ಬೆಂಗಳೂರು –
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು.ನಗರದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದಿಂದ ಕೆಪಿಸಿಸಿ ಘಟಕದ ರಾಜ್ಯ ಅಧ್ಯಕ್ಷ ಡಿ ಕೆ ಶಿವಕುಮಾರ ನೇತ್ರತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನಾ ರಾಲಿ ನಡೆಯಿತು.

ಬೃಹತ್ ಈ ಒಂದು ಪ್ರತಿಭಟನಾ ರಾಲಿಯಲ್ಲಿ ಹುಬ್ಬಳ್ಳಿ ಧಾರವಾಡದಿಂದಲೂ ಸಾಕಷ್ಟು ಪ್ರಮಾಣದಲ್ಲಿ ಕೈ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ವಿರುದ್ದ ಬೆಂಗಳೂರಿನಲ್ಲಿ ನಡೆದ ಈ ಒಂದು ಪ್ರತಿಭಟನಾ ರಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸ್ವತಂತ್ರ್ಯ ಸಂಗ್ರಾಮದ ಉದ್ಯಾನವನದವರೆಗೆ ಸಾಗಿತು. ಬೃಹತ್ ಸಭೆಯ ನಂತರ ನೇರವಾಗಿ ರಾಜಭವನದವರೆಗೆ ಪ್ರತಿಭಟನಾ ರಾಲಿ ಸಾಗೀತು.

ನಡೆಯುತ್ತಿದ್ದ ರೈತರ ರಾಜಭವನ ಚಲೋ ಪ್ರತಿಭಟನಾ ರಾಲಿಯನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆ ಹಿಡಿದರು.

ಪ್ರತಿಭಟನಾ ರಾಲಿ ಮೂಲಕ ರೈತರೊಂದಿಗೆ ರಾಜಭವನದತ್ತ ತೆರಳುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ ಹಲವರನ್ನು ಪೊಲೀಸರು ಮಾರ್ಗ ಮಧ್ಯೆಯೇ ತಡೆದು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ರಾಲಿಯಲ್ಲಿ ಸಾಗಿದ್ದ ರೈತರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಶಾಂತಿಯುತವಾಗಿ ನಡೆಯುತಿದ್ದ ಪ್ರತಿಭಟನೆಯನ್ನು ಪೊಲೀಸಿನವರ ಮೂಲಕ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹತ್ತಿಕ್ಕುವ ಪ್ರಯತ್ನ ನಡೆಸಿದೆ.

ಇದನ್ನು ನಾವು ಖಂಡಿಸುತ್ತೇವೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಪ್ರಜಾಪ್ರಭುತ್ವ ಬಲವಾಗಿರಬೇಕೆಂದರೆ ವಿರೋಧ ಪಕ್ಷ ಬಲವಾಗಿರಬೇಕು ಎಂದು ಹೇಳಿದರು.

ಇನ್ನೂ ಈ ಒಂದು ದೊಡ್ಡ ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಧಾರವಾಡ ಕಾಂಗ್ರೇಸ್ ಪಕ್ಷದ ಮುಖಂಡರಾದ ಜಿಲ್ಲಾಧ್ಯಕ್ಷ ಅನಿಲ ಪಾಟೀಲ, ನಾಗರಾಜ ಗೌರಿ,ಸತೀಶ್ ಮೆಹರವಾಡೆ.

ಸಿದ್ದಾರೂಢ ಶಿಸುನಲ್ಲಿ ಬಸೀರ ಗುಡೂಮಾಲ್, ಆತ್ಮನಂದ ತಳವಾರ, ರಮೇಶ ಅಸೂಂಡಿ,ಮಹೇಶ ದಾಬಡೆ.ಕಾರ್ತಿಕ ಹೊಳೆ,ಮಹೇಶ್ ದಾರವಾಡಕರ,ಮಿಂಟೂ ಮೆಹರವಾಡೆ ಸೇರಿದಂತೆ ಮಮ ಕೈ ಪಕ್ಷದ ನಾಯಕರು ಮುಖಂಡರಿಗೆ ಶಕ್ತಿ ತುಂಬಿದರು.