ದಾವಣಗೇರಿ –
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ನಡೆಯುತ್ತಿರುವ ಪಾದಯಾತ್ರೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈಗಾಗಲೇ ದಾವಣಗೇರಿ ತಲುಪಿರುವ ಈ ಒಂದು ಹೋರಾಟ ತೀವ್ರವಾದ ಸ್ವರೂಪವನ್ನು ಪಡೆದು ಕೊಳ್ಳುತ್ತಿದೆ. ಪಾದಯಾತ್ರೆ ದಾವಣಗೇರಿ ತಲುಪಿದರು ಕೂಡಾ ಹೋರಾಟಕ್ಕೆ ರಾಜ್ಯ ಸರ್ಕಾರ ಮತ್ತು ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ
ಸ್ಪಂದಿಸದ ಹಿನ್ನಲೆಯಲ್ಲಿ ಇಂದು ದಾವಣಗೇರಿ ಯಲ್ಲಿ ಹೋರಾಟಗಾರರು ಮುಖ್ಯಮಂತ್ರಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.ನಗರದಲ್ಲಿ ಉಗ್ರ ಸ್ವರೂಪವನ್ನು ಹೋರಾಟ ಪಡೆದುಕೊಂಡಿತು.
ಪಂಚಮಸಾಲಿ ಸಮಾಜದ ಶ್ರೀಗಳ ಪಾದಯಾತ್ರೆ ಮುಂದುವರೆದಿದ್ದ 2 ಎ ಮೀಸಲಾತಿ ನೀಡದಿದ್ದಕ್ಕೆ ಸಮುದಾಯದವರು ಆಕ್ರೋಶವನ್ನು ವ್ಯಕ್ತಪಡಿಸು ತ್ತಿದ್ದಾರೆ. ಹೋರಾಟಕ್ಕೆ ಸ್ಪಂದಿಸದ ಸಿಎಂ ವಿರುದ್ದ ಸಿಡಿದೆದ್ದ ಹೋರಾಟಗಾರರು ಮುಖ್ಯಮಂತ್ರಿ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಚ್ಚಿದ ಸಮುದಾಯದ ಆಕ್ರೋಶವನ್ನು ವ್ಯಕ್ತಪಡಿಸಿದರು.
ದಾವಣಗೆರೆಯ ಗಾಂಧಿ ವೃತ್ತದಲ್ಲಿ ಸಿಎಂ ಪ್ರತಿಕೃತಿ ದಹನ ಮಾಡಿದರು. ವಚನಾನಂದ ಶ್ರೀ, ಜಯಮೃತ್ಯುಂಜಯ ಸ್ವಾಮೀಜಿ ಎದುರಲ್ಲೇ ಯಡಿಯೂರಪ್ಪ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಚ್ಚಿದರು.
300 ಕಿಮೀ ಪಾದಯಾತ್ರೆ ಮಾಡಿದ್ರೂ ಮೀಸಲಾತಿ ನೀಡುತ್ತಿಲ್ಲ ಅಂತ ಶ್ರೀಗಳು ಆಕ್ರೋಶವನ್ನು ವ್ಯಕ್ತಪಡಿಸಿದರು. ದಾವಣಗೆರೆಯ ಗಾಂಧಿ ಸರ್ಕಲ್ ನಲ್ಲಿ ಬಿ ಎಸ್ ವೈ ಭಾವಚಿತ್ರವನ್ನು ದಹಿಸಿದರು.
ವಿಜಯಾನಂದ ಕಾಶಪ್ಪನವರ, ಎಚ್ ಎಸ್ ನಾಗರಾಜ್ ಶ್ರೀಗಳ ಸಮ್ಮುಖದಲ್ಲಿ ಬಿಎಸ್ ವೈ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿದ್ದು ಕಂಡು ಬಂದಿತು. ಇದರೊಂದಿಗೆ ಹೋರಾಟದ ಕಿಚ್ಚು ಮತ್ತಷ್ಟು ತೀವ್ರಗೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.