ಮೈಸೂರು –
ಮಾವನ ಮೇಲೆ ಮುನಿಸಿಕೊಂಡ ಪೊಲೀಸ್ ಪೇದೆಯ ಪತ್ನಿಯೊಬ್ಬರು ಗಂಡನಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೌದು ಇಂಥದೊಂದು ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ನೇಣು ಬಿಗಿದುಕೊಂಡು ಪೊಲೀಸಪ್ಪನ ಹೆಂಡತಿ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ ಪತ್ರವೊಂದನ್ನು ಬರೆದಿಟ್ಟಿದ್ದಾರೆ.ಮೈಸೂರು ನಗರದ ಹೆಬ್ಬಾಳದ ಪೊಲೀಸರು ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.

ಐದು ತಿಂಗಳ ಹಿಂದೆಯಷ್ಟೇ ಮೋಹನ್ ಅವರನ್ನು ಮದುವೆಯಾಗಿದ್ದರು ಸಧ್ಯ3 ತಿಂಗಳ ಗರ್ಭಿಣಿಯಾಗಿದ್ದಾರೆ ಚೈತ್ರಾ.ಮೇಟಗಳ್ಳಿ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಮೋಹನ ಆರಾಧ್ಯ ಪತ್ನಿಯಾಗಿದ್ದಾರೆ.ಮದುವೆಯಾದ ದಿನದಿಂದ ಮಾವ ಸರಿಯಾಗಿ ಮಾತನಾಡಿಸಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ.

ನನ್ನ ಜೊತೆಗೆ ತಂದೆ ಹಾಗೂ ತಾಯಿಗೂ ಮಾವನವರಿಂದ ಗೌರವ ಸಿಕ್ಕಿಲ್ಲ.ತವರು ಮನೆಗೆ ಹೋಗುವಾಗ ವೇಳೆ ಕೂಡ ಅವಮಾನ ಮಾಡಿದ್ದಾರೆ.ನಿಮ್ಮ ಅಪ್ಪನೇ ನನಗೆ ಹೀಗೆ ಆಗಲು ಕಾರಣ.ನಿಮ್ಮ ಅಪ್ಪನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದಿದ್ದರಂತೆ.
ಆದರೆ ನಮ್ಮ ಮನೆಯವರ ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ.ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಆವರೇ ಕಾರಣ.ಮಾವ ಮಲ್ಲಾರಾಧ್ಯ ಮೇಲೆ ಆರೋಪಿಸಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಚೈತ್ರಾ.
ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.