This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಾಲಾ ಪ್ರವಾಸಕ್ಕೆ ಕಡಲ ತೀರಕ್ಕೆ ಹೋದಾಗ ಅನುಸರಿಸಲೇ ಬೇಕಾದ ಅಂಶಗಳು – ಶಾಲಾ ಪ್ರವಾಸ ಹೋಗುವಾಗ ಶಿಕ್ಷಕರು ಮತ್ತು ಮಕ್ಕಳು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಕುರಿತು ಶಿಕ್ಷ ಎಲ್ ಐ ಲಕ್ಕಮ್ಮವರ ರಿಂದ ಒಂದಿಷ್ಟು ಮಾಹಿತಿ…..

ಶಾಲಾ ಪ್ರವಾಸಕ್ಕೆ ಕಡಲ ತೀರಕ್ಕೆ ಹೋದಾಗ ಅನುಸರಿಸಲೇ ಬೇಕಾದ ಅಂಶಗಳು – ಶಾಲಾ ಪ್ರವಾಸ ಹೋಗುವಾಗ ಶಿಕ್ಷಕರು ಮತ್ತು ಮಕ್ಕಳು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಕುರಿತು ಶಿಕ್ಷ ಎಲ್ ಐ ಲಕ್ಕಮ್ಮವರ ರಿಂದ ಒಂದಿಷ್ಟು ಮಾಹಿತಿ…..
WhatsApp Group Join Now
Telegram Group Join Now

ಧಾರವಾಡ

ಪ್ರವಾಸಕ್ಕೆ ಹೋದ ಸಮಯದಲ್ಲಿ ಎಷ್ಟೇ ಕಾಳಜಿ ಜಾಗೃತಿ ಇದ್ದರೂ ಕೂಡಾ ಕಡಿಮೆ ಎಷ್ಟೋ ಹುಷಾರಾಗಿದ್ದರು ಕೂಡಾ ಒಂದಲ್ಲ ಒಂದು ಎಡವಟ್ಟು ಗಳು ನಡೆಯುತ್ತವೆ ಎಂಬೊದಕ್ಕೆ ಮುರುಡೇಶ್ವರ ದಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಘಟನೆ ಸಾಕ್ಷಿಯಾಗಿದೆ ಹೌದು

ಶಾಲಾ ಪ್ರವಾಸದ ವೇಳೆ ಕಡಲ ತೀರಕ್ಕೆ ಹೋದಾಗ ಅನುಸರಿಸಲೇ ಬೇಕಾದ ಅಂಶಗಳು ಕುರಿತು ಶಿಕ್ಷಕ ಎಲ್ ಐ ಲಕ್ಕಮ್ಮನವರ ಲೇಖನದ ಮೂಲಕ ಮಾಹಿತಿಯನ್ನು ನೀಡಿದ್ದಾರೆ ಶಾಲಾ ಪ್ರವಾಸ ಹೋಗುವಾಗ ಶಿಕ್ಷಕರು ಮತ್ತು ಮಕ್ಕಳು ಗಮನ ದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಹಲವು. ಮಕ್ಕಳಿಗೆ ಅವೆಲ್ಲವನ್ನೂ ಮನದಟ್ಟು ಮಾಡಿಕೊಡುವ ಮಹತ್ವದ ಹೊಣೆಗಾರಿಕೆ ಶಿಕ್ಷಕ ಮೇಲಿದೆ. ಮಕ್ಕಳೂ ಅಷ್ಟೆ ಶಿಕ್ಷಕರು ರೂಪಿಸಿದ ಪ್ರವಾಸ ನಿಯಮಗಳ ಚೌಕಟ್ಟಿನೊಳಗೇ ಇರಬೇಕು ಈ ಅಚ್ಚುಕಟ್ಟುತನ ಅಥವಾ ಅನುಸರ ಣೆಗಳು ಶಾಲಾ ಪ್ರವಾಸವನ್ನು ಸುಗಮಗೊಳಿ ಸುವುದಲ್ಲದೇ,

ಒಳ್ಳೆಯ ನೆನಪುಗಳನ್ನು ಉಳಿಸಿಕೊಡುತ್ತವೆ. ಮುರುಡೇಶ್ವರ ಬೀಚ್‌ ದುರಂತದ ಬಳಿಕ, ಬೀಚ್‌ಗೆ ಪ್ರವಾಸ ಹೋಗುವ ಶಾಲಾ ಶಿಕ್ಷಕರು ಮತ್ತು ಮಕ್ಕಳ ತಂಡಗಳಿಗೆ ನೆನಪಿಸಲೇ ಬೇಕಾದ ಕೆಲವು ಅಂಶಗಳಿವೆ.

ಶಿಕ್ಷಕರು ಗಮನಿಸಬೇಕಾದ 5 ಅಂಶಗಳು

ಗುರುತು ಪರಿಚಯ ಇಲ್ಲದ ಊರಿಗೆ ಹೋಗುತ್ತಿ ರುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಕಸ್ಮಾತ್ ಕರಾವಳಿ ಭಾಗದಲ್ಲಿ ವಿಶೇಷವಾಗಿ ನೀವು ಮಕ್ಕಳನ್ನು ಕರೆದೊಯ್ಯಬೇಕು ಎಂದು ಗುರುತಿಸಿಕೊಂಡಿರುವ ಬೀಚ್ ಸಮೀಪ ಗೆಳೆಯ ರಿದ್ದರೆ ಅಥವಾ ಅವರ ಪರಿಚಿತರಿದ್ದರೆ ಅವರನ್ನು ಮೊದಲೇ ಸಂಪರ್ಕಿಸಿಕೊಳ್ಳಿ.

ಬೀಚ್‌ನ ಯಾವ ಪ್ರದೇಶದಲ್ಲಿ ಅಲೆಗಳ ಸೆಳೆತ ಕಡಿಮೆ,ಅಪಾಯ ಇಲ್ಲ ಎಂಬುದನ್ನು ಮೊದಲೇ ತಿಳಿದುಕೊಂಡು ಖಚಿತಪಡಿಸಿಕೊಳ್ಳಿ. ಸಾಧ್ಯವಾ ದರೆ ಪ್ರವಾಸಕ್ಕೆ ಒಂದು ವಾರ ಮೊದಲೇ ಮಕ್ಕಳನ್ನು ಕರೆದೊಯ್ಯಬಯಸುವ ಪ್ರದೇಶಕ್ಕೆ ಒಮ್ಮೆ ಭೇಟಿ ಕೊಡಿ. ಸರಿಯಾದ ಪ್ರವಾಸ ಯೋಜನೆ ರೂಪಿಸಿಕೊಳ್ಳಿ

ಸ್ಥಳೀಯ ಪರಿಚಿತರ ನೆರವು ಪಡೆದುಕೊಂಡು ಬೀಚ್‌ ಪ್ರವಾಸ ಸುಗಮಗೊಳಿಸಿ. ಬೀಚ್‌ಗೆ ಮಕ್ಕಳನ್ನು ಕರೆದೊಯ್ಯುವ ಮೊದಲು ವಿದ್ಯಾರ್ಥಿ ಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕು. ಮುನ್ನೆಚ್ಚರಿಕೆಗಳನ್ನು ಕೊಡಬೇಕು.

ಮಕ್ಕಳ ಸಂಖ್ಯೆ ಮತ್ತು ಶಿಕ್ಷಕರ ಸಂಖ್ಯೆ ಗಮನಿಸಿ ಕೊಂಡು, ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸ ಬೇಕು. ಒಂದೊಂದು ಗುಂಪನ್ನು ಒಬ್ಬೊಬ್ಬ ಶಿಕ್ಷಕರು ಗಮನಿಸುವುದು ಸಾಧ್ಯವಾದರೆ ತುಂಬಾ ಒಳಿತು. ಸ್ಥಳೀಯ ಗೆಳೆಯರು, ಪರಿಚಿತರು ಇದ್ದರೆ ಅವರ ನೆರವು, ಬೆಂಗಲ ಸದಾ ಇರುತ್ತದೆ. ಹೀಗಾಗಿ ಈ ಬಗ್ಗೆ ಗಮನಹರಿಸಬೇಕು.

ಸಮುದ್ರಕ್ಕೆ ಇಳಿಯಬಾರದ ಜಾಗಕ್ಕೆ ಮಕ್ಕಳನ್ನು ಕರೆದೊಯ್ಯುವ ರಿಸ್ಕ್ ತೆಗೆದುಕೊಳ್ಳಲೇ ಬೇಡಿ. ಬೀಚ್‌ನಲ್ಲಿ ಬೋಟಿಂಗ್‌, ಪ್ಯಾರಾ ಸೈಲಿಂಗ್‌ ಮುಂತಾದ ಸಾಹಸ ಕ್ರೀಡೆಗಳಿದ್ದರೆ ಮಕ್ಕಳನ್ನು ಅದಕ್ಕೆ ಬಿಡುವ ಮೊದಲು ಸಾಕಷ್ಟು ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಕಡೆಗೆ ಗಮನಕೊಡಿ.

ಗೊತ್ತಾಗದೇ ಇದ್ದರೆ ಪರಿಣತರ ನೆರವು ಪಡೆದು ಕೊಳ್ಳಿ. ಬೀಚ್‌ಗೆ ಬಿಡುವಾಗ ಮತ್ತು ವಾಪಸ್ ಹೋಗಬೇಕಾದರೆ ಮಕ್ಕಳ ಸಂಖ್ಯೆ ಗಮನಿಸಿಕೊಳ್ಳಿ.

ಮಕ್ಕಳು ಗಮನಿಸಬೇಕಾದ ಅಂಶಗಳು ಪಾಲಕರು ಮಕ್ಕಳಿಗೆ ತಿಳಿಸಬೇಕಾದ ಅಂಶಗಳು

ಶಾಲಾ ಪ್ರವಾಸ ಹೋಗುವ ಮಕ್ಕಳು ಜತೆಗಿರುವ ಶಿಕ್ಷಕರ ಮಾತನ್ನು ಆಲಿಸಬೇಕು. ಅವರ ಕಣ್ತಪ್ಪಿಸಿ ಯಾವುದೇ ಸಾಹಸಕ್ಕೆ ಮುಂದಾಗಬಾರದು. ವಿಶೇಷವಾಗಿ ಸಮುದ್ರ, ಬೀಚ್‌ ಬದಿಗೆ ಹೋದಾಗ ನೀರಿಗಿಳಿಯುವ ದುಸ್ಸಾಹಸ ಮಾಡಬಾರದು.

ಸಮುದ್ರ, ಬೀಚ್‌ನ ಅಲೆಗಳನ್ನು ನೋಡುವಾಗ ಮನಸ್ಸು ಹುಚ್ಚೇಳುವುದು, ಆ ನೀರಲ್ಲಿ ಆಡಬೇಕು ಎಂದು ಬಯಸುವುದು ಸಹಜ. ಆದರೆ ಆ ಅಲೆಗಳ ಸೆಳೆತದ ಶಕ್ತಿ ಏನು ಎಂಬುದರ ಅರಿವು ಮಕ್ಕಳಿಗೆ ಇರುವುದಿಲ್ಲ. ಜತೆಗೆ ಹೋದ ಶಿಕ್ಷಕ ರಿಗೂ ಇರುವುದಿಲ್ಲ.

ಪರಿಚಿತವಲ್ಲದ ಸ್ಥಳದಲ್ಲಿ ಶಿಸ್ತು ಪಾಲನೆ ಮುಖ್ಯ ಎಂಬುದು ಮಕ್ಕಳಿಗೂ ತಿಳಿದಿರಬೇಕು. ಇದನ್ನು ಪಾಲಕರು ಮನವರಿಕೆ ಮಾಡಿಕೊಡಬೇಕು. ಶಿಸ್ತು ಪಾಲನೆ ಮಾಡುವಂತೆ ನೀರಿಗೆ ಇಳಿಯದಂತೆ ಅಥವಾ ಸಮುದ್ರ ನೀರಿಗೆ ಇಳಿಯಲು ಅನುಮತಿ ಇದ್ದರೂ ತುಂಬ ಆಳಕ್ಕೆ ಹೋಗದಂತೆ ಎಚ್ಚರ ವಹಿಸಬೇಕಾದ್ದು ಅಗತ್ಯ.

ಪಾಲಕರು ಈ ವಿಚಾರದಲ್ಲಿ ಮಕ್ಕಳಿಗೆ ಮೊದಲೇ ತಿಳಿವಳಿಕೆ ನೀಡಿರಬೇಕು. ಶಿಕ್ಷಕರ ಮಾತು ಆಲಿಸು ವಂತೆ ತಾಕೀತು ಮಾಡಿಯೇ ಪ್ರವಾಸಕ್ಕೆ ಕಳುಹಿ ಸಬೇಕು.ನದಿ, ತೊರೆಗಳಲ್ಲಿ ಈಜಿ ಅಭ್ಯಾಸವಿದೆ. ಹಾಗಾಗಿ ಸಮುದ್ರದ ಅಲೆಗಳ ನಡುವೆ ಈಜಾ ಡಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ ತೋರಿ ಸಲು ದುಸ್ಸಾಹಸ ಮಾಡಬೇಡಿ. ಸಮುದ್ರದಲ್ಲಿ ಈಜಾಡುವುದು ನದಿ, ತೊರೆ, ಪುಷ್ಕರಣಿಗಳಲ್ಲಿ ಈಜಾಡಿದಂತೆ ಅಲ್ಲ ಎಂಬುದನ್ನು ನೆನಪಿನಲ್ಲಿಡಿ.

ಪ್ರವಾಸದ ವೇಳೆ ಮಕ್ಕಳ ಗುಂಪು ಇದ್ದಾಗ ಗುಂಪು ಬಿಟ್ಟು ನೀರಿಗೆ ಇಳಿಯಬೇಡಿ. ಶಿಕ್ಷಕರನ್ನು ಎಚ್ಚರಿ ಸಲು ಜತೆಗೆ ಇತರೆ ಮಕ್ಕಳು ಇರುತ್ತಾರೆ. ಒಂಟಿ ಯಾಗಿ ಇಳಿದರೆ ನಿಮ್ಮ ಇರುವಿಕೆ ಉಳಿದವರಿಗೆ ಮರೆತುಹೋಗಬಹುದು ಎಂಬುದನ್ನು ಮರೆಯ ಬೇಡಿ. ಈ ವಿಚಾರದಲ್ಲಿ ಮಕ್ಕಳನ್ನು ಜಾಗೃತರನ್ನಾ ಗಿಸುವ ಕೆಲಸ ಪಾಲಕರು ಮೊದಲೇ ಮಾಡಬೇಕು

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk