ಧಾರವಾಡ –
ಪ್ರಹ್ಲಾದ್ ಜೋಶಿಯವರಿಗೆ ಶಕ್ತಿ ತುಂಬಿದ ಶಕ್ತಿ ಹಿರೇಮಠ ಮತ್ತು ಟೀಮ್ – ವಾರ್ಡ್ 7 ರಲ್ಲಿ ಮನೆ ಮನೆಗೆ ತೆರಳಿ ದೇಶಕ್ಕೆ ಮೋದಿ ಧಾರವಾಡಗೆ ಜೋಶಿ ಎನ್ನುತ್ತಾ ಪ್ರಚಾರ ಮಾಡುತ್ತಾ ಶಕ್ತಿ ತುಂಬಿದ ಶಕ್ತಿ ಟೀಮ್
ಲೋಕಸಭಾ ಚುನಾವಣೆಯ ಅಖಾಡ ರಂಗೇರು ತ್ತಿದ್ದು ಈಗಾಗಲೇ ನಾಮಪತ್ರ ಸಲ್ಲಿಸಿರುವ ಎಲ್ಲಾ ಪಕ್ಷಗಳ ನಾಯಕರು ಅಭ್ಯರ್ಥಿಗಳು ಕಾಲಿಗೆ ಚಕ್ರವನ್ನು ಕಟ್ಟಿಕೊಂಡುವಂತೆ ಪ್ರಚಾರವನ್ನು ಮಾಡುತ್ತಿದ್ದಾರೆ.ಇನ್ನೂ ಇತ್ತ ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಕೂಡಾ ಚುನಾವಣೆಯ ಕಾವು ಜೋರಾಗಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಗೆಲುವಿಗೆ ಜಿಲ್ಲೆಯ ಯುವ ಮೋರ್ಚಾ ಪಣತೊಟ್ಟಿದ್ದು
ಧಾರವಾಡ ನಗರ ಘಟಕ-71 ಘಟಕದ ಅಧ್ಯಕ್ಷ ಶಕ್ತಿ ಹಿರೇಮಠ ಬಿಡುವಿಲ್ಲದೇ ಸುತ್ತಾಡುತ್ತಿದ್ದು ಪ್ರಹ್ಲಾದ್ ಜೋಶಿಯವರಿಗೆ ಶಕ್ತಿ ತುಂಬಿದ್ದಾರೆ. ಹೌದು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕಾರದಲ್ಲಿ ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಈ ಭಾಗದಲ್ಲಿ ಮಾಡಿರುವ ಕೆಲಸ ಕಾರ್ಯಗಳನ್ನು ಮನೆ ಮನೆಗೆ ತಿಳಿಸುತ್ತಾ ಕಾರ್ಯಸಾಧನೆಗಳ ಕೈಪಿಡಿ ಪುಸ್ತಕವನ್ನು ಧಾರವಾಡ ವಾರ್ಡ ಸಂಖ್ಯೆ 7ರ ಬೂತ್ ನಂಬರ್ 27 ರಲ್ಲಿ ಮನೆ ಮನೆಗೆ ಕಾರ್ಯಕರ್ತರೊಂದಿಗೆ ತೆರಳಿ ನೀಡುತ್ತಾ ಮತಯಾಚನೆಯನ್ನು ಮಾಡಿದರು
ದೇಶಕ್ಕೆ ಮೋದಿಜಿ ಧಾರವಾಡಕ್ಕೆ ಜೋಶಿಯವ ರನ್ನು ಮತ್ತೊಮ್ಮೆ ಆಯ್ಕೆಮಾಡಲು ಮನವಿ ಮಾಡಿದರು ಶಕ್ತಿ ಹಿರೇಮಠ.ಇದರೊಂದಿಗೆ ಐದನೇಯ ಬಾರಿಗೆ ಸ್ಪರ್ಧೆ ಮಾಡಿರುವ ಪ್ರಹ್ಲಾದ್ ಜೋಶಿಯವರಿಗೆ ಶಕ್ತಿ ಹಿರೇಮಠ ಮತ್ತು ಟೀಮ್ ಶಕ್ತಿ ತುಂಬಿದ್ದಾರೆ.ಶಕ್ತಿ ಹಿರೇಮಠ ಅವರೊಂದಿಗೆ ಈ ಸಂದರ್ಭದಲ್ಲಿ ಬೂತ್ ನಂ 27ರ ಅಧ್ಯಕ್ಷರು ಹಾಗು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..