ಶಾಲಾ ಮೈದಾನದಲ್ಲಿ ಸಸಿ ನೆಟ್ಟು ,ಶಾಲಾ ಗೋಡೆಗೆ ಬಣ್ಣ ಹಚ್ಚಿ ವಿಶ್ವ ಪರಿಸರ ದಿನಾಚರಣೆ – ಲತಾ ಮುಳ್ಳೂರ ರವರಿಂದ ಅಭಿನಂದನಾ ಸನ್ಮಾನ ಗೌರವ…..

Suddi Sante Desk
ಶಾಲಾ ಮೈದಾನದಲ್ಲಿ ಸಸಿ ನೆಟ್ಟು ,ಶಾಲಾ ಗೋಡೆಗೆ ಬಣ್ಣ ಹಚ್ಚಿ ವಿಶ್ವ ಪರಿಸರ ದಿನಾಚರಣೆ – ಲತಾ ಮುಳ್ಳೂರ ರವರಿಂದ ಅಭಿನಂದನಾ ಸನ್ಮಾನ ಗೌರವ…..

ಧಾರವಾಡ

ಶಾಲಾ ಮೈದಾನದಲ್ಲಿ ಸಸಿ ನೆಟ್ಟು ,ಶಾಲಾ ಗೋಡೆಗೆ ಬಣ್ಣ ಹಚ್ಚಿ ವಿಶ್ವ ಪರಿಸರ ದಿನಾಚರಣೆ – ಲತಾ ಮುಳ್ಳೂರ ರವರಿಂದ ಅಭಿನಂದನಾ ಸನ್ಮಾನ ಹೌದು ಇಂತಹ ದೊಂದು ಅಭೂತಪೂರ್ವ ಕಾರ್ಯಕ್ರಮ ವೊಂದು ಧಾರವಾಡ ದಲ್ಲಿ ನಡೆಯಿತು ‌ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಧಾರವಾಡ ಗ್ರಾಮೀಣ ಯೋಜನಾ ಕಚೇರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಇನ್ಸ್ಟಿಟ್ಯೂಟ್ ಫಾರ್ ಬಯೋಮೆಡಿಕಲ್ ಸೈನ್ಸ್, ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ಸತ್ತೂರ್, ಧಾರವಾಡದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಮತ್ತು ಸಸಿ ನಾಟಿ ಕಾರ್ಯಕ್ರಮವನ್ನು ಹಾಗು ಶಾಲಾ ಕಟ್ಟಡಗಳ ಹೊರ ಗೋಡೆ ಬಣ್ಣ ಮಾಡಿ ಸಿಂಗರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಕಾರ್ಯಕ್ರಮವನ್ನು ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ ಹಾಗೂ ಪ್ರೊಫೆಸರ್ ಕ್ಲೈಮೇಟ್ ಚೆಲ್ಲಿ deputy registrar SDM University ಇವರು ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೇ ಚಾಲನೆಯನ್ನು ನೀಡಿದರು

ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ನಿರ್ದೇಶಕರು ಮಾತನಾಡಿ ವಿಶ್ವ ಪರಿಸರ ದಿನವು ಜೂನ್ 5 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವು ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವುದಾಗಿದೆ, ಪರಿಸರವು ನಮ್ಮ ಜೀವನಕ್ಕೆ ಅತ್ಯಗತ್ಯ. ಅದು ನಮಗೆ ನೀರು, ಆಹಾರ, ಗಾಳಿ ಮತ್ತು ಇತರ ಸಂಪನ್ಮೂಲಗಳನ್ನು ಒದಗಿಸುತ್ತದೆ.

ಪರಿಸರವು ನಮ್ಮ ಆರೋಗ್ಯ, ಆರ್ಥಿಕತೆ ಮತ್ತು ಸಮಾಜದ ಮೇಲೆ ನೇರವಾದ ಪರಿಣಾಮ ಬೀರುತ್ತವೆ ಮನುಷ್ಯನ ದುರಾಸೆ ಪರಿಸರದ ವಿನಾಶದತ್ತ ಸಾಗುತ್ತಿರುವುದರಿಂದ ಇದರಿಂದಾಗಿ ಹಲವಾರು ತೊಂದರೆಗಳನ್ನು ನಾವೀಗ ನೋಡುತ್ತಿದ್ದೇವೆ ಉದಾಹರಣೆಗೆ ದಿನದಲ್ಲೇ ಗಂಟೆಯಲ್ಲಿ ಬೇಸಿಗೆಗಾಲ ಚಳಿಗಾಲ ಮತ್ತು ಮಳೆಗಾಲವನ್ನು ನೋಡುವಂತಾಗಿದೆ ಹಾಗಾಗಿ ಯಾವುದೇ ದಿನಾಚರಣೆಗಳನ್ನು ಆಚರಿಸುವ ಸಂದರ್ಭದಲ್ಲಿ ಅದರ ಬಗ್ಗೆ ಅರಿತು ವರ್ಷವಿಡಿ ಅದಕ್ಕೆ ಮಹತ್ವವನ್ನು ಕೊಡಬೇಕು ಬರಿ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್ ಹಾಕಿಕೊಂಡು ಸಂಭ್ರಮಿಸುವು ದಲ್ಲ ಎಂದರು

ಶಾಲೆಯ ಮೂರು ಕೊಠಡಿಗಳ ಹೊರಗೆ ಬಣ್ಣ ಹಾಗೂ ಬರಹವನ್ನು ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸ್ವತ: ಬಣ್ಣ ಹಚ್ಚಿ ಬರೆದದ್ದು ವಿಶೇಷವಾಗಿತ್ತು.ಹಾಗೆ ಈ ಸಂದರ್ಭದಲ್ಲಿ ವೇದಿಕೆ ಮೇಲಿರುವ ಅತಿಥಿಗಳು, ಗಣ್ಯರು ಮತ್ತು ಶಿಕ್ಷಕ ವೃಂದದವರು ಪರಿಸರದ ಕಾಳಜಿ ಮತ್ತು ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

ಕಾರ್ಯಕ್ರಮದಲ್ಲಿ ಡಾಕ್ಟರ್ ಅಜಯ್ ಕುಮಾರ್, ಎನ್ಎಸ್ಎಸ್ ಪ್ರೋಗ್ರಾಮ್ ಆಫೀಸರ್ ಡಾಕ್ಟರ್ ರೇಣುಕಾರಾಧ್ಯ ಕೆ. ಮಠ, ಶ್ರೀಮತಿ ಗಾಯತ್ರಿ ಕಮ್ಮಾರ CRP, ನವಲೂರ ಕ್ಲಸ್ಟರ್ ಹಾಗೂ ಡಾ . ಲತಾ ಎಸ್ ಮುಳ್ಳೂರ್ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ, ಶ್ರೀಮತಿ M.U.ಮಾಯಕ್ಕನವರ ಮುಖ್ಯೋಪಾಧ್ಯಾ ಯರು  ಶಿವಪ್ಪ ಚಲವಾದಿ ಅಧ್ಯಕ್ಷರು ಎಸ್ಡಿಎಂಸಿ, ಸಮಾಜ ಸೇವಕರು ಗುರುಪ್ರಸಾದ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ರಾಯನಾಳ್

ಕೃಷಿ ಮೇಲ್ವಿಚಾರಕರು ರವಿಕುಮಾರ್ SDMC ಅಧ್ಯಕ್ಷರಾದ  ಶಿವಪ್ಪ ಚಲವಾದಿ. ಶ್ರೀ ಪುಂಡಲೀಕ ತಳವಾರ್ . ಸಮಾಜ ಸೇವಕರು ಹಿರಿಯರಾದ ಬಿಲಕಾರ ನವೀನ ಹಾಗೂ ಸಹ ಶಿಕ್ಷಕಿಯರಾದ ಶ್ರೀಮತಿ G G ಬಡಿಗೇರ್ ಶ್ರೀಮತಿ ಶಿವಲೀಲಾ ಹಿರೇಮಠ ಶ್ರೀಮತಿ ದೀಪಾ ಬೆಳ್ಳಕ್ಕಿ ಹಾಗೂ ಶಾಲಾ ಮುದ್ದು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಶಾಲೆಯ ಶಾಲಾ ಸಹಶಿಕ್ಷಕಿ ಹಾಗು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗು ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಾದ Dr. ಲತಾ ಎಸ್ ಮುಳ್ಳೂರ ರವರು ವಿಶ್ವ ಪರಿಸರ ದಿನದಂದು ಪರಿಸರವೇ ನಮ್ಮೆಲ್ಲರ ಉಸಿರು,ಇಂತಹ ಪರಿಸರ ಕಾಳಜಿ ಕಾರ್ಯಕ್ರಮ ಗಳನ್ನೂ ಮತ್ತಷ್ಟು ಮೊಗದಷ್ಟು ಹಮ್ಮಿಕೊಳ್ಳಬೇ ಕ್ಕಾಗಿದೆ.

ಇಂತಹ ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಸಹಯೋಗದಲ್ಲಿ
ಆಯೋಜಿಸಿದ್ದ ಎಲ್ಲ ಸಂಸ್ಥೆ ಗಳ ಆಯೋಜಕರನ್ನು, ಮುಖ್ಯಸ್ಥರನ್ನು, ಹಿರಿಯರನ್ನು ಪ್ರಮುಖ ಅತಿಥಿ ಗಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಧನ್ಯವಾದ ಅರ್ಪಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.