ಬೆಂಗಳೂರು –
ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಷಡಕ್ಷರಿ ಮತ್ತು ಪ್ರಾಥಮಿಕ ಶಾಲಾ ರಾಜ್ಯ ಅಧ್ಯಕ್ಷರಾದ ಶಂಬುಲಿಂಗೇ ಗೌಡರು ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಮತ್ತು ಪದವೀಧರ ರಾಜ್ಯ ಅಧ್ಯಕ್ಷರಾದ ಸೊರಟ್ಟಿ ಯವರಲ್ಲಿ ನನ್ನದೊಂದು ಮನವಿ ನಾನು B Sc/BA/M Sc/M A/ Bed ಪದವಿ ಪಡೆದರು PST ಶಿಕ್ಷಕ/ಕಿ,
ಮಾನ್ಯರೆ.
ತಾವು PST ಶಿಕ್ಷಕರಿಗೆ GPT ಶಿಕ್ಷಕರಾಗಿ ಬಡ್ತಿ ನೀಡಲು C&R ಬದಲಾವಣೆ ಮಾಡಲು ಹೊರಟಿರುವುದು ಸ್ವಾಗತಾರ್ಹ
ಆದರೆ ಈಗಾಗಲೇ ನಾವು 1ರಿಂದ 8ನೇ ತರಗತಿಗೆ ಭೋದಿ ಸುತ್ತಿರುವ ಶಿಕ್ಷಕರಿಗೆ ಪುನಃ 6ರಿಂದ8 ನೇ ತರಗತಿಗೆ ಮುಂಬಡ್ತಿ ನೀಡುವುದರಲ್ಲಿ ಅರ್ಥವಿದೆಯೇ?
ನಾವು ಈಗಾಗಲೇ ಈ ಹಿಂದೆ ಇದ್ದ ನಿಯಮದಂತೆ ಪ್ರಾಥ ಮಿಕ ಶಾಲಾ ಶಿಕ್ಷಕರಾಗಿ 1ರಿಂದ7/8ನೇ ತರಗತಿಗೆ ಬೋಧಿ ಸಲು ಸೇವೆಗೆ ಸೇರಿದ್ದೇವೆ.ಆಗ ಪ್ರಾಥಮಿಕ ಶಾಲೆ ಎಂದರೆ 1ರಿಂದ 7ಎಂದೇ ಇತ್ತು. ಹಾಗಾಗಿ ನಮಗೆ ಆಗ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪದನಾಮೀಕರಿಸಿ ಆದೇಶ ನೀಡಿದ್ದರು.
ಈಗ ನಿಯಮ ಬದಲಾವಣೆ ಆಗಿದೆ.ಎಂದು ದಿಢೀರ್ ಅಂತ PST 1ರಿಂದ 5 ಎಂದು ಬದಲಾಯಿಸಿರುವುದು. ದಿಢೀರ್ ಹಿಂಬಡ್ತಿ ನೀಡಿರುವುದು ಸರಿಯಲ್ಲ.ಈಗಾಗಲೇ ನಾವು 1ರಿಂದ7/8ನೇ ತರಗತಿಗೆ ಬೋಧಿಸುತ್ತಿದ್ದೇವೆ. ಮುಂದೆಯು ಸಹ 1ರಿಂದ 8ಕ್ಕೆ ಬೋಧಿಸಬೇಕು.ತಕ್ಷಣವೇ Gpt ಶಿಕ್ಷಕರನ್ನು ನೀಡಿ ನಮ್ಮನ್ನು 1ರಿಂದ 5ಕ್ಕೆ ಬೋಧಿಸಿ ಎಂದು ಹೇಳುವುದು ಎಷ್ಟು ಸರಿ
ಈಗ ನೀಡುವದು PST ಸಂಬಳ ಆದರೆ ಕೆಲಸ PST & Gpt ಎರಡು ಕೆಲಸ ಮಾಡಬೇಕು.ಇದು ಯಾವ ರೀತಿಯ ನ್ಯಾಯ ಸದ್ಯ ನಮಗೆ ಮುಂಬಡ್ತಿ ಬೇಡ ಮೊದಲಿನ ಹಾಗೆ PST 1ರಿಂದ 8 ಶಿಕ್ಷಕರು ಎಂದು ಪುನಃ ಪದನಾಮೀಕರಿಸಿ C&R ಬದಲಾವಣೆ ಮಾಡಿ ಆದೇಶ ಹೊರಡಿಸಿ ನಮಗೆ ನ್ಯಾಯ ಒದಗಿಸಿ ಕೊಡಿ.ದಯಮಾಡಿ ರಾಜ್ಯದ ಎಲ್ಲಾ ಪದವೀಧರ ಶಿಕ್ಷಕರ ಪರವಾಗಿ ನಿಮ್ಮಲ್ಲಿ ಕಳಕಳಿಯ ವಿನಂತಿ
ತಾವು ಮೊದಲು ನಮಗೆ ಅದ ಅನ್ಯಾಯ ಸರಿಪಡಿಸಿ ನಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಪದವಿ ಪಡೆದ ವರಿಗೆ PST 1ರಿಂದ 8 ಕನ್ನಡ PST 1ರಿಂದ 8 ಸಮಾಜ PST 1ರಿಂದ 8 ಗಣಿತ/ ವಿಜ್ಞಾನ/ಇಂಗ್ಲಿಷ್ ಹೀಗೆ ಪುನ: ಪದನಾಮೀಕರಿಸಿ ಆದೇಶ ಹೊರಡಿಸಿ ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ.
ಇಲ್ಲದೆ ಹೋದಲ್ಲಿ ಈಗ ಮುಂಬಡ್ತಿ ನೀಡಿದ್ದೆ ಆದಲ್ಲಿ ನಾವು ಈಗಿರುವ Gpt ಶಿಕ್ಷಕಿಗಿಂತ ಜೂನಿಯರ್ ಆಗುತ್ತೇವೆ.20 25.30,ವರ್ಷದ ಬಡ್ತಿಗಳು ಸಿಗುವುದಿಲ್ಲ.ಪ್ರೌಢ ಶಾಲೆಗೂ ಪ್ರಮೋಷನ್ ಕೊಡುವಾಗಲೂ ಮೊನ್ನೆ ಮೊನ್ನೆ ಬಂದಿರುವ Gpt ಶಿಕ್ಷಕರಿಗಿಂತ ಜೂನಿಯರ್ ಆಗ್ತಿವಿ ಅಲ್ಲೂ ಅನ್ಯಾಯ ವಾಗಲಿದೆ.
ಮೊದಲು ಹಿಂಬಡ್ತಿ ತೆಗಿಸಿ ನಮಗೆ ಪ್ರಾಥಮಿಕ ಶಾಲೆ 1ರಿಂದ 8 ಎಂದು ಹಿಂದೆ ಇದ್ದ ಆದೇಶವನ್ನೇ ಮುಂದುವ ರೆಸಿ ಇದು ನಮ್ಮ ನಿವೃತ್ತಿಯವರೆಗೂ ಮಾತ್ರ ಇರುತ್ತೆ ಈ ರೀತಿಯಲ್ಲಿ ಮಾತ್ರವೇ ನ್ಯಾಯ ಸಿಗುತ್ತದೆ
Gpt ಯವರು ಬಂದ ವರ್ಷದಿಂದ ಸೇವೆಗೆ ಸೇರಿದ ವರ್ಷ ದಿಂದ ಅವರಿಗೆ ಆದೇಶದಲ್ಲಿ 6ರಿಂದ 8 ಎಂದೇ ನೇಮಕ ವಾಗಿದೆ ಅದು ಹಾಗೆ ಮುಂದುವರೆಯಲಿ.ಇನ್ನು ಮುಂದೆ NEP ಬಂದ ನಂತರ Pst Gpt ಎಂದೇ ನೇಮಕ ಮಾಡು ತ್ತಾರೆ.ಅದರಂತೆ ಮುಂದುವರೆಯಲಿ.
ಮುಂಬಡ್ತಿ ಪಡೆಯುವ ಬದಲು Pst 1ರಿಂದ5 ಉಳಿಯುವುದೇ ಉತ್ತಮ. ಈಗ 40%ಬಡ್ತಿ ಕೊಟ್ಟರು ಒಂದು ತಾಲೂಕಿಗೆ 15 ರಿಂದ 20ಜನಕ್ಕೆ ಬಡ್ತಿ ಸಿಗಬಹುದೇ? ಅಷ್ಟೇ ಇದರಿಂದ ಯಾವ ಲಾಭವು ಇಲ್ಲ ಈ ರೀತಿಯ ಘೋರ ಅನ್ಯಾಯ ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಮಾತ್ರವೇ? ಬೇರೆ ರಾಜ್ಯಗಳಲ್ಲೂ ಇದೆಯಾ? ತುಂಬಾ ಬೇಸರವಾಗುತ್ತೆ. ನಮ್ಮ ಸ್ಥಿತಿ ಯಾವ ಇಲಾಖೆಯಲ್ಲೂ ಇಲ್ಲ ಈ ಅನ್ಯಾಯವನ್ನು ಸರಿಪಡಿಸುವವರು ಯಾರು ಇಲ್ಲವಲ್ಲ. ಎಂಬುದು ಬೇಸರದ ಸಂಗತಿ
ಸರ್ಕಾರ ನಮಗೆ ಬಡ್ತಿ ಕೊಡುತ್ತೆ ಅಂತ ವೇತನ ರಹಿತ Bed ಮಾಡಿ ಮೋಸ ಹೋದ್ವಿ. ಈಗ 1ರಿಂದ 8ಕ್ಕೂ ಅಲ್ಲಾ ನಾವು ಟೀಚರ್ 1ರಿಂದ5, Pst
ಸರ್.. ನಮಗೆ ನ್ಯಾಯ ಒದಗಿಸಿ ಕೊಡಿ. ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ. ಪುನ ಪರಿಶೀಲಿಸಿ ನಮ್ಮ ಸೇವಾ ಹಿರಿತನ ವನ್ನಾದರೂ ಉಳಿಸಿಕೊಡಿ ನಮಗೆ ವರ್ಗಾವಣೆ ಸಂಧರ್ಭದಲ್ಲಿ 1ರಿಂದ8ನೇ ತರಗತಿಯ ಶಾಲೆಗಳಿಗೂ ಅವಕಾಶ ಮಾಡಿಕೊಡಿ.ಎಲ್ಲಾ ಪದವೀಧರರನ್ನು ವಿಲೀನ ಗೊಳಿಸಿ ಮೊದಲಿನ ನಿಯಮ ಮತ್ತೆ ಮುಂದುವರೆಸಿ ಇದು PST ಗಳಿಗೆ ಮಾತ್ರ ಎಂದು ಬದಲಾವಣೆ ಮಾಡಿ ಕೊಡಿ ಸರ್ ದಯವಿಟ್ಟು…
ನೊಂದ ಶಿಕ್ಷಕರ ಪರವಾಗಿ