ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಆಟೋ ಚಾಲಕರಿಗೆ ಪಾಠ ಮಾಡಿದ ಪೂರ್ವ ಸಂಚಾರಿ ಪೊಲೀಸರು – ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕರ್ತವ್ಯದ ಜೊತೆ Psi ಪುನೀತ್ ಕುಮಾರ್ ನೇತ್ರತ್ವದಲ್ಲಿ ಸಿಬ್ಬಂದಿಗಳಿಂದ ನಡೆಯಿತು ಬೋಧನೆ
ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಹುಬ್ಬಳ್ಳಿಯಲ್ಲಿ ಪೂರ್ವ ಸಂಚಾರಿ ಪೊಲೀಸರು ಆಟೋ ಚಾಲಕರಿಗೆ ಪಾಠ ಬೋಧನೆಯನ್ನು ಮಾಡಿದ್ದಾರೆ.ಹೌದು ರಸ್ತೆ ನಿಮಯಗಳು, ಸುರ ಕ್ಷತಾ ಕ್ರಮಗಳು,ಸಮವಸ್ತ್ರಗಳ ಹಾಕಿಕೊಳ್ಳೊದು ಸೇರಿದಂತೆ ಸಾರ್ವಜನಿಕರೊಂದಿಗೆ ವರ್ತನೆ ಹೇಗೆ ಇರಬೇಕು ಈ ಎಲ್ಲಾ ವಿಚಾರಗಳ ಕುರಿತಂತೆ ತಿಳು ವಳಿಕೆಯನ್ನು ನೀಡಲಾಯಿತು.
ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಪೊಲೀಸ್ ಇನ್ಸ್ಪೇಕ್ಟರ್ ಐವಾನ್ ಡಿಸೋಜಾ ಇವರ ಮಾರ್ಗದರ್ಶನದಲ್ಲಿ ಪಿಎಸ್ಐ ಪುನೀತ್ ಕುಮಾರ ಇವರ ನೇತ್ರತ್ವದಲ್ಲಿ ಈ ಒಂದು ಜಾಗೃತಿ ಕಾರ್ಯಕ್ರಮ ನಡೆಯಿತು.ನಗರದ ಚೆನ್ನಮ್ಮ ವೃತ್ತದಲ್ಲಿ ನೂರಾರು ಆಟೋ ಚಾಲಕರಿಗೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಕುಮಾರ್ ನೇತ್ರತ್ವದಲ್ಲಿ ಆಟೋ ಚಾಲಕರಿಗೆ ತಿಳಿವಳಿಕೆಯನ್ನು ಮೂಡಿಸಿ ಜಾಗೃತಿಯನ್ನು ಮೂಡಿಸಲಾಯಿತು.
ಒಂದು ಗಂಟೆಗಳ ಕಾಲ ರಸ್ತೆ ನಿಮಯಗಳು ಅನುಸರಿಸಬೇಕಾದ ಕೆಲವೊಂದಿಷ್ಟು ಸೂಚನೆ ಗಳು ಸಮಾಜದಲ್ಲಿ ಆಟೋ ಚಾಲಕರ ಪಾತ್ರ ಏನು ಜವಾಬ್ದಾರಿ ಏನು ಈ ಎಲ್ಲಾ ವಿಚಾರಗಳ ಕುರಿತಂತೆ ಸಮಗ್ರವಾಗಿ ತಿಳಿಸಿಕೊಡಲಾಯಿತು. ಮೇಲಾಧಿಕಾರಿಗಳ ಸೂಚನೆ ಮಾರ್ಗದರ್ಶನದಲ್ಲಿ ನಡೆದ ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಪಾಠವನ್ನು ಮಾಡಿದರು
ಪೂರ್ವ ಸಂಚಾರಿ ಪೊಲೀಸರು.ಕರ್ತವ್ಯದ ನಡುವೆಯೂ ಕೂಡಾ ಮೇಲಾಧಿಕಾರಿಗಳ ಮಾರ್ಗದರ್ಶನಲ್ಲಿ Psi ಪುನೀತ್ ಕುಮಾರ್ ಮತ್ತು ಸಿಬ್ಬಂದಿ ಗಳಿಂದ ಚಾಲಕರಿಗೆ ತಿಳುವಳಿ ಕೆಯ ಪಾಠ ನಡೆಯಿತು.ರಸ್ತೆ ನಿಯಮಗಳ ಕುರಿತು ಆಟೋ ಚಾಲಕರಿಗೆ ಸಮವಸ್ತ್ರ ಧರಿಸುವ ಸೇರಿದಂತೆ ಹಲವಾರು ವಿಚಾರ ಗಳ ಬಗ್ಗೆ ಪೂರ್ವ ಸಂಚಾರ ಪೊಲೀಸ್ ಠಾಣೆ Psi ಪುನೀತ್ ಕುಮಾರ್ ಅವರೊಂದಿಗೆ ಸಂತೋಷ ಪವಾರ
ಉಳವಪ್ಪ ಚಿಟ್ಟಿ,ಬಸನಗೌಡ ಮಾಯನ್ನವರ ದಿಲ್ ಶಾದ್ ಮುಲ್ಲಾ,ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಸೇರಿದಂತೆ ಹಲ ವಾರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..