ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು ಪವಾಡ ಬಯಲು ಹಾಸ್ಯ ಸಂಜೆ ಕಾರ್ಯಕ್ರಮ ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಕಲ್ಕಿ ಎಜುಕೇಶನ್ ಡೆವೆಲಪ್ಮೆಂಟ್ ಸೊಸೈಟಿಯ ಆಶ್ರಯದಲ್ಲಿ ನಡೆಯಿತು ವಿಶೇಷ ಕಾರ್ಯಕ್ರಮ ಹೌದು
ಹುಬ್ಬಳ್ಳಿಯ ವಿವೇಕಾನಂದ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಕಲ್ಕಿ ಎಜುಕೇಶನ್ ಡೆವೆಲಪ್ಮೆಂಟ್ ಸೊಸೈಟಿಯ ಆಶ್ರಯದಲ್ಲಿ 15 ದಿನಗಳ ಕಾಲ ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ನಡೆಯಿತು
ದೀಪ ಬೆಳಗಿಸಿ,ಉದ್ಘಾಟಿಸಿ ಮಾತನಾಡಿದ ಈಶ್ವರಿ ಫೌಂಡೇಶನ್ ಮುಖ್ಯಸ್ಥರು ಸಂತೋಷ ವರ್ಣೇಕರ, ಮಕ್ಕಳು ಮೊಬೈಲ್ ಮತ್ತು ಟಿವಿ ಯಿಂದ ದೂರ ಇರಲು, ಮಕ್ಕಳಿಗೆ ಬೇಸಿಗೆ ಶಿಬಿರ ಅತ್ಯಂತ ಉತ್ತಮ ವಿಚಾರ, ಮಕ್ಕಳಿಗೆ ಕತೆ ಕಟ್ಟು ವುದು, ಕವನ ಬರೆಯುವುದು, ನಿಧಿಶೋಧ ನೃತ್ಯ, ಚಿತ್ರಕಲೆ ಸೃಜನಾತ್ಮಕ ಚಟುವಟಿಕೆಗಳು
ಮುಂತಾದ ಚಟುವಟಿಕೆಗಳನ್ನು ರೂಡಿಸುವು ದರಿಂದ ಮಕ್ಕಳ ವಿಕಾಸಕ್ಕೆ ಸಹಕಾರಿ ಆಗಲಿದೆ ಎಂದರು, ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಕಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ನೀಲಾಂಬಿಕಾ ಶೆಟ್ಟರ್ ಮಾತನಾಡಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಧಾರವಾಡ ಜಿಲ್ಲೆಯ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಉಚಿತವಾಗಿ ಬಂದು ಮಕ್ಕಳಿಗೆ ಹೊಸ ಹೊಸ ಚಟುವಟಿಕೆಗಳನ್ನು ಕಲಿಸಿದರು
ಶಾಲೆಯಲ್ಲಿ ಸಿಗಲಾರದ ಹೊಸ ಜ್ಞಾನವನ್ನು ಮಕ್ಕಳು ಪಡೆದರು, ಉಚಿತವಾಗಿ ಶ್ರೀ ವಿವೇ ಕಾನಂದ ಶಾಲೆಯನ್ನು ನೀಡಿದ ಸಂಸ್ಥೆಗೂ ಸಹ ಧನ್ಯವಾದ ತಿಳಿಸಿದರು, ಧಾರವಾಡದ ಖ್ಯಾತ ಪವಾಡ ತಜ್ಞರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯ ಸುರೇಶ ಚೌಗಲಾ
ನೀರಿನಿಂದ ದೀಪ ಹಚ್ಚುವುದು ಸ್ಥಳದಲ್ಲೇ ದೆವ್ವ ಬಿಡಿಸುವುದು ಬೆಂಕಿಯ ಸಹಾಯವಿಲ್ಲದೆ ಹಾಲು ಉಕ್ಕಿಸುವುದು ಸುಡುವ ಬೆಂಕಿಯನ್ನು ಮೈಮೇಲೆ ಹಚ್ಚಿಕೊಳ್ಳುವುದು.ಕಾರದಪುಡಿಯಲ್ಲಿ ಮಾಟ ಮಂತ್ರದ ಪರಿಕಲ್ಪನೆ ತಿಳಿಸುವುದು.ಮಾಟ ಮಂತ್ರದ ಮೂಲಕ ನಿಧಿಶೋದ. ತೆಂಗಿನ ಕಾಯಿಯಲ್ಲಿ ಬೆಂಕಿ ತರಿಸಿ ನಿಧಿ ಹೇಳುವುದು .
ಮಾಟ ಮಂತ್ರದ ವಾಮಾಚಾರದ ಬಗ್ಗೆ ವಿವರಿಸಿದರು ಖ್ಯಾತ ಹಾಸ್ಯ ಕಲಾವಿದ ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ ಮಕ್ಕಳಿಗೆ ಹಾಡುಗಳನ್ನು ಹೇಳುತ್ತಾ, ಮೊಬೈಲ್ ನಿಂದ ಆಗುವ ದುರುಪಯೋಗದ ಕುರಿತು ಉದಾಹರಣೆ ಮೂಲಕ ವಿವರಿಸಿ, ನಿಮ್ಮ ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಒಂದು ಪುಸ್ತಕ ಕೊಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು
ಹಾಸ್ಯದ ಮೂಲಕ ಮಕ್ಕಳಿಗೆ ರಂಜಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಸದಸ್ಯ ಎಲ್ ಐ ಲಕ್ಕಮ್ಮನವರ ಭಾರತ ಜ್ಞಾನ ವಿಜ್ಞಾನ ಸಮಿತಿ, ಇದೊಂದು ಶಿಕ್ಷಕರ ಅಥವಾ ಇತರ ಸಂಘಟನೆಯಲ್ಲ, ಇದೊಂದು ವಿಜ್ಞಾನ ಆಸಕ್ತರ ಸಂಘಟನೆ ಆಗಿದೆ,
ವಿಜ್ಞಾನ ವನ್ನು ಜನಪ್ರಿಯಗೊಳಿಸುವ, ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸಂಘಟನೆಯಾಗಿದೆ, ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಹರಡುವುದು, ವಿಜ್ಞಾನವನ್ನು ವಿಶೇಷವಾಗಿ ವಿಜ್ಞಾನ ಶಿಕ್ಷಣವನ್ನು ಹೆಚ್ಚು ಅರ್ಥಪೂರ್ಣ ಗೊಳಿಸುವುದು, ಮಕ್ಕಳ ಸಾಹಿತ್ಯ ಸಂಬ್ರಮ ದಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ಮಕ್ಕಳಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಬಿಜಿವಿಎಸ್ ಮಾಡುತ್ತಿದೆ ಎಂದರು. ಜೊತೆಗೆ ಹುಬ್ಬಳ್ಳಿ ನಗರದ ಕಲ್ಕಿ ಎಜುಕೇಶನ್ ಎಜುಕೇಶನ & ಡೆವಲಪ್ಮೆಂಟ್ ಸೊಸೈಟಿಯು ಕಳೆದ 15 ವರ್ಷಗಳಿಂದ ಶೈಕ್ಷಣಿ ಕವಾಗಿ ಹಾಗೂ ಸಾಮಾಜಿಕವಾಗಿ ಮಕ್ಕಳು ಮತ್ತು ಮಹಿಳೆಯರಿಗೋಸ್ಕರ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದೆ.
ಕಲ್ಕಿ ಎಜುಕೇಶನ್ ಅಂಡ್ ಡೆವಲಪ್ಮೆಂಟ್ ಸೊಸೈಟಿ ಸಂಸ್ಥಾಪಕ ಶ್ರೀ ಕಿರಣ್ ಶೆಟ್ಟರ್ ಅವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನೀಲಾಂಬಿಕ ಕಿರಣ್ ಶೆಟ್ಟರ್ ಅವರು ಬೇಸಿಗೆ ಶಿಬಿರವು ಅತ್ಯು ತ್ತಮವಾಗಿ ನಡೆಯಲು ಅದರ ಪ್ರತಿಯೊಂದು ಜವಾಬ್ದಾರಿಯನ್ನು ನಮ್ಮ ತಲೆಯ ಮೇಲೆ ಹೊತ್ತು ಸರಿಯಾಗಿ ನಿಭಾಯಿಸಿದರು ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷರಾದ ಕಿರಣ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬಿಜಿವಿಎಸ್ ಸದಸ್ಯ ಮಲ್ಲಪ್ಪ ಹೊಸಕೇರಿ, ಪ್ರೇಮ ಪೂಜಾರ, ರೇಖಾ ಮೊರಬ, ಶ್ವೇತಾ ಶೆಲವಡಿ, ಅನುಪಮಾ ಹಂಸಭಾವಿ ಲಕ್ಷ್ಮಿ ಚಿಕ್ ತೋಟದ, ಲಲಿತ ಶಲವಾಡಿ, ಅಶೋಕ್ ಶೆಟ್ಟರ ಹಾಗೂ ವಿದ್ಯಾಶ್ರೀ ಪಾಟೀಲ್ ಮುಂತಾದವರು ಹಾಜರಿ ದ್ದರು,
ನೀಲಾಂಬಿಕಾ ಶೆಟ್ಟರ್ ಸ್ವಾಗತಿಸಿದರು, ಸುಪ್ರಿಯ ದೊಡವಾಡ ನಿರೂಪಿಸಿ ವಂದಿಸಿದರು. ನಂತರ ಮಕ್ಕಳು ಶಿಬಿರದಲ್ಲಿ ಕಲಿತ ನಾಟಕ ನೃತ್ಯವನ್ನು ಹಾಗೂ ವಿವಿಧ ಚಟುವಟಿಕೆಗಳನ್ನು ಮಾಡಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..