ಬೆಂಗಳೂರು –
ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ನವ ಮನ್ವಂತರದ ಮುಂದಣ ಹೆಜ್ಜೆ’ ಶೀರ್ಷಿಕೆಯಡಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸಿದ್ದು ಈ ಬಾರಿ ಕೂಡ ನೌಕರರು ನನ್ನ ಕೈ ಹಿಡಿಯಲಿದ್ದಾರೆ. ನನ್ನನ್ನು ಸೋಲಿಸಲು ರಾಜಕೀಯ ಷಡ್ಯಂತ್ರ ನಡೆದಿದೆ ಎಂದರು
ಸರಕಾರಿ ನೌಕರರು ಈ ಕುತಂತ್ರಗಳಿಗೆ ಚುನಾವಣ ಕಣದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಹಳೇ ಮೈಸೂರು ಭಾಗದಲ್ಲಿ ಜನಪ್ರತಿನಿಧಿಯೊಬ್ಬರು ನನ್ನ ವಿರುದ್ಧ ಪ್ರಚಾರ ನಡೆಸಿದ್ದಾರೆ ಸಂಘದ ಚುನಾವಣಾ ಇತಿಹಾಸ ದಲ್ಲಿ ಎಂದೂ ಈ ರೀತಿ ನಡೆದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರಿ ನೌಕರರಿಗೆ ನೀಡಿದ್ದ ಶೇ.95ರಷ್ಟು ಬೇಡಿಕೆ ಗಳನ್ನು ಈಡೇರಿಸಿದ್ದೇನೆ ಸದರ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ರಾಜ್ಯ 7ನೇ ವೇತನ ಆಯೋಗವನ್ನು ಅವಧಿಯೊಳಗೆ ರಚಿಸಲು ಯಶಸ್ವಿ ಯಾಗಿದ್ದೇನೆ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುವ ಮೂಲಕ ಶೇ.17ರಷ್ಟು ಮಧ್ಯಂತರ ಪರಿಹಾ ರದ ಭತ್ಯೆ ಪಡೆಯುವಲ್ಲಿ ಸಫಲನಾಗಿದ್ದೇನೆ ಎಂದರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..