ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ ವೇತನ ಪರಿಷ್ಕ್ರರಣೆ ಕುರಿತಂತೆ 7ನೇ ವೇತನ ಆಯೋಗ ವನ್ನು ರಚನೆ ಮಾಡಲಾಗಿದೆ.ರಾಜ್ಯ ಸರ್ಕಾರವು ಈಗಾಗಲೇ ಈ ಒಂದು ಆಯೋಗಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದು ರಚನೆಗೊಂಡು 3 ತಿಂಗಳು ಕಳೆದಿದ್ದು ಈ ನಡುವೆ ಸಮಿತಿ ಕೂಡಾ ಕೆಲಸ ಕಾರ್ಯವನ್ನು ಮಾಡುತ್ತಿದ್ದು ಇದೇಲ್ಲದರ ನಡುವೆ ಸಧ್ಯ ರಾಜ್ಯದ ಸಮಸ್ತ ಸರ್ಕಾರಿ ನೌಕರ ರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರೊದು ಚುನಾವ ಣೆಯ ಮುನ್ನವೇ ಈ ಒಂದು ವೇತನ ಆಯೋಗ ವನ್ನು ಬಿಜೆಪಿ ಸರ್ಕಾರ ಜಾರಿಗೆ ಮಾಡುತ್ತದೆಯಾ ಇಲ್ಲ ಎಂಬ ಆತಂಕ ಮನೆ ಮಾಡಿದೆ.
ಇನ್ನೂ ಇತ್ತ ಈ ಒಂದು ವಿಚಾರದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಯವರು ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದು ಹೀಗಾಗಿ ಗೊಂದಲ ಉಂಟಾಗಿದ್ದು ಇದರ ನಡುವೆ ನಾಳೆ ಸರ್ಕಾರಿ ನೌಕರರ ಸಂಘಟನೆ ಈ ಕುರಿತಂತೆ ಸಭೆಯನ್ನು ಕರೆದಿದ್ದು ಮಹತ್ವದ ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿ ಮುಂದಿನ ಹೋರಾಟದ ರೂಪರೇಷೆಗಳ ಕುರಿತು ಚರ್ಚೆ ಯಾಗಲಿದೆ.
ಇನ್ನೂ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಉತ್ತರದಲ್ಲಿ ವೇತನ ಶ್ರೇಣಿ,ಕನಿಷ್ಠ ವೇತನದ ವಿವರಗಳನ್ನು ನೀಡಲಾಗಿದೆ.ಕರ್ನಾಟಕ ಸರ್ಕಾರ ರಚನೆ ಮಾಡಿ ರುವ ಸುಧಾಕರ್ ರಾವ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗೆ ಉತ್ತರಿಸುವ ದಿನಾಂಕವನ್ನು ಫೆಬ್ರವರಿ 28ರ ವರೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ.
ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಆಯೋಗಕ್ಕೆ ತನ್ನ ಉತ್ತರ ವನ್ನು ಸಲ್ಲಿಕೆ ಮಾಡಲಾಗಿದೆ. ಈ ಉತ್ತರದಲ್ಲಿ ಹಲವಾರು ಅಂಶಗಳನ್ನು ಸಂಘ ಪ್ರಸ್ತಾಪ ಮಾಡಿದೆ ಅಂಕಿ-ಸಂಖ್ಯೆಗಳ ಸಮೇತ ವಿವರಣೆ ಯನ್ನು ನೀಡಿದ್ದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ 7ನೇ ರಾಜ್ಯ ವೇತನ ಆಯೋಗಕ್ಕೆ ನೀಡಿರುವ ಉತ್ತರದ ಪ್ರತಿಯಲ್ಲಿ ವಿವರವಾಗಿ ನೀಡಲಾಗಿದೆ
ಆಯೋಗದ ಪ್ರಶ್ನಾವಳಿಗಳಲ್ಲಿ ವೇತನ ಪರಿಷ್ಕ ರಣೆ ವೇತನ ಸೌಲಭ್ಯ, ಹೊಸ ವೇತನ ರಚನೆ ಹೀಗೆ ವಿವಿಧ ವಿಚಾರಗಳನ್ನು ಪ್ರಸ್ತಾಪ ಮಾಡ ಲಾಗಿದೆ.ಪ್ರಸ್ತುತ ನಾವು ರಾಜ್ಯ ವೇತನ ಆಯೋ ಗದ ಶಿಫಾರಸ್ಸುಗಳನ್ನು ಮಾತ್ರ ನಿರೀಕ್ಷಿಸುತ್ತಿದ್ದು 2026ರಲ್ಲಿ ಪರಿಷ್ಕರಿಸಲಿರುವ ಕೇಂದ್ರ ಮಾದರಿ ಯ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಆನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಲಾಗಿದ್ದು ಹೀಗಾಗಿ ಏನೇನು ಬದಲಾವಣೆ ಆಗುತ್ತವೆ ಎಷ್ಟೇಷ್ಟು ಅನುಕೂಲವಾ ಗುತ್ತದೆ ಎಂಬ ಕುರಿತಂತೆ ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..