ಬೆಂಗಳೂರು –
ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವ ಉಪನ್ಯಾಸಕರು,ಸಿಬ್ಬಂದಿಗಳಿಗೆ ನೀಡುವ ಸಂಭಾವನೆ ಮತ್ತು ವಿವಿಧ ಭತ್ಯೆಗಳ ದರವನ್ನು ಶೇ. 20 ರಷ್ಟು ಹೆಚ್ಚಿಸ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹೌದು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವ ಮುಖ್ಯ ಅಧಿಕ್ಷಕರಿಗೆ ದಿನವೊಂದರ ಸಂಭಾ ವನೆಯನ್ನು 1051 ರೂ.ಗೆ ಉಪಮುಖ್ಯ ಅಧಿಕ್ಷಕರಿಗೆ 979 ರೂ. ಸಹಾಯಕ ಮೌಲ್ಯಮಾಪಕರಿಗೆ ಮೂರು ಗಂಟೆ ಅವಧಿಯ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ 36 ರೂ. ಹಾಗೂ ದಿನಭತ್ಯೆಯನ್ನು 976 ರೂ.ಗೆ ಸ್ಥಳೀಯ ಭತ್ಯೆ ಯನ್ನು ಬೆಂಗೂರಿನಲ್ಲಿ 288 ರೂ. ಇತರೆ ಪ್ರದೇಶಗಳಲ್ಲಿ 194 ರೂ.ಗೆ ಹೆಚ್ಚಿಸಲಾಗಿದೆ.

ಇನ್ನು ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತಿ ಸದಸ್ಯರಿಗೆ ಇದ್ದ 2,082 ರೂ.ಸಂಭಾವನೆಯನ್ನು 2,498 ರೂ.ಗೆ ಹೆಚ್ಚಳ ವಾಗಿದೆ.3 ಗಂಟೆ ಅವಧಿಯ ಕನ್ನಡ ಆವೃತ್ತತಿ ಸಹಿತ ಪ್ರಶ್ನೆ ಪತ್ರಿಕೆ ತಯಾರಿಸಲು 2,900 ರೂ. ಹೆಚ್ಚಿಸಲಾಗಿದೆ.3 ಗಂಟೆ ಗಿಂತ ಕಡಿಮೆ ಅವಧಿಯ ಕನ್ನಡ ಆವೃತ್ತಿ ಪ್ರಶ್ನೆ ಪತ್ರಿಕೆ ತಯಾರಿಸಲು 1,560 ರೂ. ಇದ್ದ ಸಂಭಾವನೆ 1872 ರೂ.ಗೆ ಹೆಚ್ಚಿಸಲಾಗಿದೆ.ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿ ಭಾಗಿಯಾಗಿರುವ ಪ್ರತಿಯೊಬ್ಬರ ಭತ್ಯೆಯನ್ನೂ ಶೇ. 20 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ