ಯಾದಗಿರಿ –
ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ವರ್ಗಾ ವಣೆಯಾಗಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಇವರ ಜಾಗಕ್ಕೆ ಸ್ನೇಹಲ್ ಆರ್ ನೇಮಕಗೊಂಡಿದ್ದಾರೆ.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ಥಾರಕನ್ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.ಆದರೆ ಡಾ.ರಾಗಪ್ರಿಯಾ ಆರ್. ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಿಲ್ಲ.ನೂತನ ಜಿಲ್ಲಾಧಿಕಾರಿ ನೇಮಕವಾಗಿರುವ ಸ್ನೇಹಲ್ ಆರ್.ಅವರು 2013ರ ಐಎಎಸ್ ಅಧಿಕಾರಿಯಾಗಿದ್ದಾರೆ.
2020ರ ಆಗಸ್ಟ್ 27ರಂದು ಡಾ.ರಾಗಪ್ರಿಯಾ ಯಾದಗಿರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.ಇನ್ನೂ ಎರಡು ವರ್ಷಗಳ ಅವಧಿ ಪೂರ್ಣಗೊಳ್ಳದೇ ವರ್ಗಾವಣೆ ಯಾಗಿದ್ದಾರೆ.ಜಿಲ್ಲೆಯಲ್ಲಿ ಜನಪರ ಕಾರ್ಯಗಳ ಮೂಲಕ ಜನಮನಸೆಳೆದಿದ್ದರು.