ಯಾದಗಿರಿ –
ಹೋಳಿ ಹಬ್ಬದ ಆಚರಣೆಯ ನಂತರ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ನೀರು ಪಾಲಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.ಹೌದು ಯಾದಗಿರಿ ಜಿಲ್ಲೆಯ ಬಾಚವಾರ ಗ್ರಾಮದ ಹೊರವಲಯದ ಕೆರೆಯಲ್ಲಿ ಯುವ ಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾರ್ತಾಂಡಪ್ಪ(19) ಸಾಹೇಬಣ್ಣ(18) ಮೃತಪಟ್ಟವರಾಗಿ ದ್ದಾರೆ. ಸ್ನೇಹಿತರೊಂದಿಗೆ ಸೇರಿ ಹೋಳಿ ಆಡಿದ ನಂತರ ಇವರು ಸ್ನಾನ ಮಾಡಲು ಗ್ರಾಮದ ಹೊರವಲಯದಲ್ಲಿದ್ದ ಕೆರೆಗೆ ಹೋಗಿದ್ದಾರೆ.ಕೆರೆಯಲ್ಲಿ ಸ್ನಾನ ಮಾಡುವ ವೇಳೆ ಈಜು ಬಾರದ ಇವರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿ ದ್ದಾರೆ. ಹುಡುಕಾಟದ ನಂತರ ಸಾಹೇಬಣ್ಣ ಮೃತದೇಹ ಪತ್ತೆಯಾಗಿದೆ. ಮಾರ್ತಾಂಡಪ್ಪ ಮೃತದೇಹಕ್ಕಾಗಿ ಹುಡು ಕಾಟ ನಡೆದಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.