ಬೆಂಗಳೂರು –
ರಾಜ್ಯದಲ್ಲಿ 1060 ವಿದ್ಯಾರ್ಥಿಗಳಿಗೆ ಹಾಗೇ 185 ಶಿಕ್ಷಕರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.ಹೌದು ರಾಜ್ಯದಲ್ಲಿ ಕರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ವಯಸ್ಕರಿ ಗಿಂತ ಮಕ್ಕಳೇ ಹೆಚ್ಚು ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ.ರಾಜ್ಯದಲ್ಲಿ 1ರಿಂದ 10ನೇ ತರಗತಿ ಬೋಧಿಸುವ 77,041 ಶಾಲೆಗಳಲ್ಲಿ 1.04 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 1060 ವಿದ್ಯಾರ್ಥಿಗಳು ಮತ್ತು 185 ಶಿಕ್ಷಕರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

ಚಿಕ್ಕಮಗಳೂರು ವಸತಿ ಶಾಲೆಯಲ್ಲಿ ಕರೊನಾ ಸ್ಪೋಟ ಗೊಳ್ಳುತ್ತಿದ್ದಂತೆಯೇ ಇತರೆ ಜಿಲ್ಲೆಗಳಲ್ಲೂ ಸೋಂಕು ಹರಡಿತು.ಈ ಹಿಂದೆ ಇದ್ದ ನೂರಿನ ಸಂಖ್ಯೆ ಇದೀಗ ಸಾವಿರ ಸಮೀಪಿಸುತ್ತಿದೆ.ಬೆಂಗಳೂರು ನಗರದಲ್ಲೇ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದರಿಂದ 1ರಿಂದ 9ನೇ ತರಗತಿವರೆಗೆ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ.





ಶಿಕ್ಷಣ ಇಲಾಖೆಯು ರಾಜ್ಯದಲ್ಲಿರುವ 34 ಶೈಕ್ಷಣಿಕ ಜಿಲ್ಲೆಗ ಳಿಂದ ಮಾಹಿತಿ ಪಡೆದಿದ್ದು ಬೆಳಗಾವಿಯಲ್ಲಿ ಅತಿ ಹೆಚ್ಚು 160 ಪ್ರಕರಣಗಳು ಕಂಡು ಬಂದಿವೆ.ಚಿಕ್ಕಮಗಳೂರಿನಲ್ಲಿ 144 ಇದೆ.ರಾಯಚೂರು ಮತ್ತು ವಿಜಯಪುರ,ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಸೋಂಕು ಹರಡದೇ ಇರುವುದು ವಿಶೇಷವಾಗಿದೆ.
ಇನ್ನೂ ಸೋಂಕಿಗೆ ಒಳಗಾಗಿರುವ 85 ಶಿಕ್ಷಕರಲ್ಲಿ ಹಾಸನ ದಲ್ಲಿ 24 ಹಾಗೂ ಚಿಕ್ಕಮಗಳೂರಿನಲ್ಲಿ 16 ಶಿಕ್ಷಕರಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಶಾಲೆಗಳನ್ನು ಬಂದ್ ಮಾಡಲಾ ಗಿದ್ದು.10ನೇ ತರಗತಿ ಮಾತ್ರ ನಡೆಯುತ್ತಿದೆ.ಉಳಿದ ವಿದ್ಯಾರ್ಥಿಗಳಿಗೆ ಯಾವ ಮಾದರಿಯಲ್ಲಿ ತರಗತಿ ನಡೆಸ ಬೇಕೆಂಬುದನ್ನು ಕರೊನಾ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನ ನೀಡಬೇಕಿದೆ.
ಸದ್ಯ ಶಿಕ್ಷಣ ಇಲಾಖೆಯು ವಿದ್ಯಾಗಮ ಅನುಷ್ಠಾನ ಮಾಡಲು ಸಿದ್ಧತೆ ಮಾಡಿಕೊಂಡಿದೆ.ಸರ್ಕಾರಿ ಶಾಲೆಗಳಲ್ಲಿ ಆನ್ ಲೈನ್ ನಲ್ಲಿ ತರಗತಿ ನಡೆಸಲು ಉಪಕರಣಗಳ ಅಲಭ್ಯತೆಯಿಂದ ನಡೆಸಲು ಸಾಧ್ಯವಾಗದೇ ಇರುವುದ ರಿಂದ ಚಂದನ ವಾಹಿನಿ ಪ್ರಸಾರ,ವಿದ್ಯಾಗಮ ಅಂತಹ ಕಾರ್ಯಕ್ರಮಗಳನ್ನು ರೂಪಿಸಿದೆ.ಚಂದನದಲ್ಲಿ ಪಾಠಗಳ ವಿಡಿಯೋವನ್ನು ಸೋಮವಾರಿಂದ ಶುಕ್ರವಾರದವರೆಗೆ ಬೋಧನೆ ಮಾಡಲು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ನಿರ್ಧರಿಸಿದೆ.ವೇಳಾಪಟ್ಟಿಯನ್ನು ನೀಡಿದ್ದು ಎಲ್ಲ ಶಾಲೆಗಳ ಶಿಕ್ಷಕರು ವೇಳಾಪಟ್ಟಿಯನ್ನು ತಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ತಲುಪುವಂತೆ ಸಂವಹನ ಸಾಧಿಸಿದೆ.ನಿಗದಿತ ಸಮಯದಲ್ಲಿ ದೂರದರ್ಶನ ವೀಕ್ಷಿಸಲು ತಿಳಿಸುವಂತೆ ಇಲಾಖೆಯು ಶಿಕ್ಷಕ ರಿಗೆ ತಿಳಿಸಿದೆ.

ಇನ್ನೂ ರಾಜ್ಯದ ಯಾವುದೇ ತಾಲೂಕಿನಲ್ಲಿ ಸೋಂಕಿತ ಪ್ರಮಾಣ ಶೇ.5 ದಾಟಿದರೆ ಶಾಲೆ ಕಾಲೇಜು ಮುಚ್ಚುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ತೀರ್ಮಾನವನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಚನೆ ನೀಡಿದೆ ಇನ್ನೂ ಸಚಿವ ಬಿ.ಸಿ.ನಾಗೇಶ್ ಶಿಕ್ಷಣ ಮಾತನಾಡಿ ಶಾಲೆ ಮುಚ್ಚುವುದು ನಮ್ಮ ಉದ್ದೇಶವಲ್ಲ.ಇದರಿಂದ ವಿದ್ಯಾರ್ಥಿ ಗಳ ಕಲಿಕೆ ಮತ್ತು ಪೌಷ್ಟಿಕತೆಗೆ ತೊಂದರೆಯಾಗುತ್ತದೆ. ಇನ್ನೂ ದಿನದ ಸೋಂಕು ಪ್ರಮಾಣ ದರ ಶೇ 10.30ಕ್ಕೆ ಏರಿಕೆಯಾಗಿದೆ.ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 73 ಸಾವಿರ ಮೀರಿದೆ.ಬೆಂಗಳೂರಿನಲ್ಲಿ ಒಂದೇ ದಿನ ಅತೀ ಹೆಚ್ಚು 10,800 ಸೋಂಕು ಪ್ರಕರಣಗಳು ದೃಢಪಟ್ಟಿ ದ್ದು ದಕ್ಷಿಣ ಕನ್ನಡ 583, ಮೈಸೂರು 562, ತುಮಕೂರು 332,ಮಂಡ್ಯ 263,ಉಡುಪಿ 250,ಧಾರವಾಡ 178, ಬೆಂಗಳೂರು ಗ್ರಾಮಾಂತರ 160,ಕೋಲಾರ 139, ಶಿವಮೊಗ್ಗ 136, ಹಾಸನ 121,ಕಲಬುರಗಿ 109,ಉತ್ತರ ಕನ್ನಡ 106,ಬಳ್ಳಾರಿ 101 ಸೋಂಕು ಪ್ರಕರಣಗಳು ವರದಿ ಯಾಗಿವೆ.ಉಳಿದ 16 ಜಿಲ್ಲೆಗಳಲ್ಲೂ ಸೋಂಕು ವ್ಯಾಪಿಸಿದ್ದು ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ ಕೋಲಾರ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರಂತೆ ಐವರು ಮೃತಪಟ್ಟಿ ದ್ದು,ಸೋಂಕಿತರಲ್ಲಿ 1,356 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.