ಮತ್ತೊಂದು ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣ ಸಿದ್ದತೆ – ಸೆಪ್ಟಂಬರ್ 19 ರಿಂದ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮುಖಂಡತ್ವದಲ್ಲಿ ನಡೆಯಲಿದೆ ಪಾದಯಾತ್ರೆ…..ಹುಬ್ಬಳ್ಳಿಯಲ್ಲಿ ನಡೆಯಿತು ಪೂರ್ವಭಾವಿ ಸಭೆ…..

Suddi Sante Desk
ಮತ್ತೊಂದು ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣ ಸಿದ್ದತೆ –  ಸೆಪ್ಟಂಬರ್ 19 ರಿಂದ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮುಖಂಡತ್ವದಲ್ಲಿ ನಡೆಯಲಿದೆ ಪಾದಯಾತ್ರೆ…..ಹುಬ್ಬಳ್ಳಿಯಲ್ಲಿ ನಡೆಯಿತು ಪೂರ್ವಭಾವಿ ಸಭೆ…..

ಹುಬ್ಬಳ್ಳಿ

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮುಖಂಡತ್ವದಲ್ಲಿ ರಾಜ್ಯ ಸಮಿತಿ ಹಾಗೂ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ವಿಭಾಗದ ಪದಾಧಿಕಾ ರಿಗಳ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 19 ರಂದು ಪಾದಯಾತ್ರೆ ನಡೆಯಲಿದೆ

ಕಳಸಾ ಬಂಡೂರಿ ಮಹಾದಾಯಿ ನಾಲೆಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ 19/09/2024 ರಿಂದ 20/09/2024 ರವರೆಗೆ ನರಗುಂದದಿಂದ ಗದಗ ವರಗೆ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಹೋರಾಟದ ಪೂರ್ವಭಾವಿ ಸಭೆಯನ್ನು ಹುಬ್ಬಳ್ಳಿಯ  ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಲಾಯಿತು.

ಈ ಪೂರ್ವಭಾವಿ ಸಭೆಯಲ್ಲಿ ಹೋರಾಟದ ರೂಪ ರೇಷಗಳನ್ನು ಚರ್ಚಿಸಲಾಯಿತು. ಈ ಹೋರಾಟಕ್ಕೆ ಧಾರವಾಡ, ಗದಗ ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಸುಮಾರು 1,500ಕ್ಕಿಂತಲೂ ಹೆಚ್ಚು ಜನ ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು ಕೆಲ ಮಹತ್ವದ ನಿರ್ಧಾರ ಗಳನ್ನು ಕೈಗೊಳ್ಳಲಾಯಿತು.

19/ 9/ 2024 ರಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಡದ ರಾಜ್ಯಾಧ್ಯಕ್ಷರಾದ  ಪ್ರವೀಣ್ ಕುಮಾರ್ ಶೆಟ್ಟಿ ಅವರಿಂದ ಹಾಗೂ ರಾಜ್ಯ ಪದಾಧಿಕಾ ರಿಗಳು ಗಳಿಂದ ಹುಬ್ಬಳ್ಳಿಯ ರಾಣಿ ಚೆನ್ನಮ್ಮಾಜಿ, ವೀರ ಸಂಗೊಳ್ಳಿ ರಾಯಣ್ಣ, ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಸುಮಾರು 100 ಜನ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯ ಕರ್ತರು ಭಾಗವಹಿಸಲಿದ್ದಾರೆ, ನಂತರ 50 ಆಟೋ, 100 ಬೈಕುಗಳು, 25 ಇತರೆ ವಾಹನಗಳ ರ್ಯಾಲಿ ಮಾಡಿಕೊಂಡು ನರಗುಂದದ ಪಾದಯಾತ್ರೆಯ ಹೋರಾಟ ಸ್ಥಳಕ್ಕೆ ಹೋಗುವುದಾಗಿ ತೀರ್ಮಾನಿಸ ಲಾಯಿತು.

ತದನಂತರ ನರಗುಂದದಿಂದ ಎರಡು ದಿನಗಳ ಪಾದಯಾತ್ರೆ ಆರಂಭಿಸಿ ಗದಗ ಜಿಲ್ಲೆ ಹಾಗೂ ತಾಲೂಕಾ ಹಾಗೂ ಗ್ರಾಮಗಯಾದ್ಯಂತ ಹೋರಾಟದ ಜಾಗೃತಿ ಮೂಡಿಸಿ ಅಂದಾಜು 48 ಕಿ.ಮೀಗಳ ಪಾದಯಾತ್ರೆ ಮೂಲಕ ಗದಗಿನ ಜಿಲ್ಲಾಧಿಕಾರಿಗಳು ಹಾಗೂ ಸಚಿವ ರಾದ ಎಚ್ ಕೆ ಪಾಟೀಲ ಅವರಿಗೆ ಮೇಲ್ಕಂಡ ವಿಷಯ ವಾಗಿ ಮನವಿ ಕೊಡುವ ಯೋಜನೆ ನೀಡಲಾಯಿತು.

ಈ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ದಾವಲಸಾಬ ಮುಳಗುಂದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಪಾಪು ಧಾರೆ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಲೂತಿಮಠ ಗದಗ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಬೇಲೂರ

ಹಾವೇರಿ ಜಿಲ್ಲಾ ಅಧ್ಯಕ್ಷರಾದ ಹನುಮಂತ ಭೋವಿ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು, ಕುಂದಗೋಳ ಧಾರವಾಡ ಕಲಘಟಗಿ ಬ್ಯಾಡಗಿ ಹಾವೇರಿ ಹಿರೇಕೆರೂರ ಮುಧೋಳ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಗದಗ್ ಮತ್ತು ಧಾರವಾಡ ಬಾಗಲಕೋಟೆ ಹಾವೇರಿ ಬೆಳಗಾವಿ ಜಿಲ್ಲೆಯ ಪದಾಧಿಕಾರಿಗಳು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.