ನವಲಗುಂದ –
ಅಧಿಕಾರ ಶಾಶ್ವತವಲ್ಲ ನಾವು ಅಧಿಕಾರದಲ್ಲಿದ್ದಾಗ ಮಾಡುವ ಕೆಲಸಗಳು ಶಾಶ್ವತ ಎನ್ನುತ್ತಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸದಲ್ಲಿ ತೊಡಗಿದ್ದಾರೆ ಶಾಸಕ NHK – ಜನಪರ ಕಾಳಜಿಯ ಕೆಲಸಗಳನ್ನು ಮಾಡುತ್ತಾ ಸೇವೆಯಲ್ಲಿ ತೊಡಗಿದ್ದಾರೆ ರೈತ ನಾಯಕ N H ಕೋನರಡ್ಡಿಯವರು ಹೌದು
ರೈತ ಬಂಡಾಯದ ನೆಲ ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಯವರು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಅಧಿಕಾರಕ್ಕೆ ಬಂದ ಮೇಲಂತೂ ಕ್ಷೇತ್ರದಲ್ಲಿನ ಚಕ್ಕಡಿ ರಸ್ತೆಗಳಿಗೆ ಹೆಚ್ಚು ಒತ್ತು ಕೊಟ್ಟು ಅಭಿವೃದ್ದಿ ಮಾಡುತ್ತಿದ್ದು ದೇಶದ ಬೆನ್ನೇಲೆಬಾಗಿರುವ ರೈತರ ಈ ಒಂದು ಚಕ್ಕಡಿ ರಸ್ತೆಗಳನ್ನು ಬಿಡುವಿಲ್ಲದೆ ಹುಡುಕಾಡಿ ಹುಡುಕಾಡಿ ಹೊಸ ಟಚ್ ನೀಡುತ್ತಿ ದ್ದಾರೆ.
ಹೌದು ಅಧಿಕಾರ ಶಾಶ್ವತವಲ್ಲ ನಾವು ಅಧಿಕಾರ ದಲ್ಲಿದ್ದಾಗ ಮಾಡುವ ಕೆಲಸಗಳು ಶಾಶ್ವತ ಎನ್ನುತ್ತಾ ಕ್ಷೇತ್ರದಲ್ಲಿನ ಚಕ್ಕಡಿ ರಸ್ತೆಗಳಿಗೆ ಹೊಸ ರೂಪ ನೀಡುತ್ತಿದ್ದಾರೆ.ಹೌದು ಅಧಿಕಾರ ಶಾಶ್ವತ ಅಲ್ಲ ನಾವು ಅಧಿಕಾರದಲ್ಲಿರುವಾಗ ಮಾಡುವ ಜನಪರ ಕಾಳಜಿಯ ಕೆಲಸಗಳು ಶಾಶ್ವತ. ನನ್ನ ಕ್ಷೇತ್ರದ ಜನರ ಹಿತಕ್ಕಾಗಿ ಹಾಗೂ ರೈತರೂ ತಮ್ಮ ಕೃಷಿ ಚಟುವಟಿಕೆ ಮಾಡಲು ಹೊಲಗಳಿಗೆ ತೆರಳಲು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಚಕ್ಕಡಿ ರಸ್ತೆಗಳ ಕಾಮಗಾರಿಯನ್ನು ಕೈಗೊಂಡಿದ್ದಾರೆ
ಹೀಗಾಗಿ ನವಲಗುಂದ ವಿಧಾನಸಭಾ ಮತ ಕ್ಷೇತ್ರದ ಮನಕವಾಡ ಗ್ರಾಮದಲ್ಲಿ ನಡೆಯುತ್ತಿ ರುವ ಚಕ್ಕಡಿ ರಸ್ತೆಯ ಕಾಮಗಾರಿಯನ್ನು ಇಂದು ಶಾಸಕರು ವೀಕ್ಷಣೆ ಮಾಡಿದರು.ಶಾಸಕರು ಚಕ್ಕಡಿ ರಸ್ತೆಗಳನ್ನು ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ರೈತರು ಪ್ರೀತಿಯಿಂದ ಶಾಸಕರನ್ನು ಸ್ವಾಗತಿಸಿ ರಸ್ತೆ ಕಾಮಗಾರಿಗೆ ಖುಷಿಯಿಂದ ಮೆಚ್ಚುಗೆ ವ್ಯಕ್ತಪಡಿ ಸಿದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ……