ಹುಬ್ಬಳ್ಳಿ ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರುವು – ಡಾ ಸಂತೋಷಕುಮಾರ ಬಿರಾದಾರ ನೇತ್ರತ್ವದಲ್ಲಿ ಕಾರ್ಯಾಚರಣೆ…..

Suddi Sante Desk
ಹುಬ್ಬಳ್ಳಿ ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರುವು – ಡಾ ಸಂತೋಷಕುಮಾರ ಬಿರಾದಾರ ನೇತ್ರತ್ವದಲ್ಲಿ ಕಾರ್ಯಾಚರಣೆ…..

ಹುಬ್ಬಳ್ಳಿ ಧಾರವಾಡ  –

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿ ಕಾರದಿಂದ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ನಡೆಯಿತು. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅವಳಿ ನಗರ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿ ರುವ ಅನಧಿಕೃತ ಲೇಔಟ್‍ಗಳ ತೆರವು ಕಾರ್ಯಾ ಚರಣೆಯನ್ನು ಆರಂಭಿಸಲಾಗಿದೆ.

ಹುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು ಅನಧಿಕೃತ ಬಡಾವಣೆಗಳ ಸಮೀಕ್ಷೆ ಕೈಗೊಂಡಿದ್ದು, ಹಂತ ಹಂತವಾಗಿ ಅವುಗಳ ತೆರವು ಕಾರ್ಯಾಚರಣೆಯನ್ನು ಈಗಾಗಲೇ ಆರಂಭಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮ ವ್ಯಾಪ್ತಿಯ 5 ಎಕರೆ 28 ಗುಂಟೆ ಹಾಗೂ 1 ಎಕರೆ 6 ಗುಂಟೆ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಅನಧಿ ಕೃತ ಲೇಔಟ್‍ನ್ನು ತೆರವುಗೊಳಿಸಲಾಯಿತು.
ಈಗಾಗಲೇ ಸಮೀಕ್ಷೆಯಲ್ಲಿ ಗುರುತಿಸಿರುವ ಅನಧಿಕೃತ ಲೇಔಟ್‍ಗಳ ತೆರವು ಕಾರ್ಯಾಚರಣೆ ಯನ್ನು ಮುಂದಿನ ದಿನಗಳಲ್ಲೂ ಮುಂದುವರೆಸ ಲಾಗುವುದು.

ಸಾರ್ವಜನಿಕರು ಅನುಮತಿ ಇಲ್ಲದೆ ನಿರ್ಮಿಸುವ ಅನಧಿಕೃತ ಲೇಔಟ್‍ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಮತ್ತು ಸಂಬಂಧಪಟ್ಟ ಪ್ರಾಧಿಕಾರಗ ಳಿಂದ ಅಗತ್ಯ ಅನುಮತಿ ಪಡೆಯದೇ ನಿರ್ಮಿ ಸುವ ಲೇಔಟ್‍ಗಳಲ್ಲಿ ಸಾರ್ವಜನಿಕರು ಸೈಟ್‍ ಗಳನ್ನು ಖರೀದಿಸಬಾರದೆಂದು ಹುಡಾ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.