ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿಯಂದಾಗಿ ಮನೆ ಬಂಧು ಬಳಗ ಹೆಂಡತಿ ಮಕ್ಕಳು ಊರು ಹೀಗೆ ಎಲ್ಲವನ್ನೂ ಮರೆತು ಅದೇಷ್ಟೋ ಶಿಕ್ಷಕರು ಕರ್ತವ್ಯವನ್ನು ಮಾಡುತ್ತಿದ್ದು ಒಮ್ಮೆಯಾದರೂ ಸ್ವಂತ ಜಿಲ್ಲೆಗೆ ವರ್ಗಾವಣೆ ಕೋಡಿ ಎಂದು ಕೇಳಿ ಕೇಳಿ ಹೋರಾಟ ಮಾಡಿ ಮಾಡಿ ಬೇಸತ್ತ ಶಿಕ್ಷಕರು ಈಗ ಅಂತಿಮವಾಗಿ ಹೋರಾಟಕ್ಕೆ ಕರೆ ನೀಡಿ ದ್ದಾರೆ.
ಹೌದು ಸೆಪ್ಟಂಬರ್ 4 ರಿಂದ ಬೆಂಗಳೂರು ಫ್ರಿಡಂ ಪಾರ್ಕ್ ದಲ್ಲಿ ಅನಿರ್ದಿಷ್ಟ ನಿರಂತರ ಹೋರಾಟ ಮಾಡಲಿದ್ದಾರೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಂದ ಸ್ವಂತ ಜಿಲ್ಲೆಗೆ ವರ್ಗಾವಣೆ(OTS)ಗಾಗಿ ನ್ಯಾಯಯುತವಾದ ಬೇಡಿಕೆ ಸುಗ್ರೀವಾಜ್ಞೆ ಹೊರಡಿಸಿ ವರ್ಗಾವಣೆ ಮಾಡುವ ವರೆಗೆ ನಿರಂತರ ಹೋರಾಟವು ನಡೆಯಲಿದೆ.ಹತ್ತು ಹದಿ ನೈದು ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ್ದೇವೆ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಹಲವಾರು ಶಿಕ್ಷಕರು ಬಿಪಿ ಶುಗರ್ ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಕೆಲವು ಶಿಕ್ಷಕರು ಬೀದಿ ಹೆಣವಾಗಿದ್ದರೆ ಕುಟುಂಬಗಳು ಹಾಳಾಗಿವೆ ಶಿಕ್ಷಕರಿಗೆ ಕೊನೆಯಲ್ಲಿ ತಮ್ಮ ಕುಟುಂಬದ ಆಶ್ರಯ ಇಲ್ಲದಾ ಗಿದೆ ಉಳಿದಿರುವ ಏಳೆಂಟು ಹತ್ತು ವರ್ಷವಾದರೂ ನಮ್ಮ ಸ್ವಂತ ಜಿಲ್ಲೆಯಲ್ಲಿ ನೆಮ್ಮದಿಯಿಂದ ತೃಪ್ತಿಯಿಂದ ಪಾಠ ಮಾಡಲು ಕುಟುಂಬದ ಆಶ್ರಯದೊಂದಿಗೆ ಜೀವಿಸಲು ಅನುವು ಮಾಡಿಕೊಡಿ ಅನುಕಂಪ ಮಾನವೀಯತೆ ದಯೆ ತೋರಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಈ ಶಿಕ್ಷೆ ಬೇಡ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಶಿಕ್ಷಣ ಸಚಿವರಿಗೆ ಮಂತ್ರಿಗಳು ಶಾಸಕರು ಶಿಕ್ಷಕರನ್ನು ಸೇವಾ ಅವಧಿಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಲು ಶಿಫಾರಸು ಪತ್ರಗಳನ್ನು ನೀಡಿದ್ದಾರೆ ಆದರೂ ಕೂಡಾ ಯಾರು ಕೂಡಾ ಸ್ಪಂದಸುತ್ತಿಲ್ಲ ನೋಡುತ್ತಿಲ್ಲ ಕೇಳುತ್ತಿಲ್ಲ ಕೇಳುತ್ತಿಲ್ಲ ಹೀಗಾಗಿ ಸಿಡಿದೆದ್ದಿರುವ ನಾಡಿನ ಶಿಕ್ಷಕರು ಅನಿ ವಾರ್ಯವಾಗಿ ಹೋರಾಟಕ್ಕೆ ಕರೆ ನೀಡಿದ್ದು ಈ ಕೂಡಲೇ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಬೇಕು ಅಲ್ಲದೇ ಸಚಿವ ಸಂಪುಟ ತಕ್ಷಣ ಸುಗ್ರೀವಾಜ್ಞೆ ಹೊರಡಿಸಿ ವರ್ಗಾವಣೆ ಮಾಡುವ ತನಕ ಹೋರಾಟ ನಿರಂತರ ಇರುತ್ತದೆ ಅದಕ್ಕಾಗಿ ರಾಜ್ಯದ ಶಿಕ್ಷಣ ಸುಧಾರಕರು ಮಠಾಧೀಶರು ನೌಕರರ ಸಂಘದವರು ಶಿಕ್ಷಕರ ಸಂಘದವರು ನಮ್ಮ ಶಿಕ್ಷಕರ ನ್ಯಾಯಯುತ ಬೇಡಿಕೆಗೆ ಬೆಂಬಲ ನೀಡಬೇಕೆಂದು ಸಂಘಟನೆಯ ಮುಖಂಡರಾಗಿರುವ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿರುವ ಪವಾಡೆಪ್ಪ ಅವರು ಮತ್ತು ಮಹೇಶ್ ಮಡ್ಡಿ ರಾಜ್ಯದ ಶಿಕ್ಷಕರ ಪರವಾಗಿ ಕರೆ ನೀಡಿದ್ದಾರೆ.