ಧಾರವಾಡ –
ಬೆಂಕಿ ಬಿದ್ದು 200 ಕ್ಕೂ ಹೆಚ್ಚು ಸೋಯಾ ಬೀನ್ ಚೀಲಗಳು ಸುಟ್ಟ ಕರಕಲಾದ ಘಟನೆ ಧಾರವಾಡ ದ ಲೋಕೂರ ಗ್ರಾಮದಲ್ಲಿ ನಡೆದಿದೆ.
ಹೌದು ಕಟಾವು ಮಾಡಲು ಜಮೀನಿನಲ್ಲಿ ಇಡಲಾಗಿದ್ದ ಸೋಯಾಬೀನ್ ಫಸಲಿಗೆ ಬೆಂಕಿ ಬಿದ್ದಿದ್ದು ನೋಡು ನೋಡುತ್ತಿದ್ದಂತೆ ಫಸಲು ಸಂಪೂರ್ಣವಾಗಿ ಸುಟ್ಟು ಕರಕ ಲಾಗಿದ್ದು ಹೀಗಾಗಿ ಸಂಪೂರ್ಣವಾಗಿ ಫಸಲು ಬೆಂಕಿಗೆ ಆಹುತಿಯಾಗಿದೆ
ನೇಮಿನಾಥ ಜಲ್ಲಿ ಎಂಬುವರ ಜಮೀನಿನಲ್ಲಿ ಈ ಒಂದು ಘಟನೆ ನಡೆದಿದೆ. ಹದಿನಾಲ್ಕು ಏಕರೆಯ ಜಮೀನಿನಲ್ಲಿನ ಸೋಯಾಬೀನ್ ಫಸಲು ಸುಟ್ಟ ಕರಕಲಾಗಿದೆ
ಸಧ್ಯ ಸುದ್ದಿ ತಿಳಿದ ರೈತ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಬೆಂಕಿ ನಿಯಂತ್ರಣಕ್ಕೆ ಬಾರದಂತೆ ದೊಡ್ಡ ಪ್ರಮಾಣದಲ್ಲಿ ಹತ್ತಿಕೊಂಡಿತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಸೋಯಾಬೀನ್ ಫಸಲು ಸುಟ್ಟಿದ್ದು ಸಧ್ಯ ಈ ಒಂದು ವಿಚಾರ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಗರಗ ಪೊಲೀಸರು ಬೆಂಕಿಗೆ ನಿಖರವಾದ ಕಾರಣವನ್ನು ಹುಡುಕಾಡುತ್ತಿದ್ದಾರೆ