ವಿಜಯಪುರ –
ಮಾನ್ಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಅವರ ಗಮನಕ್ಕೆ ತರುವುದೆನೆಂದರೆ ಹಿಂದಿ ಶಿಕ್ಷಕರಿಗೆ ಯಾವ ವರ್ಗದಲ್ಲಿ ಅಂದರೆ 1-5 ಅಥವಾ 6-8 ನೇ ವರ್ಗಕ್ಕೆ ಎಂಬ ಸ್ಪಷ್ಟವಾದ ಆದೇಶವು ಇಲ್ಲದ್ದರಿಂದ ಗೊಂದಲದಲ್ಲಿ ಇದ್ದಾರೆ. ಇಲಾಖೆ ಈ ಶಿಕ್ಷರಿಗೆ 6-8 ನೇ ವಿಭಾಗಕ್ಕೆವಿಲೀನ ಮಾಡದೆ ಇವರಿಗೆ ಪಿ..ಎಸ್.ಟಿ ಎಂದು ವರ್ಗಕರಿಸಿರು ವುದು ಇದು ಕಾನೂನುಬಾಹಿರವಾಗಿದೆ.
ಬಹಳಷ್ಟು ಶಿಕ್ಷಕರು ಹಿಂದಿ ಮಾದ್ಯಮದೊಂದಿಗೆ ಬಿ ಎ/ಬಿಎ ಗೆ ಸರಿ ಸಮಾನವಾದ ಹಿಂದಿ ಪರೀಕ್ಷೆಗಳನ್ನು ಉತ್ತೀರ್ಣ ರಾಗಿ ಹಿಂದಿ ವಿಷಯದ ಪದವಿಧರ ಶಿಕ್ಷಕರಾಗಿದ್ದಾರೆ ಇವರಿಗೆ ಪಿ.ಎಸ್.ಟಿ.ಎಂದು 1-5 ನೇ ವರ್ಗಕ್ಕೆ ವಿಲೀನ ಮಾಡಿರುವುದು ಈ ಶಿಕ್ಷಕರಿಗೆ ಬಹುದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ.ಹಿಂದಿ ಶಿಕ್ಷಕರ ಸಂಘದವರು ಈ ಕುರಿತು ಯಾವುದೇ ಹೇಳಿಕೆ ನೀಡದಿರುವುದು ವಿಷಾದ ನೀಯ.ಹಿಂದಿ ಶಿಕ್ಷಕರ ಸಂಘದವರು ವರ್ಗಾವಣೆಯ ಅನುಕೂಲಕ್ಕಾಗಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹೋಗಲು ಸಿದ್ಧ ಎಂದು ಇಲಾಖೆಯ ಗಮನಕ್ಕೂ ತಂದಿ ದ್ದುಂಟು ಮಾನ್ಯರೇ ಹಿಂದಿ ಪದವೀಧರ ಶಿಕ್ಷಕರ ಪರವಾಗಿ ಕಳಕಳಿಯ ಮನವಿ ನಮ್ಮನ್ನು 6-8 ನೇ ವರ್ಗದಕ್ಕೆ ನೇರ ವಾಗಿ ವಿಲೀನಗೊಳಿಸುವ ಆದೇಶ ಮಾಡಿಸಿ ನಮಗೆ ಅನುಕೂಲ ಕಲ್ಪಿಸಬೇಕಾಗಿ ವಿನಂತಿ.ಹಿಂದಿ ವಿಷಯಕ್ಕೆ ನೇಮಕಾತಿ ಯಾದವರು ನಲಿಕಲಿ ವರ್ಗಕ್ಕೆ ವಿಲೀನ ಮಾಡಲು ಬರುವುದಿಲ್ಲ ಬರದಂತೆ ಮಾಡಲು ತಾವುಗಳು ವಿಶೇಷ ಕಾಳಜಿ ವಹಿಸಲು ಮನವಿಯನ್ನು ರಾಜ್ಯದ ಹಿಂದಿ ಶಿಕ್ಷಕರು ಸಂಘಟನೆಯ ನಾಯಕರ ಬಳಿ ಮನವಿ ಮಾಡಿ ಕೊಂಡಿದ್ದಾರೆ.ಹಿಂದಿ ಪದವೀಧರ ಶಿಕ್ಷಕರ ಸಮೂಹ ವಿಜಯಪುರ ಜಿಲ್ಲೆ ವಿಜಯಪುರ