ಸರ್ಕಾರಿ ಕೆಲಸ ಕೊಡಿಸೊದಾಗಿ ಮಹಾವಂಚನೆ ಜಾಲ ನಕಲಿ ಸರ್ಕಾರಿ ಅಧಿಕಾರಿ ಯನ್ನು ಜೈಲಿಗೆ ಅಟ್ಟಿದ ಪೊಲೀಸರು ಇಂಥವರಿಂದ ಹುಷಾರಾಗಿರಿ…..

Suddi Sante Desk
ಸರ್ಕಾರಿ ಕೆಲಸ ಕೊಡಿಸೊದಾಗಿ ಮಹಾವಂಚನೆ ಜಾಲ ನಕಲಿ ಸರ್ಕಾರಿ ಅಧಿಕಾರಿ ಯನ್ನು ಜೈಲಿಗೆ ಅಟ್ಟಿದ ಪೊಲೀಸರು ಇಂಥವರಿಂದ ಹುಷಾರಾಗಿರಿ…..

ಕಾರವಾರ

 

ಸರ್ಕಾರಿ ಕೆಲಸ ಸೇರಿದಂತೆ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಬಂಧಿಸಿ ಜೈಲು ಕಂಬಿಗಳ ಹಿಂದೆ ಕಳುಹಿಸಿದ ಘಟನೆ ಕಾರವಾರ ದಲ್ಲಿ ಬೆಳಕಿಗೆ ಬಂದಿದ್ದು ಉತ್ತರ ಕನ್ನಡ ಪೊಲೀಸರು ಈ ಒಂದು ಮಹಾವಂಚಕ ನನ್ನು ಬಂಧಿಸಿ ಈಗ ಜೈಲಿಗೆ ಅಟ್ಟಿದ್ದಾರೆ.ಹೌದು ಸೇನೆಯ ಉನ್ನತ ಅಧಿಕಾರಿ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ

ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿ ಫಾರ್ಮ್ ಧರಿಸಿಕೊಂಡು ಓಡಾಡುತ್ತಿದ್ದ ಕಾರವಾರ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಬಂಧಿತ ಆರೋಪಿಯಾಗಿದ್ದಾನೆ.ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅನೇಕರಿಂದ ಹಣ ಪಡೆದು ವಂಚನೆ ಮಾಡಿದ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ.

ಸೇನಾ ಉನ್ನತಾಧಿಕಾರಿ ಸಮವಸ್ತ್ರ ಧರಿಸಿಕೊಂ ಡು ಪ್ರತೀ ದಿನ ಬೈಕ್‌ನಲ್ಲೇ ಕಾರವಾರ,ಸೌತ್ ಗೋವಾ ಓಡಾಡುತ್ತಿದ್ದ ವಿನಾಯಕ,ಓರ್ವನಿಂದ 66,000ರೂ.ಇನ್ನೊಬ್ಬರಿಂದ 35,000 ರೂ.ನಂತೆ ಹಲವರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ತಮ್ಮ ಪುತ್ರನಿಗೆ ನೇವಿಯಲ್ಲಿ ಪಿಯೋನ್ ಕೆಲಸ ಕೊಡಿಸುವುದಾಗಿ ಹೇಳಿ ಕಡವಾಡ ಮಾರುತಿ ನಗರದ ಹೇಮಲತಾ ಎಂಬವರಿಂದಲೂ ಹಣ ಪಡೆದು ಮೋಸ ಮಾಡಿದ್ದಾನೆ.ಈ ಬಗ್ಗೆ ಹೇಮ ಲತಾ ಅವರು ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಕಳೆದ ಒಂದೆರಡು ವಾರಗ ಳಿಂದ ಈತನ ಮೇಲೆ ನಿಗಾಯಿರಿಸಿದ್ದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಗ್ರೌಂಡ್ ವರ್ಕ್ ಮಾಡಿದಾಗ ಈತನ ಅಸಲಿ ಯತ್ತು ಬಯಲಾಗಿದೆ.ಅದರಂತೆ ನೇವಿ ಇಂಟೆಲಿ ಜೆನ್ಸ್ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯ ಮನೆಯನ್ನು ಹುಡುಕಾಡಿದಾಗ ಪತ್ತೆಯಾದ 66,000ರೂ. ನಗದು ವಶಕ್ಕೆ ಪಡೆದಿದ್ದಾರೆ.ಸದ್ಯ ಬಂಧನ ಕ್ಕೊಳಗಾದ ವಿನಾಯಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಹಿಂದೆ ಆರೋಪಿ ಬೆಳಗಾವಿ ಕಮಾಂಡೋ ಟ್ರೈನಿಂಗ್ ಸ್ಕೂಲ್‌ನಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿ ಕೊಂಡಿದ್ದ.ಮರಾಠಾ ಲೈಟ್ ಇನ್‌ಫೆಂಟ್ರಿ ವಿಭಾಗ ದಡಿ ಹೆಲ್ಪಿಂಗ್ ಬಾಯ್ ಆಗಿ ಸ್ವೀಪಿಂಗ್ ಮುಂತಾದ ಕೆಲಸ ಮಾಡುತ್ತಿದ್ದ.ಅದರಂತೆ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿ ಫಾರ್ಮ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದನು. ಬಳಿಕ ಆ ಕೆಲಸವನ್ನು ಬಿಟ್ಟು 2015-16ರ ವೇಳೆ ಆರ್ಮಿ ಆಫಿಸರ್ ಯೂನಿಫಾರ್ಮ್ ಖರೀದಿಸಿ 2020ರಿಂದ ಅಧಿಕಾರಿಯ ಹೆಸರು ಹೇಳಿ ಓಡಾಡಿ ಕೊಂಡಿದ್ದ.ಕಾರವಾರ ಹಾಗೂ ಗೋವಾ ಭಾಗದಲ್ಲಿ ಹಲವರಿಗೆ ಈತ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.