ಮೈಸೂರ –
ಇದೊಂದು ವಿಚಿತ್ರವಾದ ಪ್ರಕರಣ. ಬಿಜೆಪಿ ಮುಖಂಡನೊಬ್ಬ ಅದೇ ಪಕ್ಷದ ಮುಖಂಡರೊಬ್ಬರಿಗೆ ಬ್ಲಾಕ್ ಮೇಲೆ ಮಾಡಿ ಈಗ ಪೊಲೀಸರಿಗೆ ಬೇಕಾಗಿದ್ದಾನೆ. ಹೌದು ಇಂಥಹದೊಂದು ಪ್ರಕರಣ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅದು ಹನಿಟ್ರ್ಯಾಪ್ ವಿಚಾರದಲ್ಲಿ ಕೇಸರಿ ಪಕ್ಷದ ನಾಯಕನಿಗೆ ಅದೇ ಪಕ್ಷದ ಮುಖಂಡನೊಬ್ಬ ಬ್ಲಾಕ್ ಮೇಲ್ ಮಾಡಲು ಹೋಗಿ ಈಗ ನಾಪತ್ತೆಯಾಗಿದ್ದಾನೆ. ಬಿಜೆಪಿ ಮುಖಂಡರಿಂದ ಬಿಜೆಪಿ ಮುಖಂಡನಿಗೇ ಬ್ಲ್ಯಾಕ್ ಮೇಲ್, ಸುಲಿಗೆ ಖಾಸಗಿ ವಿಡಿಯೋವುಳ್ಳ ಮೆಮರಿ ಕಾರ್ಡ್‌ಗಾಗಿ ಲಕ್ಷಾಂತರ ರೂ. ವಸೂಲಿ ಮಾಡಿ ನಂತರ ಮತ್ತೇ ಬೇಡಿಕೆ ಇಟ್ಟಿದ್ದಾಗ ಇದರಿಂದ ಬೇಸತ್ತ ವೈಧ್ಯರೊಬ್ಬರು ಈಗ ಪೊಲೀಸ್ ಠಾಣೆ ಮೆಟ್ಟಿಲೆರಿದ್ದಾರೆ.ಎಸ್ ಹನಿಟ್ರ್ಯಾಪ್ ಗೆ ಒಳಗಾಗಿದ್ದ ಡಾ.ಪ್ರಕಾಶ್ ಬಾಬು ಎಂಬವರಿಗೆ 1 ಕೋಟಿ ರೂ ಹಣದ ಬೇಡಿಕೆ ಇಟ್ಟಿದ್ದರು.
ಡಾ ಪ್ರಕಾಶ್ ಬಾಬು ಮೈಸೂರಿನ ಹೆಸರಾಂತ ವೈಧ್ಯ ಮತ್ತು ಬಿಜೆಪಿ ಪಕ್ಷದಲ್ಲಿ ಡಾ.ಪ್ರಕಾಶ್ ಬಾಬುರಾವ್. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರಾಗಿದ್ದ ಪ್ರಕಾಶ್ ಬಾಬುರಾವ್ ಪಕ್ಷದ ಮುಖಂಡರಾಗಿದ್ದು ಪಿರಿಯಾಪಟ್ಟಣದಲ್ಲಿ ಕ್ಲೀನಿಕ್ ಇಟ್ಟುಕೊಂಡಿದ್ದಾರೆ.ಈ ವೈಧ್ಯರಿಗೆ ಹನಿಟ್ಯಾಪ್ ಮಾಡಿ ನಂತರ ಖಾಸಗಿ ವಿಡಿಯೋವನ್ನು ಮುಂದಿಟ್ಟುಕೊಂಡು ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ನವೀನ್. ಜನವರಿಯಿಂದ ಅಕ್ಟೋಬರ್ ವರೆಗೆ 31.30 ಲಕ್ಷ ರೂಪಾಯಿನ್ನು ವೈಧ್ಯರು ನೀಡಿದ್ದಾರೆ. ಆಸ್ತಿ ಮಾರಾಟ ಮಾಡಿ 27 ಲಕ್ಷ ರೂ. ನೀಡಿದರೂ ಮೆಮರಿ ಚಿಪ್ ಹಿಂದಿರುಗಿಸದ ಆರೋಪಿಗಳು.ಮತ್ತೇ ಹಣಕ್ಕೇ ಬೇಡಿಕೆ ಇಟ್ಟಿದ್ದಾರಂತೆ ಇದರಿಂದ ಬೇಸತ್ತ ವೈಧ್ಯ ಕೊನೆಗೆ ಅಂತಿಮವಾಗಿ ಮೈಸೂರಿನ ಕುವೆಂಪುನಗರ ಠಾಣೆಗೆ ಪ್ರಕರಣ ದಾಖಲು ಮಾಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕುವೆಂಪು ಪೊಲೀಸರು ಕೊನೆಗೂ
27 ಲಕ್ಷ ರೂಪಾಯಿ ನೀಡಿದ್ರು ಮತ್ತೇ ಬಿಡದ ಖತರ್ನಾಕ್ ಟೀಮ್ ಮತ್ತೇ ಹಣಕ್ಕೇ ಬೇಡಿಕೆ ಇಟ್ಟಿದ್ದಾರೆ. ಮವಿಚಾರದಲ್ಲಿ ಇವರಿಗೆ ಬ್ಲಾಕ್ ಮಾಡಿದ್ದ ಹಣ ನೀಡದಿದ್ದರೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದರು. ಈ ಹಿನ್ನೆಲೆಯಲ್ಲಿ ಡಾ.ಪ್ರಕಾಶ್ ಮೈಸೂರು ಕುವೆಂಪು ನಗರ ಠಾಣೆಗೆ ದೂರು ನೀಡಿದ್ದರು. ಪ್ರಕಾಶ್ ದೂರಿನ ಆಧಾರದ ಮೇಲೆ ದಾಳಿ ನಡೆಸಿರುವ ಪೊಲೀಸರು ನವೀನ್, ಶಿವರಾಜು, ಹರೀಶ್, ವಿಜಿ ಹಾಗೂ ಹುಣಸೂರಿನ ಯುವತಿ ಅನಿತಾರನ್ನು ಬಂಧಿಸಿದ್ದಾರೆ.ಇವರೆಲ್ಲರೂ ಸೇರಿಕೊಂಡು ಪಿರಿಯಾಪಟ್ಟಣದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದರು. ಸಧ್ಯ ವೈಧ್ಯರ ದೂರಿನ ಆಧಾರದ ಮೇಲೆ ಹನಿಟ್ರ್ಯಾಪ್ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಮೈಸೂರಿನ ಕುವೆಂಪು ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಐವರನ್ನು ಬಂಧಿಸಿದ್ದಾರೆ.
ಇನ್ನೂ ಪ್ರಕರಣದ ಪ್ರಮುಖ ಆರೋಪಿ ನೇರಳಕುಪ್ಪೆ ನವೀನ್ ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಆಪ್ತ ಹಾಗೂ ಬಿಜೆಪಿ ಮುಖಂಡನಾಗಿದ್ದು ಮೊಬೈಲ್ ಫೋನ್‌ನಲ್ಲಿದ್ದ ಮೆಮರಿ ಚಿಪ್ ಕಳವು ಮಾಡಿ ವೈಧ್ಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರಂತೆ ಇವರಿಂದಲೇ ಅದೇ ಪಕ್ಷದ ಮುಖಂಡರಿಗೆ ಬ್ಲಾಕ್ ಆಗಿದ್ದು ದುರಂತವೇ ಸರಿ. ಸಧ್ಯ ಪೊಲೀಸರು ಈ ಮಹಾಶಯನ ಬಂಧನಕ್ಕೇ ಜಾಲವನ್ನು ಬೀಸಿದ್ದಾರೆ.
.