ಬಾಗಲಕೋಟೆ –
127 ಶಿಕ್ಷಕರಿಗೆ ನೋಟೀಸ್ ನೀಡಿದ ಪೊಲೀಸರು 127 ಮುಖ್ಯ ಶಿಕ್ಷಕರಿಗೆ ವಿವರಣೆ ಕೋರಿ ಪೊಲೀಸ್ ಇಲಾಖೆ ನೋಟಿಸ್ ಜಾರಿ ಸಂಚಲನ್ನುಂಟು ಮಾಡಿದ ಪೊಲೀಸರ ನೋಟೀಸ್ ವಿಚಾರ ಹೌದು ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ನೀಡಿದ್ದ ಹಾಲಿನ ಪುಡಿ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ಮೂರು ತಾಲ್ಲೂಕುಗಳ 127 ಮುಖ್ಯ ಶಿಕ್ಷಕರಿಗೆ ವಿವರಣೆ ಕೋರಿ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ.
ತಾಲ್ಲೂಕಿನ ಸೂಳಿಕೇರಿಯ ಗೋದಾಮಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದ 44.7 ಕ್ವಿಂಟಲ್ ಹಾಲಿನ ಪುಡಿ ಪ್ರಕರಣದ ಆರೋಪಿಯು ತಾನು ಯಾವ, ಯಾವ ಶಾಲೆಗಳಿಂದ ಹಾಲಿನ ಪುಡಿ ಖರೀದಿಸುತ್ತಿದ್ದೆ ಎಂದು ನೀಡಿದ ಹೇಳಿಕೆಯನ್ನು ಆಧರಿಸಿ ಶಾಲೆಗಳಿಗೆ ನೋಟಿಸ್ ನೀಡಲಾಗಿದ್ದು ಸಧ್ಯ ತನಿಖೆ ಯನ್ನು ತೀವ್ರಗೊಳಿಸಲಾಗಿದೆ.
ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಅಕ್ಟೋಬರ್ 4 ರಂದು ರಾತ್ರಿ ದಾಳಿ ನಡೆಸಿದಾಗ ₹18 ಲಕ್ಷ ಮೌಲ್ಯದ ಹಾಲಿನ ಪುಡಿ, 3.25 ಕ್ವಿಂಟಲ್ ರಾಗಿ ಹಿಟ್ಟು, 50 ಲೀಟರ್ ಅಡುಗೆ ಎಣ್ಣೆಯೊಂದಿಗೆ ಆರೋಪಿ ಸಿದ್ದಪ್ಪ ಉಕ್ಕಲಿಯನ್ನು ಬಂಧಿಸಿದ್ದರು.ಜಿಲ್ಲೆಯ ಕೆಲ ತಾಲ್ಲೂಕುಗಳಿಗೆ ಹಾಲಿನ ಪುಡಿ ಸರಬರಾಜು ಮಾಡುವ ಗುತ್ತಿಗೆದಾರನಿಂದ ಸಿದ್ದಪ್ಪ ಉಪ ಗುತ್ತಿಗೆ ಪಡೆದಿದ್ದರು. ಹಾಲಿನ ಪುಡಿ ವಿತರಣೆಗೆ ಹೋದಾಗಲೇ ಕೆ.ಜಿಗಟ್ಟಲೆ ಹಾಲಿನ ಪುಡಿಯನ್ನು ಅಲ್ಲಿಯೇ ಖರೀದಿಸಿ ವಾಪಸ್ ತರುತ್ತಿದ್ದರು.
ವಿಚಾರಣೆ ವೇಳೆ ಆರೋಪಿ ಯಾವ ಯಾವ ಶಾಲೆ ಗಳಿಂದ ಹಾಲಿನ ಪುಡಿ ಖರೀದಿ ಮಾಡುತ್ತಿದ್ದೆ ಎಂಬು ದನ್ನು ತಿಳಿಸಿದ್ದು ಆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕ್ಷೀರಭಾಗ್ಯ ಯೋಜನೆಯ ಸಂಪೂರ್ಣ ವಿವರಗಳೊಂ ದಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ
ಶಾಲೆಗಳಿಂದ ಹಾಲಿನ ಪುಡಿಯನ್ನು ಪ್ರತಿ ಕೆ.ಜಿಗೆ ₹100 ರಂತೆ ಖರೀದಿ ಮಾಡುತ್ತಿದ್ದೆ ಎಂದು ಆರೋಪಿ ತಿಳಿಸಿ ದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹350ರಿಂದ ₹400ವರೆಗೆ ಇದ್ದು, ಅವರು ಅದನ್ನು ಮಹಾರಾಷ್ಟ್ರದಲ್ಲಿ ₹200 ರಿಂದ 250ರವರೆಗೆ ಮಾರಾಟ ಮಾಡುತ್ತಿದ್ದರು. ಶಾಲೆಗೆ ಬರುವ ಮಕ್ಕಳಲ್ಲಿ ಹಲವರು ಹಾಲು ಕುಡಿಯು ವುದಿಲ್ಲ ಆದರೆ, ಹಾಲು ಕುಡಿಯುವ ಮಕ್ಕಳ ಸಂಖ್ಯೆ ಯನ್ನು ನಮೂದಿಸುವಾಗ ಹಾಜರಾದ ಎಲ್ಲಾ ಮಕ್ಕಳ ಸಂಖ್ಯೆಯನ್ನು ತೋರಿಸಲಾಗುತ್ತದೆ.
ಜೊತೆಗೆ, ಪ್ರತಿ ಮಗುವಿಗೆ ನೀಡುವ ಹಾಲು ತಯಾರಿಕೆಗೆ ಬಳಸಬೇಕಿರುವ ಹಾಲಿನ ಪುಡಿ ಪ್ರಮಾಣವನ್ನೂ ಕಡಿಮೆಗೊಳಿಸಿ, ನೀರು ಹಾಲು ನೀಡಲಾಗುತ್ತದೆ. ಇದರಿಂದ ನಿತ್ಯವೂ ಪುಡಿ ಹೆಚ್ಚುವರಿಯಾಗಿ ಉಳಿಯು ತ್ತದೆ ಎನ್ನಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..