ಬೆಂಗಳೂರು –
ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ಅಥವಾ ಸ್ಕೂಟರ್ ಗಳನ್ನು ತರುವಂತಿಲ್ಲ ಎಂದು ಸಂಚಾರ ವಿಭಾದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ಧಾರೆ.
ಹಾಗಾಗಿ ಅವರು ಬೈಕ್ ಅಥವಾ ಸ್ಕೂಟರ್ ಗಳಲ್ಲಿ ಕಾಲೇಜಿಗೆ ಬರುವಂತಿಲ್ಲ.ಇನ್ನು ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಅಭಿಯಾನ ನಡೆಸುತ್ತಿದ್ದು ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು ಆಧರಿಸಿ 12 ಪ್ರಕರಣ ದಾಖಲಿಸಿದ್ದೇವೆ.ವ್ಹೀಲಿಂಗ್ ಪ್ರಕರಣ ದಲ್ಲಿ 5 ರಿಂದ 10 ಲಕ್ಷ ರೂ.ವರೆಗೆ ಬಾಂಡ್ ಬರೆಸಿಕೊಳ್ಳು ತ್ತೇವೆ ಮತ್ತು ವ್ಹೀಲಿಂಗ್ ಮಾಡುವವರ ಪೋಷಕರಿಗೆ ಕೌನ್ಸೆಲಿಂಗ್ ಮಾಡುತ್ತಿದ್ದೇವೆ ಎಂದು ರವಿಕಾಂತೇಗೌಡ ತಿಳಿಸಿದ್ಧಾರೆ.























