ರಾಮನಗರ –
ಅಮಾನತುಗೊಂಡ ಪಿಡಿಒ ರೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ರಾಮನಗರ ದಲ್ಲಿ ನಡೆದಿದೆ.ಹೌದು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಮೇಲಾಧಿಕಾರಿಗಳು ಇವರನ್ನು ಇತ್ತೀಚಿಗಷ್ಟೇ ಕೆಲಸದಿಂದ ಅಮಾನತು ಮಾಡಿ ದ್ದರು.ಹೀಗಾಗಿ ಬೇಸತ್ತು ಬೈರಮಂಗಲ ಗ್ರಾಮ ಪಂಚಾ ಯಿತಿ ಪಿಡಿಒ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಕ್ರಮವಾಗಿ ಇ-ಖಾತೆ ಮಾಡಿದ ಆರೋಪ ಪಿಡಿಒ ರವಿ ವಿರುದ್ಧ ಕೇಳಿಬಂದಿತ್ತು. ಯಲಹಂಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು ಈ ಹಿನ್ನೆಲೆ ರವಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರು ಕೆಲಸದಿಂದ ಅಮಾನತು ಮಾಡಿದ್ದರು.

ಇದರಿಂದ ಮನನೊಂದ ರವಿ ಹಾರೋಹಳ್ಳಿಯ ಕೊಳ್ಳಗಂ ಡನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.