ಚಿತ್ರದುರ್ಗ –
ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.ನಿನ್ನೆಯಷ್ಟೇ ಮಠದ ವತಿಯಿಂದ ಮಾಡಿ ಕೊಂಡಿದ್ದ ಮನವಿ ಹಿನ್ನೆಲೆಯಲ್ಲಿ ಎಸ್ಪಿ ಈ ಭದ್ರತೆ ಒದಗಿಸಿ ದ್ದಾರೆ.ಸ್ವಾಮೀಜಿ ಹಾಗೂ ಶಾಸಕರಿಗೆ ಕೊಲೆ ಬೆದರಿಕೆ ಬಂದಿ ರುವ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ರಕ್ಷಣೆ ನೀಡಬೇಕೆಂದು ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರಲ್ಲಿ ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಪತ್ರ ಮುಖೇನ ನಿನ್ನೆ ಮನವಿ ಮಾಡಿಕೊಂಡಿದ್ದರು. ಸಿದ್ದರಾಮೇ ಶ್ವರ ಸ್ವಾಮೀಜಿ ಮಾತ್ರವಲ್ಲದೆ, ಹೊಳಲ್ಕೆರೆ ಶಾಸಕಚಂದ್ರಪ್ಪ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೂ ಕೊಲೆ ಬೆದರಿಕೆಯೊಡ್ಡಲಾಗಿದೆ.
KSP ಆಯಪ್ ಮೂಲಕ ನಮ್ಮ ಕಚೇರಿಗೆ ಕೊಲೆ ಬೆದರಿಕೆ ಬಂದಿದೆ.ಶಾಸಕರು ಹಾಗೂ ಭೋವಿ ಸಮುದಾಯದ ಹಲವರ ಹೆಸರುಗಳು ಪ್ರಸ್ತಾಪ ಆಗಿದ್ದು ಅವರ ಹತ್ಯೆಗೆ ಸಂಚು ಹೂಡಿದ್ದಾಗಿ ತಿಳಿಸಲಾಗಿದೆ.
ನಾಲ್ಕು ಮಂದಿ ಹತ್ಯೆ ಸಂಚು ರೂಪಿಸಿದ್ದಾರೆ ಅವರ ಹೆಸರು ಕೂಡ ಉಲ್ಲೇಖವಾ ಗಿದೆ ಎಂಬ ದೂರಿನೊಂದಿಗೆ ಹೊಳ ಲ್ಕೆರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ – ಪಿ ಹೆಚ್ ಚಕ್ರವರ್ತಿ ಸುದ್ದಿ ಸಂತೆ ಹಿರಿಯ ವರದಿಗಾರರು

























