ತುಮಕೂರು –
ಅಂತರ್ಜಾತಿ ವಿವಾಹಕ್ಕೇ ಮನೆಯವರು ವಿರೋಧ ಮಾಡಿದ್ದಾರೆಂದು ನೊಂದಕೊಂಡ ಇಬ್ಬರು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕಳೆದ ಹಲವು ವರುಷಗಳಿಂದ ರಮೇಶ ಮತ್ತು ಸುಶ್ಮೀತಾ ಪರಸ್ಪರ ಪ್ರೀತಿಸುತ್ತದ್ದರು. ಇನ್ನೇನು ವಿವಾಹ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಮನೆಯವರು ವಿರೋಧ ಮಾಡುತ್ತಿದ್ದರಂತೆ. ಇವರಿಬ್ಬರ ವಿವಾಹಕ್ಕೇ ಜಾತಿ ಅಡ್ಡಿಯಾಗಿದ್ದು ಮನೆಯವರು ಒಪ್ಪೊದಿಲ್ಲ ಎಂದು ಆರೋಪಿಸಿರುವ ಇಬ್ಬರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಮಕೂರಿನ ಹೇಮಾವತಿ ನಾಲೆಗೆ ಇಬ್ಬರು ಪ್ರೇಮಿಗಳಿಬ್ಬರೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಮೇಶ ಮತ್ತು ಸುಶ್ಮಿತಾ ಮೃತ ಪ್ರೇಮಿಗಳಾಗಿದ್ದಾರೆ. ಅಂತರ್ಜಾತಿ ಕಾರಣಕ್ಕೆ ಮನೆಯವರ ವಿರೋಧಕ್ಕೆ ಹೆದರಿ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 16 ರಂದು ಬಾಗೂರು ಬಳಿಯ ಹೇಮಾವತಿ ಕಾಲುವೆ ಸುರಂಗದ ಬಳಿ ಬೈಕ್ ನಿಲ್ಲಿಸಿದ ಇಬ್ಬರು ಆತ್ಮಹತ್ಯೆ ಶರಣಾಗಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಗ್ರಾಮ ತಾಲ್ಲೂಕಿನ ಹಿರೀಸಾವೆ ಗ್ರಾಮದ ಸುಶ್ಮಿತ(18), ಹಾಗೂ ಮತಿಘಟ್ಟ ಗ್ರಾಮದ ರಮೇಶ್(19) ಮೃತರಾಗಿದ್ದಾರೆ. ಐಟಿಐ ಓದುತ್ತಿದ್ದ ರಮೇಶ್ ಹಾಗೂ ಪದವಿ ಓದುತ್ತಿದ್ದ ಸುಸ್ಮಿತಾ ನಡುವೆ ಪ್ರೀತಿ ಮೂಡಿತ್ತು.ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಜೋಡಿಗಳ ಮದುವೆಗೆ ಮನೆಯವರ ವಿರೋಧಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರೊ ಯುವ ಜೋಡಿ ಬಾಗೂರು ಸುರಂಗ ಬಳಿ ಬೈಕ್ ನಿಲ್ಲಿಸಿ ಬೈಕ್ ಬಳಿ ಇಬ್ಬರ ಚಪ್ಪಲಿ ಬಿಟ್ಟು ಕಾಲುವೆಗೆ ಜಿಗಿದಿದ್ದಾರೆ.

ಪ್ರೇಮಿಗಳು ಪರಸ್ಪರ ಅಪ್ಪಿಕೊಂಡು ಹಗ್ಗ ಕಟ್ಟಿಕೊಂಡು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಿಗಳ ಮೃತದೇಹ ಕಾಲುವೆಯಲ್ಲಿ ತೇಲಿಹೋಗೋ ವೀಡಿಯೋ ವೈರಲ್ ಆಗಿದ್ದು ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಹಾಸನದ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇವೆಲ್ಲದರ ನಡುವೆ ಈಗ ಇಬ್ಬರ ಮೃತ ದೇಹಗಳು ಸಿಕ್ಕಿದ್ದು ಸ್ಥಳಕ್ಕೇ ಭೇಟಿ ನೀಡಿರುವ ನೋವಿನಕೇರೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ಇನ್ನೂ ಮನಸ್ಸು ಮಾಡಿದರೆ ಇವರಿಬ್ಬರು ಮನೆಯಲ್ಲಿ ಪಾಲಕರೊಂದಿಗೆ ಮಾತನಾಡಿಕೊಂಡು ಹೇಗಾದರೂ ಮಾಡಿ ಒಪ್ಪಿಸಬಹುದಿತ್ತ ಇಲ್ಲವೇ ಮದುವೆಯಾಗಿಯಾದ್ರೂ ಬದುಕಬಹುದಿತ್ತು ಇವೆರಡನ್ನು ಮಾಡದೇ ನಮ್ಮ ಮದುವೆಗೆ ಕುಟುಂಬದವರು ಅಡ್ಡಿ ಮಾಡುತ್ತಿದ್ದಾರೆ ಒಪ್ಪುತ್ತಿಲ್ಲವೆಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಇಬ್ಬರ ಮೃತ ದೇಹಗಳು ಇಂದು ಬೆಳಿಗ್ಗೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.