ಕೊಡಗು –
ಮಹಾಮಾರಿ ಕೊವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಕಾಡುತ್ತದೆ ಎಂದು ಈಗಾಗಲೇ ತಜ್ಞರು ಮತ್ತು ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಈ ಒಂದು ದೊಡ್ಡ ಎಚ್ಚರಿಕೆಯ ನಡುವೆಕೊಡಗು ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ.
ಕೊವಿಡ್ ಮೂರನೇ ಅಲೆ ಆಗಲೇ ಆರಂಭವಾಗಿದೆ ಯಾ ಎನ್ನೋ ಆತಂಕ ಕೊಡಗು ಜಿಲ್ಲೆಯಲ್ಲಿ ಶುರು ವಾಗಿದೆ.ಹೌದು ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಮಕ್ಕಳಿಗೆ ಆಗಿರುವ ಕೊವಿಡ್ ಸೋಂಕಿನ ಅಂಕಿ ಸಂಖ್ಯೆಗಳನ್ನು ಪರಿಶೀಲಸಿದಾಗ ಜಿಲ್ಲೆಯಲ್ಲಿ ನಿಜವಾಗಿಯೂ ಮೂರನೇ ಆರಂಭವಾಗಿರಬೇಕು ಎನ್ನೋ ಅನುಮಾನ ಕಾಡದೆ ಇದೆ.
ದೇಶದಲ್ಲಿ ಈಗಾಗಲೇ ಎರಡನೆ ಅಲೆಯನ್ನು ದಾಟು ವ ಹಂತದಲ್ಲಿ ನಾವಿದ್ದೇವೆ.ಈ ನಡುವೆ ಕೊಡಗಿನಲ್ಲಿ ಮೂರನೇ ಅಲೆ ಆರಂಭವಾಗಿರೋ ಲಕ್ಷಣಗಳು ಗೋಚರಿಸುತ್ತಿವೆ. ಮೊದಲನೇ ಅಲೆಯಿಂದ ಇದು ವರೆಗೆ ಕೊಡಗು ಜಿಲ್ಲೆಯಲ್ಲಿ 21700 ಕ್ಕೂ ಹೆಚ್ಚು ಜನರಿಗೆ ಕೊವಿಡ್ ಸೋಂಕು ತಗುಲಿದೆ.ಅದರಲ್ಲಿ 3609 ಮಕ್ಕಳಿಗೆ ಸೋಂಕು ಒಕ್ಕರಿಸಿದೆ ಎಂದು ಕೊಡಗು ಡಿಎಚ್‍ಓ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.