ್ಗದವರಿಂದ ಹತ್ತಾರು ವರ್ಷಗಳಿಂದ ದೂರ ಇರುವ ಶಿಕ್ಷಕ ಬಂಧುಗಳಿಗೆ ಒಂದು ಭಾರಿ ಮುಕ್ತ ಅವಕಾಶ ಕಲ್ಪಿಸಿ ಕೊಡಬೇಕೆಂದು ಮಾನ್ಯಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ವರ್ಗಾವಣೆ ಸಮಸ್ಯೆಗಳಿಂದ ನೊಂದ ಶಿಕ್ಷಕರ ಪರವಾಗಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೆನೆ ದಯಮಾಡಿ 25% ನಿಯಮದಿಂದ ವರ್ಗಾವಣೆ ವಂಚಿತ ಶಿಕ್ಷಕರತ್ತ ಗಮನಹರಿಸಿ ಎಂದು ಶಿಕ್ಷಕ ಈರಪ್ಪ ಸೊರಟೂರ ಹೇಳಿದ್ದಾರೆ
