ಕೊಪ್ಪಳ –
ಶಿಕ್ಷಕರ ಹುದ್ದೆ ಹೆಚ್ಚಿಸಲು ಆಗ್ರಹಿಸಿ ಕೊಪ್ಪಳ ದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು ಹೌದು ಹೆಚ್ಚುವರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿಪಿಎಸ್ ಟಿಆರ್) ಹಾಗೂ ಪ್ರೌಢಶಾಲಾ ಶಿಕ್ಷಕರ (ಎಚ್‌ಎಸ್ ಟಿಆರ್) ಹುದ್ದೆಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.
ಡಿಡಿಪಿಐ ಶ್ರೀಶೈಲ ಬಿರಾದಾರ ಅವರಿಗೆ ಮನವಿ ಸಲ್ಲಿಸಿ
ಕಲ್ಯಾಣ ಕರ್ನಾಟಕದಲ್ಲಿ 14,107 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಕನಿಷ್ಠ 12,000 ಅಧಿಕವಾಗಿ ಪ್ರಾಥಮಿಕ ಮತ್ತು ಪ್ರೌಢ (ಮಾಧ್ಯಮಿಕ) ಶಿಕ್ಷಕರ ನೇಮಕಾತಿ ಹೆಚ್ಚಿಸ ಬೇಕು 2023ರಲ್ಲಿ ಬಿ. ಇಡಿ ಮತ್ತು ಟಿ.ಇ.ಟಿನಲ್ಲಿ ಅರ್ಹತೆ ಪಡೆದವರು 70 ಸಾವಿರ ಅಭ್ಯರ್ಥಿಗಳು ಈ ಭಾಗದಲ್ಲಿ ದ್ದಾರೆ. ಅಲ್ಲದೆ ಒಟ್ಟು 22 ಸಾವಿರ ಅಧಿಕ ಶಿಕ್ಷಕ ಹುದ್ದೆ ಗಳು ಖಾಲಿಯಿವೆ ಎಂದರು.
‘2022ರಲ್ಲಿ ಶಿಕ್ಷಕ ನೇಮಕಾತಿ ನಡೆದಿದ್ದು ಇಲ್ಲಿಯವರೆಗೆ ಯಾವುದೇ ಶಿಕ್ಷಕ ನೇಮಕಾತಿ ಪ್ರಕ್ರಿಯೆ ನಡೆಯದಿರು ವುದರಿಂದ ಈ ಭಾಗದ ಶೈಕ್ಷಣಿಕ ಪ್ರಗತಿ ಕುಂಠಿತಗೊಂ ಡಿದೆ. ಹಿಂದಿನ ಮತ್ತು ಸದ್ಯದ ಸ್ಥಿತಿಯನ್ನು ಗಮನಿಸಿ ನೇಮಕಾತಿಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಹೆಚ್ಚಿಸಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಶೈಕ್ಷಣಿಕವಾಗಿ ಬಲಗೊಳಿಸಬೇಕು’ ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಾಜಿ, ಪದಾಧಿಕಾ ರಿಗಳಾದ ಮಾರುತಿ, ಅಮರೇಶ್ ಲಿಂಗದಹಳ್ಳಿ, ಅಮರಯ್ಯ ಹಿರೇಮಠ, ಆಕಾಂಕ್ಷಿಗಳಾದ ಜಗದೀಶ ಗೌಡ, ಪ್ರಸನ್ನಕುಮಾರ, ಮರಿಯಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..