ಹುಬ್ಬಳ್ಳಿ –
ಮದುವೆಯ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡ ಪೊಲೀಸ್ ಪೇದೆ – ಮನೋವಿಕಾಸ ಬುದ್ದಿ ಮಾಂಧ್ಯ ಮಕ್ಕಳೊಂದಿಗೆ ವಿಶೇಷವಾಗಿ ಸಹಭೋಜನೆ ಮಾಡುತ್ತಾ ಆಚರಣೆ ಮಾಡಿ ಕೊಂಡ ವಿದ್ಯಾನಗರ ಪೊಲೀಸ್ ಪೇದೆ ಶಿವಾನಂದ ಬೈರಿಕೊಪ್ಪ ಹೌದು
ಸಾಮಾನ್ಯವಾಗಿ ಹುಟ್ಟು ಹಬ್ಬವನ್ನು ಮದುವೆಯ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸಿ ಪ್ಯಾಮಿಲಿ ಯೊಂದಿಗೆ ಊಟ ಮಾಡುತ್ತಾ ಆಚರಣೆ ಮಾಡಿಕೊಳ್ಳೊದು ಸಂಪ್ರದಾಯ.ಹೀಗಿರುವಾಗ ಹುಬ್ಬಳ್ಳಿಯಲ್ಲೊಬ್ಬ ಪೊಲೀಸ್ ಪೇದೆ ಯೊಬ್ಬರು ತಮ್ಮ ಮದುವೆಯ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡು ಸಧ್ಯ ಸುದ್ದಿಯೊಂದಿಗೆ ಮಾದರಿಯಾಗಿದ್ದಾರೆ.
ಹೌದು ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ ಆಗಿರುವ ಶಿವಾನಂದ ಬೈರಿಕೊಪ್ಪ ಅವರು ತಮ್ಮ 28ನೇ ವರ್ಷದ ಮದುವೆಯ ವಾರ್ಷಿಕೋತ್ಸವವನ್ನು ಮನೋ ವಿಕಾಸ ಬುದ್ದಿಮಾಂಧ್ಯ ಮಕ್ಕಳೊಂದಿಗೆ ವಿಶೇಷ ವಾಗಿ ಆಚರಣೆ ಮಾಡಿಕೊಂಡಿದ್ದಾರೆ.ನಗರದ ಗೋಪನಕೊಪ್ಪದಲ್ಲಿರುವ ಈ ಒಂದು ಶಾಲೆ ಯಲ್ಲಿರುವ ಮಕ್ಕಳೊಂದಿಗೆ ತಮ್ಮ 28ನೇ ವರ್ಷದ ಮದುವೆಯ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಣೆಯೊಂದಿಗೆ ಸಧ್ಯ ಮಾದರಿಯಾಗಿದ್ದಾರೆ.
ಶಾಲೆಯಲ್ಲಿರುವ ಮಕ್ಕಳಿಗೆ ವಿಶೇಷವಾದ ಭೋಜನದ ವ್ಯವಸ್ಥೆಯೊಂದಿಗೆ ಮಕ್ಕಳಿಗೆ ತಮ್ಮ ಕುಟುಂಬದೊಂದಿಗೆ ದಂಪತಿಗಳು ಊಟವನ್ನು ತಾವೇ ಸ್ವತಃ ನೀಡಿ ಮದುವೆಯ ವಾರ್ಷಿಕೋತ್ಸ. ವವನ್ನು ಆಚರಣೆ ಮಾಡಿಕೊಂಡಿದ್ದಾರೆ. ಶಿವಾನಂದ ಭೈರಿಕೊಪ್ಪ ಅವರು ಪೋಲಿಸ್ ಇಲಾಖೆಯಲ್ಲಿ ಕರ್ತವ್ಯವನ್ನು ಮಾಡುತ್ತಿದ್ದು ಇವರ ಪತ್ನಿ ಭಾರತಿ ಭೈರಿಕೊಪ್ಪ ಮದುವೆಯ ವಾರ್ಷಿಕೋತ್ಸವವನ್ನು ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಆಚರಿಸಿದ್ದು ವಿಶೇಷವಾಗಿ ಕಂಡು ಬಂದಿತು.
ಈ ಒಂದು ಸಮಯದಲ್ಲಿ ಡಾಕ್ಟರ ಆಕಾಶ ಭೈರಿಕೊಪ್ಪ ,ಕುಮಾರ್ ಕಳಸದ ಹಾಗೂ ಜ್ಯೋತಿ ಕಳಸದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..