ವಿಜಯನಗರ –
ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿ ಯೊಬ್ಬನು ಕಣ್ಣು ಕಳೆದುಕೊಂಡ ಪ್ರಕರಣ ಕುರಿತು ಮೂವರು ಶಿಕ್ಷಕರ ಮೇಲೆ ದೂರು ದಾಖಲಾಗಿದೆ.ವಿಜಯನಗರ ಜಿಲ್ಲೆಯ ಕಾನಹೊ ಸಹಳ್ಳಿ ಸಮೀಪದ ಚೌಡಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಬಾಲಕನ ಕಣ್ಣಿಗೆ ಬೆತ್ತ ತಗುಲಿ ಒಂದು ಕಣ್ಣಿನ ದೃಷ್ಟಿ ಹೋಗಿದೆ.ಈ ಸಂಬಂಧ ಮೂವರು ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾ ಗಿದೆ.ಎಂ.ಬಿ.ಪ್ರಜ್ವಲ್ ಕಣ್ಣು ಕಳೆದುಕೊಂಡ ಬಾಲಕನಾ ಗಿದ್ದು ಡಿ.31 ರಂದು ಶಾಲೆಗೆ ಹೋದ ಈ ಬಾಲಕನ ಕಣ್ಣಲ್ಲಿ ರಕ್ತ ಸುರಿಯುತ್ತಿದೆ ಎಂಬ ವಿಷಯ ತಿಳಿದು ಶಾಲೆಗೆ ಹೋಗಿ ನೋಡಿದಾಗ ಅಲ್ಲಿದ್ದ ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಬಾಲಕನ ತಂದೆ ಮಡಿವಾಳರ ಬಿರೇಂದ್ರ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಸಧ್ಯಬಳ್ಳಾರಿಯ ವಿಮ್ಸ್ ಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಬಾಲಕನ ಎಡಗಣ್ಣು ಸಂಪೂರ್ಣ ಹೋಗಿದೆ ದೃಷ್ಟಿ ಬರುವು ದಿಲ್ಲ ಅಲ್ಲದೇ ಬಲಗಣ್ಣಿಗೂ ತೊಂದರೆಯಾಗಬಹುದು ಎಂದು ಹೇಳಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ನನ್ನ ಮಗ ಕಣ್ಣು ಕಳೆದುಕೊಳ್ಳಲು ಕಾರಣರಾದ ಮುಖ್ಯಶಿಕ್ಷಕ ಸುಭಾಷಪ್ಪ ಗೊರವರ,ಸಹ ಶಿಕ್ಷಕರಾದ ಶಶಿಕುಮಾರ್ ಮತ್ತು ಟಿ.ರವಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಯ ತಂದೆ ನೀಡಿದ ದೂರಿನನ್ವಯ ಕಾನಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.