ಹುಬ್ಬಳ್ಳಿ –
BRTS ಸಮಸ್ಯೆಗಳ ಕುರಿತಂತೆ ಸಾರಿಗೆ ಸಚಿವರ ಭೇಟಿಗೆ ಸಿದ್ದತೆ – DC ಯವರ ಕಾರ್ಯವೈಖರಿ ಬಸ್ ಗಳ ದುಸ್ಥಿತಿ ಕುರಿತಂತೆ ಮಾಹಿತಿ ನೀಡಲು ಪ್ಲಾನ್
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳು ಆರಂಭಗೊಂಡು ಆರು ವರ್ಷಗಳು ಕಳೆದಿವೆ.ಸಧ್ಯ ಈ ಒಂದು ಬಸ್ ಗಳ ಪರಸ್ಥಿತಿ ಸರಿ ಯಾದ ನಿರ್ವಹಣೆ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಇಂದು ಬಸ್ ಗಳು ಎಲ್ಲೇಂದರಲ್ಲಿ ಕೈಕೊಡುತ್ತಿದ್ದು ಇದರಿಂದಾಗಿ ಚಾಲಕರು ಕೂಡಾ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ ಇನ್ನೂ ಇದು ಒಂದೆಡೆಯಾದರೆ
ಇನ್ನೂ ಇದನ್ನು ಸರಿ ಮಾಡಬೇಕಾದ ಡಿಸಿಯವರು ಇದನ್ನೇಲ್ಲವನ್ನು ಬಿಟ್ಟು ಚಾಲಕರ ಮೇಲೆ ವಿನಾಕಾರಣ ಒಂದಿಲ್ಲೊಂದು ವಿಚಾರದಲ್ಲಿ ಶಿಕ್ಷೆಯನ್ನು ನೀಡುತ್ತಿ ದ್ದಾರೆ.ಒಂದು ಕಡೆಗೆ ಪದೇ ಪದೇ ಬಿಡಿಯಾಗುತ್ತಿರುವ ಬಸ್ ಗಳು ಇನ್ನೊಂದೆಡೆ ಡಿಸಿ ಸಿದ್ದಲಿಂಗಯ್ಯ ಅವರ ಕಾರ್ಯವೈಖರಿ ಇದರಿಂದಾಗಿ ಬೇಸತ್ತಿರುವ ಚಾಲಕರು ದಯಮಾಡಿ ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಳ್ಳು ತ್ತಿದ್ದಾರೆ.
ಆದರೂ ಕೂಡಾ ಡಿಸಿಯವರು ಬಸ್ ಗಳನ್ನು ಸರಿಯಾಗಿ ವ್ಯವಸ್ಥೆ ಮಾಡದೇ ಚಾಲಕರ ಮೇಲೆ ಒಂದಿಲ್ಲೊಂದು ವಿಚಾರದಲ್ಲಿ ನೊಟೀಸ್ ನೀಡುವುದು ಮೆಮೋ ಕೊಡು ವುದು ಹೀಗೆ ಮಾಡುತ್ತಿದ್ದು ಇದೇಲ್ಲದರ ನಡುವೆ ಸಧ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರು ನಾಳೆ ಹುಬ್ಬಳ್ಳಿಗೆ ಬರುತ್ತಿದ್ದು ಸಾರಿಗೆ ಇಲಾಖೆಯ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಸಚಿವರನ್ನು ಭೇಟಿಯಾಗಲು ಸಂಘಟನೆಯೊಂದು ಮುಂದಾಗಿದೆ.
ಈ ಒಂದು ವಿಚಾರ ಕುರಿತಂತೆಯೂ ಕೂಡಾ ಮಾಧ್ಯಮ ದವರು ಸಚಿವರ ಗಮನಕ್ಕೆ ತರಲು ಮುಂದಾಗಿದ್ದಾರೆ. ಸಧ್ಯ ಚಿಗರಿ ಬಸ್ ಗಳ ಚಿತ್ರಣ ಕುರಿತಂತೆ ಡಿಸಿಯವರ ಮತ್ತು ಇನ್ನಿತರ ಅಧಿಕಾರಿಗಳ ಕಾರ್ಯವೈಖರಿಯ ಕುರಿತಂತೆ ಸಚಿವರನ್ನು ಭೇಟಿಯಾಗಿ ಸಂಪೂರ್ಣವಾದ ಮಾಹಿತಿಯನ್ನು ನೀಡಲು ಸಿದ್ದರಾಗಿದ್ದು ಕಾರ್ಯಕ್ರಮದ ಮುನ್ನ ಸಚಿವರನ್ನು ಭೇಟಿಯಾಗಲು ಈಗಾಗಲೇ ಸಮಯವನ್ನು ಕೇಳಿದ್ದು ಇದಕ್ಕೆ ಸಚಿವರು ಕೂಡಾ ಒಪ್ಪಿಗೆಯನ್ನು ನೀಡಿದ್ದು
ಚಿಗರಿ ಬಸ್ ಗಳ ವ್ಯವಸ್ಥೆ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ಈಗಾಗಲೇ ಸಂಪೂರ್ಣವಾಗಿ ಮಾಹಿತಿಯನ್ನ ಕಲೆಹಾಕಿರುವ ಸಂಘಟನೆ ಎಲ್ಲವನ್ನು ಸಚಿವರ ಮುಂದೆ ಎಳೆಎಳೆಯಾಗಿ ಬಿಚ್ಚಿಡಲಿದ್ದು ನೊಂದುಕೊಂಡಿರುವ ಚಾಲಕರ ನೆರವಿಗೆ ಈ ಒಂದು ಸಂಘಟನೆ ಬರಲಿದ್ದು ಡಿಸಿ ಸಿದ್ದಲಿಂಗಯ್ಯ ನೇತ್ರತ್ವದಲ್ಲಿ ಬಿಆರ್ ಟಿಎಸ್ ಅಧಿಕಾರಿಗಳ ಕಾರ್ಯವೈಖರಿ ಬೇಜವಾಬ್ದಾರಿಯನ್ನು
ಸಚಿವರ ಗಮನಕ್ಕೆ ತರಲು ಮುಂದಾಗಿದ್ದೇವೆ ಎಂದು ಸಂಘಟನೆಯ ಮುಖಂಡ ರಾಜ್ಯಾಧ್ಯಕ್ಷ ಪ್ರಭುಗೌಡ ರಾಂಪೂರ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಧರ ಪಾಟೀಲ ಸುದ್ದಿ ಸಂತೆ ಗೆ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..