ದೇವದುರ್ಗ –
ಕಳೆದ ಹಲವು ದಿನಗಳಿಂದ ಶಾಲೆಗೆ ಅನಧಿಕೃತವಾಗಿ ಗೈರು ಆದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.ದೇವದುರ್ಗ ತಾಲೂಕಿನ ಹದ್ದಿನಾಳ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುಮಾ ಹೊಸಳ್ಳಿ ಕಳೆದ ಒಂದು ವರ್ಷಗಳಿಂದ ಅನಧಿಕೃತವಾಗಿ ಶಾಲೆ ಗೆ ಗೈರಾಗಿದ್ದರು.ಈ ಒಂದು ವಿಚಾರ ಕುರಿತು ಇಲಾಖೆ ಯಿಂದ ನೋಟಿಸ್ ಜಾರಿ ಮಾಡಲಾಗಿತ್ತು.

ನೋಟೀಸ್ ನೀಡಿದರು ಕೂಡಾ ಮತ್ತೆ ವೈದ್ಯಕೀಯ ನೆಪ ಹೇಳಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.ಹೀಗಾಗಿ ಇಲಾಖೆಯಿಂದ ಅಂತಿಮವಾದ ನೊಟೀಸ್ ನೀಡಿ ಕೊನೆಗೆ ಅಮಾನತು ಆದೇಶ ಮಾಡಲಾಯಿತು ಗೈರು ಇದ್ದ ಕಾರಣ ಜೂನ್ 30 ರಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಆರ್.ಇಂದಿರಾ ಅವರು ಅಮಾನತು ಮಾಡಿ ಆದೇಶಿಸವನ್ನು ಮಾಡಿದ್ದಾರೆ.ಇದರೊಂದಿಗೆ ಗೈರಾ ಗಿದ್ದ ಮತ್ತೊರ್ವ ಶಿಕ್ಷಕಿ ಗೆ ಬಿಸಿ ಮುಟ್ಟಿಸಲಾಗಿದೆ