ಮೈಸೂರು –
ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಜೊತೆ ರೋಮ್ಯಾನ್ಸ್ ಮಾಡಿದ್ದ ಮುಖ್ಯ ಶಿಕ್ಷಕ ನನ್ನು ಅಮಾನತು ಮಾಡಲಾಗಿದೆ ಹೌದು ಮೈಸೂರು ಜಿಲ್ಲೆಯಲ್ಲಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕ ರೊಬ್ಬರು ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ವೈರಲ್ ಆಗಿತ್ತು.ಕಾಮುಕ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ತುಂಬಾ ಆಗ್ರಹಗಳು ಕೇಳಿಬಂದ ಬೆನ್ನಲ್ಲೇ ಮುಖ್ಯಶಿಕ್ಷಕನನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ.
ಮುಖ್ಯಶಿಕ್ಷಕ ಆರ್.ಎಂ.ಅನಿಲ್ ಕುಮಾರ್ ಎಂಬುವರನ್ನು ಸೇವೆಯಿಂದಲೇ ಖಾಯಂ ವಜಾಗೊಳಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈಗಾಗಲೇ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ಸಹ ದಾಖಲಾಗಿದೆ.ಹೆಚ್ ಡಿ.ಕೋಟೆ ತಾಲೂಕಿನ ಶಾಲೆಯೊಂದರ ಕೊಠಡಿಯೊಳಗೆ ವಿದ್ಯಾರ್ಥಿ ನಿಯನ್ನು ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯವನ್ನು ಹೊರಗಿನಿಂದ ಕಿಟಕಿ ಬಳಿ ನಿಂತು ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿದ್ದರು.ಕಿಟಕಿ ಬಳಿ ವಿಡಿಯೋ ಮಾಡುತ್ತಿ ರುವುದನ್ನ ನೋಡಿದ ಕೂಡಲೇ ವಿದ್ಯಾರ್ಥಿನಿಯನ್ನ ಬಿಟ್ಟು ಮುಖ್ಯಶಿಕ್ಷಕ ಸುಮ್ಮನೆ ನಿಲ್ಲುವುದು ಮತ್ತು ವಿದ್ಯಾರ್ಥಿನಿ ಕೊಠಡಿಯಿಂದ ಹೊರ ಹೋಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವು ದಾಗಿ ಬಿಇಒ ಚಂದ್ರಕಾಂತ್ ಮತ್ತು ಡಿಡಿಪಿಐ ರಾಮಚಂ ದ್ರರಾಜೇ ಅರಸ್ ತಿಳಿಸಿದ್ದರು