ಬೆಂಗಳೂರು –
ಶಿಕ್ಷಣ ಇಲಾಖೆ’ಯಿಂದ ‘ಪ್ರತಿಭಾ ಕಾರಂಜಿ ಸ್ಪರ್ಧೆ’ಗೆ ‘ತಾತ್ಕಾಲಿಕ ವೇಳಾಪಟ್ಟಿ ಯನ್ನು’ ಪ್ರಕಟ ಮಾಡಲಾಗಿದೆ ಹೌದು 2002ನೇ ಸಾಲಿನಿಂದ ಪ್ರತಿಭಾ ಕಾರಂಜಿಯನ್ನು ಶಾಲೆಗಳಲ್ಲಿ ಹಮ್ಮಿ ಕೊಳ್ಳಲಾಗುತ್ತಿದೆ. ಇದೀಗ 2023-24ನೇ ಸಾಲಿನ ಪ್ರತಿಭಾಕಾರಂಜಿ, ಕಲೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕ ವೇಳಾಪಟ್ಟಿ ಯನ್ನು ಪ್ರಕಟಿಸಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯು ಕ್ತರು ಸುತ್ತೋಲೆ ಹೊರಡಿಸಿದ್ದಾರೆ. 2023-24ನೇ ಸಾಲಿನಲ್ಲಿ ರಾಜ್ಯವಲಯದ ಮುಂದುವರೆದ ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ಅಂದೆ 1 ರಿಂದ 10ನೇ ತರಗತಿಯ ವರಿಗೆ ಏಕ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳನ್ನು ಮತ್ತು 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ, ಕಲೋತ್ಸವ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂ ದಿಗೆ ಸ್ಥಳೀಯ ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಯೋಜಿಸಲು ಸೂಚಿಸಿದ್ದಾರೆ.
1 ರಿಂದ 4ನೇ ತರಗತಿಯವರಿಗೆ ವೈಯಕ್ತಿಕ ಸ್ಪರ್ಧೆಗಳು
5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ
ಕಂಠಪಾಠ
ಧಾರ್ಮಿಕ ಪಠಣ
ಲಘು ಸಂಗೀತ
ಛದ್ಮ ವೇಷ
ಕಥೆ ಹೇಳುವುದು
ಚಿತ್ರಕಲೆ
ಅಭಿನಯ ಗೀತೆ
ಕ್ಲೇ ಮಾಡಲಿಂಗ್
ಭಕ್ತಿ ಗೀತೆ
ಆಶು ಭಾಷಣ
ಕವನ, ಪದ್ಯ ವಾಚನ
ಮಿಮಿಕ್ರಿ
8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ
ಭಾಷಣ
ಧಾರ್ಮಿಕ ಪಠಣ
ಜಾನಪದ ಗೀತೆ
ಭಾವಗೀತೆ
ಭರತ ನಾಟ್ಯ
ಛದ್ಮ ವೇಷ
ಚಿತ್ರಕರೆ
ಮಿಮಿಕ್ರಿ
ಚರ್ಚಾ ಸ್ಪರ್ಧೆ
ರಂಗೋಲಿ
ಗಝಲ್
ಕವನ, ಪದ್ಯವಾಚನ
ಆಶುಭಾಷಣ
ಹೀಗಿದೆ ಪ್ರತಿಭಾ ಕಾರಂಜಿ, ಕಲೋತ್ಸವದ ತಾತ್ಕಾಲಿಕ ವೇಳಾಪಟ್ಟಿ
ಶಾಲಾ ಹಂತ – ಜುಲೈ 2023ರೊಳಗೆ
ಕ್ಲಸ್ಟರ್ ಹಂತ – ಆಗಸ್ಟ್ 2023ರೊಳಗೆ
ಬ್ಲಾಕ್ ಹಂತ -ಸೆಪ್ಟಂಬರ್ 2023ರೊಳಗೆ
ಜಿಲ್ಲಾ ಹಂತ – ನವೆಂಬರ್ 2023ರೊಳಗೆ
ರಾಜ್ಯ ಹಂತ – ಡಿಸೆಂಬರ್ 2023ರೊಳಗೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..