ಮೈಸೂರು –
ರೊಚ್ಚಿಗೆದ್ದ ಸಾರ್ವಜನಿಕರಿಂದ ರಸ್ತೆ ಮಧ್ಯದಲ್ಲಿಯೇ ಸಂಚಾರಿ ಪೊಲೀಸರಿಗೆ ಹೆಲ್ಮೇಟ್ ನಿಂದ ಹಿಗ್ಗಾ ಮುಗ್ಗಾ ಥಳಿತ, ಸಾಲದಂತೆ ಪೊಲೀಸ್ ವಾಹನ ಉರುಳಿಸಿ ಜಖಂ ಮಾಡಿ ಆಕ್ರೋಶ,ಕೈಮೀರಿದ ಪರಸ್ಥಿತಿ ಅಸಹಾಯಕರಾಗಿ ಸಾರ್ವಜನಿಕರಿಂದ ಹೊಡೆತ ತಿಂದು ಇಂಗು ಮಂಗನಂಥಾಗಿ ನಿಂತು ಕೊಂಡ ಸಂಚಾರಿ ಪೊಲೀಸ್ ಸಿಬ್ಬಂದಿ.

ಹೌದು ಇಂಥಹದೊಂದು ಚಿತ್ರಣ ಪರಸ್ಥಿತಿ ಕಂಡು ಬಂದಿದ್ದು ಮೈಸೂರಿನಲ್ಲಿ.ನಗರದಲ್ಲಿ ಸಂಚಾರ ಪೊಲೀಸರು ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ಸಂಭವಿಸಿ ಬೈಕ್ ಸವಾರನೊಬ್ಬ ಸಾವಿಗೀಡಾಗಿದ್ದಾನೆ. ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೇರೆ ವಾಹನಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಮೈಸೂರಿನ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

ರಿಂಗ್ ರಸ್ತೆಯಲ್ಲಿ ಬೈಕ್ ಸವಾರನನ್ನು ತಪಾಸಣೆ ನಡೆಸಲು ಮುಂದಾದ ಪೊಲೀಸರು ಇವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಕೊನೆಗೆ ಆಯತಪ್ಪಿ ಕೆಳಕ್ಕೆ ಬಿದ್ದು ಸವಾರನಿಗೆ ಹಿಂಬದಿ ಯಿಂದ ಬಂದ ವ್ಯಾನ್ ಡಿಕ್ಕಿಯಾಗುತ್ತಿ ದ್ದಂತೆ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರ ವಿರುದ್ಧ ರೊಚ್ಚಿಗೆದ್ದು ಸಂಚಾರಿ ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಥಳಿಸಿದರು.ಅಲ್ಲದೇ ಗರುಡ ವಾಹನ ಉರುಳಿಸಿ ಜಖಂಗೊಳಿಸಿದರು ಜೊತೆಗೆ ಮೂವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು.

ಹೆಲ್ಮೇಟ್ ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಪೊಲೀಸರ ಮೇಲೆ ಸಾರ್ವಜನಿಕರು ಅಟ್ಯಾಕ್ ಮಾಡಿದರು. ರಸ್ತೆ ತುಂಬೆಲ್ಲಾ ಓಡಾಡಿಸಿ ಮನ ಬಂದಂತೆ ಥಳಿಸಿದರು. ಅಲ್ಲದೇ ಪೊಲೀಸ್ ವಾಹನವನ್ನು ಸಂಪೂರ್ಣವಾಗಿ ಜಖಂ ಮಾಡಿದರು.

ಇದೇಲ್ಲವನ್ನು ನೋಡುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಕಂಡು ಬಂದಿತು.ಸಿವಿಲ್ ಇಂಜಿನಿಯರ್ ದೇವರಾಜು(46) ಮೃತರಾಗಿದ್ದಕ್ಕೆ ಇಷ್ಟೊಂದು ರಾದ್ದಾಂತ ನಡೆಯಿತು.ಎಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿದ್ದ ದೇವರಾಜು.ಹೆಲ್ಮೆಟ್ ಧರಿಸಿದ್ದರೂ ವಾಹನ ಅಡ್ಡಗಟ್ಟಿದ್ದ ಮೈಸೂರು ಪೊಲೀಸರು ಹಳೆಯ ಕೇಸ್ ದಂಡ ವಸೂಲಿಗಾಗಿ ವಾಹನ ಅಡ್ಡಗಟ್ಟುವ ಸಮಯದಲ್ಲಿ ಈ ಒಂದು ಘಟನೆ ಸಂಚಾರ ಪೊಲೀಸರು ಮತ್ತು ಪೊಲೀಸ ರನ್ನು ಕಂಡು ಗಾಬರಿಯಾಗಿದ್ದ ದೇವರಾಜು.

ಚಾಲನೆಯಲ್ಲಿದ್ದ ಬೈಕ್‌ಗೆ ಲಾಠಿ ಬೀಸಿದ ಪೊಲೀಸಪ್ಪ ಪೇದೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮತ್ತೊಂದು ವಾಹನಕ್ಕೆ ಸಿಲುಕಿದ ದೇವರಾಜು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಕೇಸ್ ಹಾಕುವುದು ನಿಷಿದ್ಧ. ಆದರೆ ನಿತ್ಯವೂ ರಿಂಗ್ ರೋಡ್‌ನಲ್ಲಿ ದಂಡ ವಸೂಲಿ ಮಾಡುತ್ತಿದ್ದಾರೆ ಪೊಲೀಸರು ಏನೇ ಆಗಲಿ ಹೀಗೆ ಆಗಿದ್ದು ನಿಜಕ್ಕೂ ಬೇಸರದ ಸಂಗತಿ