ಗದಗ –
ಕರ್ತವ್ಯ ನಿರತ ಡಿಎಆರ್ ಪೊಲೀಸ್ ಪೇದೆ ಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡ ದಲ್ಲಿ ನಡೆದಿದೆ ಡಿಎಆರ್ ಪೊಲೀಸ್ ವಾಹನ ಚಾಲಕ ಬಸವರಾಜ ವಿಠಲಾಪೂರ(41) ಮೃತರಾದವರಾಗಿದ್ದು ಧಾರವಾಡದ ಜುಬಿಲಿ ಸರ್ಕಲ್ ಬಳಿ ವಾಹನ ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯ ಸ್ತಂಭನವಾಗಿದ್ದು
ತತ್ ಕ್ಷಣ ಜರ್ಮನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಡಿಎಆರ್ ಪೊಲೀಸ್ ವಾಹನ ಚಾಲಕ ರಾಗಿದ್ದು ಕರ್ತವ್ಯದ ಮೇಲೆ ಇದ್ದಾಗ ಈ ಒಂದು ಘಟನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..