ಬೆಂಗಳೂರು –
ರಾಜ್ಯದಲ್ಲಿನ CRP ಮತ್ತು BRP ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಶಿಕ್ಷಣ ಸಚಿವರನ್ನು ಭೇಟಿಯಾಗಿ ಚರ್ಚೆ ಮಾಡಿದರು ಬೆಂಗಳೂರಿನಲ್ಲಿಂದು ಷಡಾಕ್ಷರಿ ಅವರ ನೇತ್ರತ್ವದಲ್ಲಿನ ಟೀಮ್ ಶಿಕ್ಷಣ ಸಚಿವರನ್ನು ನಿವಾಸದಲ್ಲಿ ಭೇಟಿಯಾಗಿ ಕೆಲ ಸಮಯ ಸಮಸ್ಯೆಗಳ ಕುರಿತಂತೆ ಚರ್ಚೆಯನ್ನು ಮಾಡಿದರು.
ನಂತರ ಬೇಡಿಕೆಗಳ ಕುರಿತಂತೆ ಮನವಿಯನ್ನು ಸಲ್ಲಿಸಿದರು. ಐದು ವರ್ಷಗಳ ಕಾಲ ಸೇವೆಯನ್ನು ಪೊರೈಸಿದ ಸಿಆರ್ ಪಿ ಮತ್ತು ಬಿ ಆರ್ ಪಿ ಅವರಿಗೆ ತಾಲೂಕಿನ ಒಳಗೆ ಸೇವೆ ಯನ್ನು ಮಾಡಲು ಅವಕಾಶವನ್ನು ಕಲ್ಪಿಸಬೇಕು ಹಾಗೇ ವರ್ಗಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡು ವಂತೆ ಒತ್ತಾಯವನ್ನು ಮಾಡಿದರು.ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಮನವಿಯನ್ನು ಷಡಕ್ಷರಿ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು
ಈ ಒಂದು ಸಮಯದಲ್ಲಿ ಸುರೇಶ್,ಖಜಾಂಚಿಗಳು, ವೆಂಕಟೇಶ ಗೌರವಧ್ಯಕ್ಷರು,ಗಿರಿಗೌಡ್ರು ಉಪಾಧ್ಯಕ್ಷರು, ಶಿವಲಿಂಗಯ್ಯನವರ ರಾಜ್ಯ ಕಾರ್ಯದರ್ಶಿಗಳು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ರಾಜ್ಯ ಸಂಘದ ಇತರ ಪದಾಧಿ ಕಾರಿಗಳು ಉಪಸ್ಥಿತರಿದ್ದರು.