ಕೋವಿಡ್ ನಿಂದ ಮೃತರಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೌಕರರಿಗೆ ಶಿಕ್ಷಕರಿಗೆ ಅಧಿಕಾರಿ ಗಳಿಗೆ ಪರಿಹಾರ ನೀಡಲು ಆದೇಶ

Suddi Sante Desk

ಬೆಂಗಳೂರು –

ಕೋವಿಡ್ ನಿಂದಾಗಿ ರಾಜ್ಯದಲ್ಲಿ ಮೃತರಾದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ,ಶಿಕ್ಷಕರಿಗೆ,ನೌಕರರಿಗೆ ಕೂಡಲೇ ಪರಿಹಾರ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಸೂಚಿಸಿದ್ದಾರೆ. ಮೃತರಾದವರಿಗೆ ಪರಿಹಾರ ನೀಡ ಬೇಕಾಗಿರುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ ಹೀಗಾಗಿ ಕರ್ತವ್ಯ ನಿರತರಾದ ಸಮಯದಲ್ಲಿ ಮೃತ ರಾಗಿದ್ದರೆ ಕೂಡಲೇ ಅವರಿಗೆ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಆದೇಶವನ್ನು ಮಾಡಿದ್ದಾರೆ ಹಾಗೇ ಪರಿಹಾರ ನೀಡಿದ ನಂತರ ಮಾಹಿತಿಯನ್ನು ನೀಡುವಂತೆಯೂ ಹೇಳಿದ್ದಾರೆ

ಇನ್ನೂ ಪ್ರಮುಖವಾಗಿ ಕೋವಿಡ್ ನಿಂದಾಗಿ ಮೃತರಾದರ ಇಲಾಖೆಯ ಸಿಬ್ಬಂದಿಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಪರಿಹಾರ ನೀಡುವಂತೆ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಪತ್ರ ಮನವಿ ಒತ್ತಾಯ ಮಾಡತಾ ಬಂದಿದ್ದು ಇದಕ್ಕೆ ಮಣಿದ ರಾಜ್ಯ ಸರ್ಕಾರ ಈಗ ಸ್ಪಂದಿಸಿದೆ.ಕೊನೆಗೂ ಮತ್ತೊಂದು ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ಸಂಘಕ್ಕೆ ಮತ್ತೊಂದು ಐತಿಹಾಸಿಕ ಗೆಲವು ಸಿಕ್ಕಿದ್ದು ಸ್ಪಂದಿಸದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ಸಂಘದ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪ ಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂ ತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ, ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾ ಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ,ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವ ಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ,ಸೇರಿದಂತೆ ಹಲವರು ಧನ್ಯವಾದಗಳನ್ನು ಹೇಳಿ ಅಭಿನಂದನೆಗಳನ್ನು ಹೇಳಿ ದ್ದಾರೆ ಹಾಗೇ ಕೂಡಲೇ ಪರಿಹಾರವನ್ನು ಮೃತರಾದ ಕುಟುಂಬಕ್ಕೆ ನೀಡುವಂತೆ ಒತ್ತಾಯ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.