ಬೆಂಗಳೂರು –
ಹೌದು ನಾಳೆಯಿಂದ ನಡೆಯಬೇಕಾಗಿದ್ದ ಸಿಆರ್ ಪಿ ಮತ್ತು ಬಿಆರ್ ಪಿ ಅಧಿಕಾರಿಗಳ ಕೌನ್ಸಲಿಂಗ್ ನ್ನು ಏಕಾಎಕಿಯಾಗಿ ಮುಂದೂಡಿಕೆ ಮಾಡಲಾಗಿದೆ.ಹೌದು ಕೌನ್ಸಲಿಂಗ್ ಗೆ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು ನಾಳೆ ಈ ಒಂದು ಪ್ರಕ್ರಿಯೆ ನಡೆಯಬೇಕಾಗಿತ್ತು ಆದರೆ ತಾಂತ್ರಿಕ ಕಾಣಗಳಿಂದಾಗಿ ಈ ಒಂದು ಕೌನ್ಸಲಿಂಗ್ ನ್ನು ಮುಂದೂಡಿಕೆ ಮಾಡಲಾಗಿದೆ.
ಈ ಹಿಂದೆ ಆಗಿರುವ ಅಪ್ಡೇಟ್ ನಿಂದಾಗಿ ಇನ್ನೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಅಪ್ಡೇಟ್ ಮಾಡಿ ನಂತರ ಕೌನ್ಸಲಿಂಗ್ ಮಾಡುವಂತೆ ರಾಜ್ಯದ ಶಿಕ್ಷಕರ ಧ್ವನಿಯಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಯವರು ಇಲಾಖೆಯ ಆಯುಕ್ತರಿಗೆ ಆಗ್ರಹವನ್ನು ಮಾಡಿದ್ದರು
ಹೀಗಾಗಿ ಖಾಲಿ ಇರುವ ಹುದ್ದಿಗಳು ಅಪ್ಡೇಟ್ ಆಗದ ಕಾರಣಕ್ಕಾಗಿ ನಾಳೆ ನಡೆಯಬೇಕಾಗಿದ್ದ ಈ ಒಂದು ಪ್ರಕ್ರಿಯೆಯನ್ನು ಮುಂದೂ ಡಿಕೆ ಮಾಡಲಾಗಿದ್ದು ಶೀಘ್ರದಲ್ಲೇ ಹೊಸ ವೇಳಾಪಟ್ಟಿ ಬರುತ್ತದೆ ಈ ಕುರಿತಂತೆ ಮಾಹಿತಿಯನ್ನು ಸಂಘಟನೆ ಯಿಂದ ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸುದ್ದಿ ಸಂತೆಗೆ ಮಾಹಿತಿ ನೀಡಿದ್ದಾರೆ.